ರಾಗಿ ಇಳುವರಿ ಕುಂಠಿತ: ಮಾರಾಟಕ್ಕೆ ಹಿಂಜರಿಕೆ

KannadaprabhaNewsNetwork |  
Published : May 08, 2024, 01:06 AM IST

ಸಾರಾಂಶ

ರಾಮನಗರ: ಕಳೆದ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟಕ್ಕೆ ಕಾದು ಕುಳಿತು ಪೈಪೋಟಿಗಿಳಿದಿದ್ದ ರೈತರು, ಈ ಬಾರಿ ತೀರಾ ನೀರಸ ಪ್ರತಿಕ್ರಿಯೆ ತೋರಿದ್ದಾರೆ.

ರಾಮನಗರ: ಕಳೆದ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟಕ್ಕೆ ಕಾದು ಕುಳಿತು ಪೈಪೋಟಿಗಿಳಿದಿದ್ದ ರೈತರು, ಈ ಬಾರಿ ತೀರಾ ನೀರಸ ಪ್ರತಿಕ್ರಿಯೆ ತೋರಿದ್ದಾರೆ.

ಬರಗಾಲದಿಂದ ರಾಗಿ ಇಳುವರಿ ಕುಂಠಿತಗೊಂಡಿದ್ದು, ಮಾರಾಟಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ಮೊದಲು ಮಾರ್ಚ್ 31ರವರೆಗೆ ನೀಡಿದ್ದ ಗಡು‍‍ವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಈಗ ನೋಂದಣಿ ಮಾಡಿಕೊಂಡವರ ಪೈಕಿ ಶೇ.50ರಷ್ಟು ರೈತರು ಮಾತ್ರ ರಾಗಿ ಪೂರೈಕೆ ಮಾಡಿದ್ದಾರೆ.

ಆಹಾರ ಇಲಾಖೆ ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತಕ್ಕೆ ಸರ್ಕಾರ ಇಂತಿಷ್ಟು ಕ್ವಿಂಟಲ್‌ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ ಮಾಡಲು ಗುರಿ ನೀಡಿತ್ತು. ಅದರಂತೆ 12,106 ರೈತರು 2,95,398 ಕ್ವಿಂಟಲ್ ರಾಗಿ ಮಾರಾಟ ಮಾಡುವುದಾಗಿ ನೋಂದಣಿ ಮಾಡಿಕೊಂಡಿದ್ದರು.

ಆದರೆ, ಈವರೆಗೆ 6,857 ರೈತರು ಮಾತ್ರ 1,42,942 ಕ್ವಿಂಟಲ್ ರಾಗಿಯನ್ನು ಸರಬರಾಜು ಮಾಡಿದ್ದಾರೆ. ಉಳಿದಂತೆ ನೋಂದಣಿ ಮಾಡಿಸಿಕೊಂಡಿರುವ ರೈತರು ಖರೀದಿ ಕೇಂದ್ರದತ್ತ ಮುಖ ಮಾಡುತ್ತಿಲ್ಲ.

ರಾಗಿ ಖರೀದಿ ಅನುಮಾನ:

ಕಳೆದ (2022-23ನೇ) ಸಾಲಿನಲ್ಲಿ 77 ಸಾವಿರ ಹೆಕ್ಟೇರ್ ಪೈಕಿ 66,719 ಹೆಕ್ಟೇರ್‌ನಲ್ಲಿ ರಾಗಿ ಬೆಳೆಯಲಾಗಿತ್ತು. ಆಗ 22,350 ರೈತರು 3.29 ಲಕ್ಷ ಕ್ವಿಂಟಲ್ ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 20,589 ರೈತರು 3.02 ಲಕ್ಷ ಕ್ವಿಂಟಲ್ ರಾಗಿಯನ್ನು ಬೆಂಬಲ ಬೆಲೆಗೆ ಮಾರಾಟ ಮಾಡಿ ಲಾಭ ಕಂಡಿದ್ದರು.

ಪ್ರಸಕ್ತ ಸಾಲಿನಲ್ಲಿ 72,600 ಹೆಕ್ಟೇರ್ ಗುರಿಯಲ್ಲಿ 63,111 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ರಾಗಿ ಬೆಳೆ ಇದೆ. ಈ ಬಾರಿ ಮಳೆ ಅಭಾವದಿಂದ ನಿರೀಕ್ಷಿತ ಪ್ರಮಾಣದಷ್ಟು ರಾಗಿಯೇ ಉತ್ಪಾದನೆ ಆಗಿಲ್ಲ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಾಲ್ಕನೇ ಒಂದು ಭಾಗದಷ್ಟು ರಾಗಿಯೂ ಖರೀದಿ ಆಗುವುದು ಅನುಮಾನವಾಗಿದೆ.

ಕ್ವಿಂಟಲ್ ರಾಗಿಗೆ 3846 ರು. ನಿಗದಿ:

ಸರ್ಕಾರ ರಾಗಿಯ ದರವನ್ನು ಪ್ರತಿ ಕ್ವಿಂಟಲ್‌ ಗೆ 3846 ರು. ನಿಗದಿ ಮಾಡಿದೆ. ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಲ್ ನಂತೆ ಎಲ್ಲ ರೈತರಿಂದ ಅವರು ಹೊಂದಿರುವ ಜಮೀನಿಗೆ ಅನುಗುಣವಾಗಿ ರಾಗಿ ಖರೀದಿಸಲಾಗುತ್ತದೆ. ಈ ದರ ಕಳೆದ ವರ್ಷಕ್ಕಿಂತಲೂ ಹೆಚ್ಚಿದೆ. ಆದರೆ, ಬೆಳೆಯೇ ಇಲ್ಲದಿರುವುದರಿಂದ ರೈತರಲ್ಲಿ ನಿರಾಸೆ ಮೂಡಿಸಿದೆ.

ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡುವಂತೆ ರೈತರಲ್ಲಿ ಜಾಗೃತಿ ಮೂಡಿಸಿದ್ದೇವೆ. ಬ್ಯಾನರ್ ಹಾಕಿದ್ದೇವೆ, ಕರಪತ್ರ ಹಂಚಿದ್ದೇವೆ. ಈ ಸಲ ಬೆಂಬಲ ಬೆಲೆಯನ್ನೂ ಹೆಚ್ಚಿಸಲಾಗಿದೆ. ಆದರೂ ನೋಂದಣಿ ಕಡಿಮೆ ಆಗಿದೆ. ಜ.1ರಿಂದಲೇ ಖರೀದಿಯನ್ನೂ ಆರಂಭಿಸಿದ್ದೇವೆ. ಈವರೆಗೆ 6857 ರೈತರು 1.42 ಲಕ್ಷ ಕ್ವಿಂಟಾಲ್ ರಾಗಿಯನ್ನು ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡಿದ್ದಾರೆ ಎಂದು ಕೆಎಫ್‌ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕ ರಮೇಶ್ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.ಬಾಕ್ಸ್ ............

ರಾಗಿ ಬಿತ್ತನೆ ಪ್ರಮಾಣ ಕಡಿಮೆ

ಪ್ರಸ್ತುತ ಮಳೆ ಕೊರತೆಯಿಂದ ಜಿಲ್ಲೆಯ ಆರೂ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಜಿಲ್ಲೆಯ ಮುಖ್ಯ ಬೆಳೆ ಎನಿಸಿರುವ ರಾಗಿ ಬಿತ್ತನೆ ಪ್ರಮಾಣವೂ ಕಡಿಮೆಯಾಗಿದೆ. ಬಿತ್ತನೆ ಸಮಯದಲ್ಲಿ ಮಳೆ ಬರಲಿಲ್ಲ. ನಂತರವೂ ಮಳೆ ಬಾರದ ಕಾರಣ ಮೊಳಕೆಯಲ್ಲೇ ಮುದುಡಿ ಹೋಗಿತ್ತು. ಹೀಗಾಗಿ, ಹಲವು ರೈತರು ರಾಗಿ ಬೆಳೆ ಬಾರದೆ ಕೈ ಸುಟ್ಟುಕೊಂಡಿದ್ದಾರೆ. ಮನೆ ಬಳಕೆಗೆ ಆಗುವಷ್ಟು ಮಾತ್ರ ರಾಗಿ ಉತ್ಪಾದನೆ ಆಗಿದೆ.

ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಸಹ ಸಮೃದ್ಧಿಯಾಗಿ ರಾಗಿ ಬೆಳೆದು ಸರ್ಕಾರದ ಬೆಂಬಲ ಬೆಲೆಗೆ ಮಾರಾಟ ಮಾಡಿದ್ದರು. ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವ ಕಾರಣ ರಾಗಿ ಸೇರಿದಂತೆ ಯಾವುದೇ ಬೆಳೆ ರೈತರ ಕೈ ಸೇರದೆ ನೆಲ ಕಚ್ಚಿದೆ.

ಬಾಕ್ಸ್ ...........

ಮೇ 4ರವರೆಗೆ ರಾಗಿ ಮಾರಾಟದ ನೋಂದಣಿ ವಿವರ

ತಾಲೂಕ.

ನೋಂದಣಿ ರೈತರ.

ರಾಗಿ ಪ್ರಮಾಣ(ಕ್ವಿ)

ಚನ್ನಪಟ್ಟ.

76.

21185.50

ರಾಮನಗರ.

94.

21892.00

ಕನಕಪುರ.

379.

95911.00

ಮಾಗಡ.

661.

156408.50

ಒಟ್ಟ.

1210.

295398.00

ಬಾಕ್ಸ್ .............

ಮೇ 4ರವರೆಗೆ ರಾಗಿ ಸರಬರಾಜಿನ ವಿವರ

ತಾಲೂಕ.

ರಾಗಿ ಪೂರೈಸಿದ ರೈತರ.

ರಾಗಿ ಪ್ರಮಾಣ (ಕ್ವಿ)

ಚನ್ನಪಟ್ಟ.

47.

11858.00

ರಾಮನಗ.

63.

13322.50

ಕನಕಪು.

135.

33565.00

ಮಾಗಡ.

438.

84196.50

ಒಟ್ಟ.

685.

142942.00

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಟುಂಬ ಹಾಳು ಮಾಡುತ್ತಿರುವ ಪ್ರೇಮಿಗಳ ದಿನ
ರಾಜಕೀಯ ಬದುಕಿಗೆ ಜನ್ಮ ನೀಡಿದ್ದು ಗ್ರಾಮೀಣ ಕ್ಷೇತ್ರ