ಹೆಣ್ಣು ಭ್ರೂಣ ಹತ್ಯೆಯಿಂದ ಹೆಣ್ಣಿನ ಅನುಪಾತ ಕುಸಿತ: ಎಚ್.ಆರ್.ಅರವಿಂದ್

KannadaprabhaNewsNetwork |  
Published : Mar 14, 2024, 02:06 AM IST
13ಕೆಎಂಎನ್‌ಡಿ-4ಮಂಡ್ಯ ನಗರದಲ್ಲಿರುವ ಸೇವಾಕಿರಣ ವೃದ್ದಾಶ್ರಮದ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ರಾಜ್ಯಕ್ಕೆ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಹೆಣ್ಣು ಸಂತಾನೋತ್ಪತ್ತಿ ತಡೆಯುವ ದುರಂತದಲ್ಲಿದೆ, ಇತ್ತೀಚೆಗೆ ಮದುವೆಯಾಗುವ ಗಂಡು ಮಕ್ಕಳಿಗೆ ವಧುಗಳು ಲಭ್ಯವಾಗುತ್ತಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಹೆಣ್ಣಿನ ಸಂತತಿ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯಸಮಾನವಾಗಿರಬೇಕಿದ್ದ ಹೆಣ್ಣು-ಗಂಡುಗಳ ಅನುಪಾತದಲ್ಲಿ ಗಂಡುಮಕ್ಕಳ ಅನುಪಾತ ಶೇ.೭೦ರಷ್ಟಿದ್ದರೆ, ಶೇ.೩೦ರಷ್ಟು ಹೆಣ್ಣುಮಕ್ಕಳ ಕೊರತೆ ಎದುರಾಗಿದೆ. ಹೆಣ್ಣು ಮಕ್ಕಳ ಅನುಪಾತ ಕುಸಿತಕ್ಕೆ ಹೆಣ್ಣು ಭ್ರೂಣಹತ್ಯೆಯೇ ಪ್ರಮುಖ ಕಾರಣ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಹೇಳಿದರು.

ನಗರದಲ್ಲಿರುವ ಸೇವಾಕಿರಣ ವೃದ್ದಾಶ್ರಮದ ಸಭಾಂಗಣದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಮತ್ತು ಚುಟುಕು ಸಾಹಿತ್ಯ ಪರಿಷತ್ತು ತಾಲೂಕು ಘಟಕ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಯೋವೃದ್ದಿಗೆ ಸಿಹಿ-ಹಣ್ಣು ವಿತರಣೆ ಮತ್ತು ಸಾಧಕರಿಗೆ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ರಾಜ್ಯಕ್ಕೆ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಹೆಣ್ಣು ಸಂತಾನೋತ್ಪತ್ತಿ ತಡೆಯುವ ದುರಂತದಲ್ಲಿದೆ, ಇತ್ತೀಚೆಗೆ ಮದುವೆಯಾಗುವ ಗಂಡು ಮಕ್ಕಳಿಗೆ ವಧುಗಳು ಲಭ್ಯವಾಗುತ್ತಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಹೆಣ್ಣಿನ ಸಂತತಿ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ನುಡಿದರು.

ಇಂದು ನಾಗರೀಕ ಸಮಾಜ ವಿಶ್ವ ಮಹಿಳಾ ದಿನಾಚರಣೆ ಆಚರಿಸುವ ಮೂಲಕ ಸಾಕಷ್ಟು ಪ್ರಗತಿ ಬಗ್ಗೆ ಚರ್ಚೆ ನಡೆಸುತ್ತಿರುವುದು ಶ್ಲಾಘನೀಯ. ಮತ್ತೊಂದೆಡೆ ಇದೇ ಹೆಣ್ಣು ಭ್ರೂಣ ಹತ್ಯೆಗೆ ಹೆಣ್ಣೇ ಕಾರಣರಾಗುತ್ತಿರುವುದು ಎಷ್ಟು ಸರಿ, ಸಾಮಾಜಿಕ ವ್ಯವಸ್ಥೆಯಲ್ಲಿನ ಅಸಮತೋಲನಕ್ಕೆ ಕಾರಣವಾಗುತ್ತಿರುವುದು ದುರಂತ ಎಂದು ಎಚ್ಚರಿಸಿದರು.

ಪರಿಸರಪ್ರೇಮಿ ಸಾಹಿತಿ ಆರ್.ಎಸ್.ಚಂದ್ರಶೇಖರ್, ಮುಂದಿನ ಪೀಳಿಗೆಯ ಸಂರಕ್ಷಣೆಗಾಗಿ ಹೆಣ್ಣು ಮತ್ತು ಪರಿಸರ ಸಮತೋಲವಾಗಿರಬೇಕು ಎಂದರು.

ಪ್ರಪಂಚದ ಯಾವುದೇ ದೇಶದಲ್ಲಿ ಶ್ರೀಗಂಧ ಮರಕ್ಕೆ ಸಾಕಷ್ಟು ಬೇಡಿಕೆ ಇದೆ, ದೊಡ್ಡ ಮೊತ್ತದ ಹಣ ನೀಡುವ ಮರ ಶ್ರೀಗಂಧವಾಗಿದ್ದು, ೨ನೇ ಸ್ಥಾನ ಪಡೆದುಕೊಂಡಿದೆ, ಕರ್ನಾಟಕ ರಾಜ್ಯದಲ್ಲ ನೆಲದಲ್ಲಿ ಮಾತ್ರ ಅತಿ ಹೆಚ್ಚು ಬೆಳೆಯಲು ಸಾಧ್ಯ, ಇನ್ನಾವ ದೇಶಗಳಿಂದಲೂ ಸಾಧ್ಯವಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಸಾಹಿತಿ ಆರ್.ಎಸ್.ಚಂದ್ರಶೇಖರ್ ಬರೆದಿರುವ ಕನ್ನಡ ನಾಡು ಶ್ರೀಗಂಧದ ಬೀಡು ಪುಸ್ತಕವನ್ನು ಪರಸ್ಪರ ಗ್ರಾಮ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ದೇವರಾಜ್ ಕೊಪ್ಪ ಬಿಡುಗಡೆಗೊಳಿಸಿದರು. ವಯೋವೃದ್ಧರಿಗೆ ಸಿಹಿ ಹಣ್ಣು ವಿತರಿಸಿ ಸಾಧಕರಿಗೆ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ವಿ.ನಾಗರಾಜು, ಕಸಿವೇ ರಾಜ್ಯಾಧ್ಯಕ್ಷ ಪೋತೇರ ಮಹಾದೇವ, ಪರಸ್ಪರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಜಿಲ್ಲಾಧ್ಯಕ್ಷೆ ಮಂಜುಳಾರಮೇಶ್, ಮಧುರಚಂದ್ರಶೇಕರ್, ಜಯಲಕ್ಷ್ಮಮ್ಮ, ಮಂಜಪ್ಪ, ಸರಸ್ವತಮ್ಮ ಹಾಜರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ