ಪುತ್ತೂರಲ್ಲಿ ಮಳೆಗಾಲ ಪೂರ್ವ ಕಾಮಗಾರಿ ವಿಳಂಬ: ನಗರಸಭಾ ಬಿಜೆಪಿ ಸದಸ್ಯರಿಂದ ಮನವಿ

KannadaprabhaNewsNetwork |  
Published : Jul 06, 2024, 12:55 AM IST
ಫೋಟೋ: ೪ಪಿಟಿಆರ್-ಮನವಿಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಬಿಜೆಪಿ ಸದಸ್ಯರು ಮನವಿ ಸಲ್ಲಿಸಿದರು | Kannada Prabha

ಸಾರಾಂಶ

ಜಲಸಿರಿ ಯೋಜನೆಯ ಬಗ್ಗೆ ಸಾರ್ವಜನಿಕ ದೂರುಗಳ ಬಗ್ಗೆ ಗಮನ ಹರಿಸಬೇಕು. ಈ ಎಲ್ಲ ಸಮಸ್ಯೆಗಳನ್ನು ೭ ದಿನದ ಒಳಗೆ ಮಾಡದಿದ್ದಲ್ಲಿ ನಗರಸಭೆ ಎದುರು ಧರಣಿ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ನಗರಸಭಾ ವ್ಯಾಪ್ತಿಯಲ್ಲಿ ಮಳೆಗಾಲದ ಪೂರ್ವದಲ್ಲಿ ಮಾಡಬೇಕಾಗಿದ್ದ ಚರಂಡಿ ಸ್ವಚ್ಛತೆ, ಅಪಾಯಕಾರಿ ಮರದ ಗೆಲ್ಲುಗಳ ತೆರವು, ರಸ್ತೆ ಬದಿ ಗಿಡಗಂಟಿಗಳ ತೆರವು ಮುಂತಾದ ಕಾಮಗಾರಿಗಳನ್ನು ನಿರ್ವಹಿಸದೆ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮತ್ತು ವಿವಿಧ ಅನುದಾನ ಕಾಮಗಾರಿಗಳ ಕುರಿತು ಬೇಡಿಕೆಯನ್ನು ಮುಂದಿಟ್ಟು ಪುತ್ತೂರು ನಗರಸಭಾ ಬಿಜೆಪಿ ಸದಸ್ಯರು ಗುರುವಾರ ನಗರಸಭಾ ಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಬಾರಿ ಮಳೆಗಾಲದ ಪೂರ್ವಭಾವಿಯಾಗಿ ನಗರಸಭೆಯಿಂದ ನಡೆಯುವ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಗ್ರಾಸ್ ಕಟ್ಟಿಂಗ್ ನಡೆಸಿಲ್ಲ. ಅದೇ ರೀತಿ ೧೫ ನೇ ಹಣಕಾಸು ಯೋಜನೆ ಅನುದಾನದ ಕ್ರಿಯಾಯೋಜನೆ ಮಾಡುವ ಮುಂಚಿತವಾಗಿ ಸದಸ್ಯರ ಗಮನಕ್ಕೆ ತರಬೇಕು. ನಗರೋತ್ಥಾನ ಯೋಜನೆ, ನಗರಸಭಾ ನಿಧಿಯ ಮೂಲಕ ವಾರ್ಡ್ ಗಳಿಗೆ ನೀಡಲಾಗುವ ಅನುದಾನದ ಹಂಚಿಕೆಯಲ್ಲಿ ವಾರ್ಡ್ ಸದಸ್ಯರ ಗಮನಕ್ಕೆ ತಂದು ಕಾಮಗಾರಿ ನಡೆಸಬೇಕು. ಜಲಸಿರಿ ಯೋಜನೆಯ ಬಗ್ಗೆ ಸಾರ್ವಜನಿಕ ದೂರುಗಳ ಬಗ್ಗೆ ಗಮನ ಹರಿಸಬೇಕು. ಈ ಎಲ್ಲ ಸಮಸ್ಯೆಗಳನ್ನು ೭ ದಿನದ ಒಳಗೆ ಮಾಡದಿದ್ದಲ್ಲಿ ನಗರಸಭೆ ಎದುರು ಧರಣಿ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ.ಮನವಿ ಸಲ್ಲಿಸುವ ಸಂದರ್ಭದಲ್ಲಿ ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಸದಸ್ಯ ಹಾಗೂ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ನಗರಸಭೆ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಸದಸ್ಯರಾದ ಗೌರಿ ಬನ್ನೂರು, ಮೋಹಿನಿ ವಿಶ್ವನಾಥ, ಲೀಲಾವತಿ, ಸುಂದರ ಪೂಜಾರಿ ಬಡಾವು, ಪ್ರೇಮ್ ಕುಮಾರ್, ರಮೇಶ್ ರೈ, ಪ್ರೇಮ ನಂದಿಲ, ಪದ್ಮನಾಭ ನಾಯ್ಕ, ಸಂತೋಷ ಕುಮಾರ್, ನವೀನ್ ಪೆರಿಯತ್ತೋಡಿ, ಇಂದಿರಾ ಆಚಾರ್ಯ, ಮನೋಹರ್ ಕಲ್ಲಾರೆ, ಬಾಲಚಂದ್ರ ಕೆಮ್ಮಿಂಜೆ, ಮಮತಾ ರಂಜನ್, ಪೂರ್ಣಿಮಾ, ವಸಂತ ಕಾರೆಕ್ಕಾಡು, ಪದ್ಮನಾಭ ನಾಯ್ಕ, ದೀಕ್ಷಾ ಪೈ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್. ಶೆಟ್ಟಿ ಉಪಸ್ಥಿತರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ