ಕಾವ್ಯದ ನೈಜತೆ ಓದುಗರಿಗೆ ತಲುಪಿಸಿ: ಶ್ರೀನಿವಾಸ ಜಾಲವಾದಿ

KannadaprabhaNewsNetwork |  
Published : Sep 22, 2025, 01:00 AM IST
ಸುರಪುರ ನಗರದ ಕನ್ನಡ ಸಾಹಿತ್ಯ ಸಂಘದಲ್ಲಿ ನಡೆದ ಸಾಧಕರಿಗೆ ಸನ್ಮಾನ ಹಾಗೂ ಕವಿಗೋಷ್ಠಿಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಪ್ರಸ್ತುತ ಕಾವ್ಯವು ಗದ್ಯದ ರೂಪ ಪಡೆಯುತಲಿದ್ದು, ಕಾವ್ಯದ ನೈಜತೆ ಮರೆಯಾಗುತ್ತಿದೆ. ಕಾವ್ಯದ ಅಸಲಿಯತ್ತನ್ನು ಓದುಗರಿಗೆ ತಲುಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಯಾದಗಿರಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಹೇಳಿದರು.

ಕನ್ನಡಪ್ರಭ ವಾರ್ತೆ ಸುರಪುರ

ಪ್ರಸ್ತುತ ಕಾವ್ಯವು ಗದ್ಯದ ರೂಪ ಪಡೆಯುತಲಿದ್ದು, ಕಾವ್ಯದ ನೈಜತೆ ಮರೆಯಾಗುತ್ತಿದೆ. ಕಾವ್ಯದ ಅಸಲಿಯತ್ತನ್ನು ಓದುಗರಿಗೆ ತಲುಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಯಾದಗಿರಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಹೇಳಿದರು.

ನಗರದ ಕನ್ನಡ ಸಾಹಿತ್ಯ ಸಂಘದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ಮಹೋತ್ಸವ ನಿಮಿತ್ತ ನಡೆದ ಸಾಧಕರಿಗೆ ಸನ್ಮಾನ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ, ಕಾವ್ಯದ ಅಂತರತೆಯನ್ನು ಅರಿತರೆ ಕಡಲಿನ ಭಾವನೆ ಸೃಷ್ಠಿಯಾಗುತ್ತದೆ. ಕಾವ್ಯಕ್ಕೆ ಮನುಷ್ಯನ ಜಂಜಾಟದ ನೋವುಗಳನ್ನು ಮರೆಸುವ ಶಕ್ತಿಯಿದೆ ಎಂದರು.

ಯುವ ಕವಿ, ವಿಮರ್ಶಕ ವೆಂಕಟೇಶಗೌಡ ಪಾಟೀಲ ಮಾತನಾಡಿ, ಆಧುನಿಕ ಕಾವ್ಯದ ಹೊಳಹೋಗುಗಳನ್ನು ಅರಿಯಬೇಕು. ಕಾಲಕ್ಕೆ ತಕ್ಕಂತೆ ಕಾವ್ಯದ ಮಾರ್ಗ ಬದಲಾಗುತ್ತದೆ. ೨೧ನೇ ಶತಮಾನದಲ್ಲಿ ಯಾವ ಪಂಥಗಳು ಇರಲಿಲ್ಲ. ಕಾವ್ಯ ರೂಪಾತ್ಮಕವಾಗಿ ಮಾತಾಡಬೇಕು. ಕಾವ್ಯದ ಶರೀರ ಛಂದಸ್ಸು ಅದರ ಅಧ್ಯಯನ ಕವಿ ಮಾಡಬೇಕು. ಕವಿತೆ ಒಮ್ಮೆಲೇ ರೂಪಗೊಳ್ಳುವುದಿಲ್ಲ. ಕವಿತೆ ಬರೆದಾದ ಮೇಲೆ ತಿದ್ದಿ ಬರೆಯಬೇಕು. ಅದನ್ನು ಮರು ಕಟ್ಟಬೇಕು. ಗಟ್ಟಿ ಮಾನವೀಯ ಆಶಯವಿಲ್ಲದ ಕವಿತೆ ಯಶಸ್ಸು ಕಾಣಲಾರದು ಎಂದರು.

ಡಿ.ಆರ್. ನಾಗರಾಜ, ನಬಿಲಾಲ ಮಕಾನದಾರ, ಶರಣಗೌಡ ಜೈನಾಪುರ, ಪತ್ರಕರ್ತ ರಾಜು ಕುಂಬಾರ, ಮಲ್ಲಿಕಾರ್ಜುನ ಉದ್ದಾರ, ಶರಣಬಸಪ್ಪ ಯಾಳವಾರ, ದೇವು ಹೆಬ್ಬಾಳ, ಎಚ್. ರಾಠೋಡ, ಶ್ರೀನಿವಾಸ ಜಾಲವಾದಿ, ಕನಕಪ್ಪ ವಾಗನಗೇರಿ ಸೇರಿದಂತೆ ಇತರರು ಕವಿತೆ ವಾಚಿಸಿದರು.

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಮಲ್ಲಣ್ಣ ಕೋಳೂರಗಿ, ಸಾಹೇಬರೆಡ್ಡಿ ಇಟಗಿ, ನೂತನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಜಾವೇದ ಹವಾಲದಾರ, ನೂತನ ನಾಮ ನಿರ್ದೇಶಿತ ನಗರಸಭೆ ಸದಸ್ಯ ಪ್ರಕಾಶ ಅಲಬನೂರ ಅವರನ್ನು ಸನ್ಮಾನಿಸಲಾಯಿತು.

ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ, ಸಾಹಿತಿ ಪ್ರಕಾಶಚಂದ ಜೈನ, ವಕೀಲ ಯಲ್ಲಪ್ಪ ಹುಲಕಲ್, ಗೃಹರಕ್ಷಕ ಕಮಾಂಡೆಂಟ್ ವೆಂಕಟೇಶ ಶಹಪುರಕರ, ಮಹೇಂದ್ರ ಅಂಗಡಿ, ಚಂದ್ರಕಾಂತ ಮಾರ್ಗೆಲ್, ಪ್ರಕಾಶ ಬಣಗಾರ ಇತರರು ಇದ್ದರು.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ