ವಿದ್ಯಾರ್ಥಿನಿ ನೇಹಾ ಹಂತಕರಿಗೆ ಗಲ್ಲುಶಿಕ್ಷೆ ವಿಧಿಸಲು ಆಗ್ರಹ

KannadaprabhaNewsNetwork |  
Published : Apr 20, 2024, 01:00 AM IST
ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಹತ್ಯೆಗೈದ ದುಷ್ಕರ್ಮಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಬಳ್ಳಾರಿಯ ಗಾಂಧಿಪ್ರತಿಮೆ ಮುಂದೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸದಸ್ಯರು ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ಹಾಡ ಹಗಲೇ ಕಾಲೇಜಿನ ಕ್ಯಾಂಪಸ್‌ನಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ದುಷ್ಕರ್ಮಿ ಸೇರಿದಂತೆ ಆತನ ಸಹಚರರಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬಳ್ಳಾರಿ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಬರ್ಬರವಾಗಿ ಕೊಲೆಗೈದ ದುಷ್ಕರ್ಮಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿಯ ಗಾಂಧಿಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.

ಹಾಡ ಹಗಲೇ ಕಾಲೇಜಿನ ಕ್ಯಾಂಪಸ್‌ನಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ದುಷ್ಕರ್ಮಿ ಸೇರಿದಂತೆ ಆತನ ಸಹಚರರಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜನಪರ ಹೋರಾಟಗಾರ ಕೆ.ಎಂ. ಮಹೇಶ್ವರಸ್ವಾಮಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಉಗರಗೊಳ ಮಠದ ಶ್ರೀಗಳು, ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ, ವೀ.ವಿ.ಸಂಘದ ಮಾಜಿ ಅಧ್ಯಕ್ಷ ಗುರುಸಿದ್ಧಸ್ವಾಮಿ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಕಲ್ಗುಡಿ ಮಂಜುನಾಥ, ಕೋರಿ ವಿರುಪಾಕ್ಷಪ್ಪ, ಕೆರೇನಳ್ಳಿ ಚಂದ್ರಶೇಖರ್, ಎಚ್.ಎಂ.ಕಿರಣ್ ಕುಮಾರ್, ಎನ್.ವೀರಭದ್ರಗೌಡ, ಎಚ್.ಎಂ. ಮಹೇಂದ್ರಕುಮಾರ್, ವೀರಶೈವ ಮಹಾಸಭಾದ ಮುಖಂಡರಾದ ಹೊನ್ನನ ಗೌಡ, ಗಂಗಾವತಿ ವೀರೇಶ್, ಕೆ.ಪಿ. ಚನ್ನಬಸವರಾಜ, ಶಿವಾ ರಮೇಶ್, ರೈಲ್ವೆ ಕ್ರಿಯಾ ಸಮಿತಿಯ ಪಿ.ಬಂಡೇಗೌಡ, ವಿ.ಎಸ್. ಮರಿದೇವಯ್ಯ, ಕೋಳೂರು ಚಂದ್ರಶೇಖರಗೌಡ, ಎಚ್.ಕೆ. ಗೌರಿಶಂಕರ, ಕೆ.ಎಂ. ಕೊಟ್ರೇಶ್ ಸಿಂಧುವಾಳ, ಎಂ.ಲೋಕನಾಥಸ್ವಾಮಿ, ಬಿ.ಎಂ. ಎರ‍್ರಿಸ್ವಾಮಿ, ಮೋರೆಗೆರೆ ಕೊಟ್ರೇಶ್, ಸಿಂಧುವಾಳ ಮಹೇಶ್ ಗೌಡ, ಬಾಣಾಪುರ ಶಿವಕುಮಾರಗೌಡ, ಚೆಳ್ಳಗುರ್ಕಿ ವಿರುಪಾಕ್ಷಗೌಡ, ಹೂಗಾರ ಸುರೇಶ್, ಜೆ.ಎಂ. ಶಶಿಧರ, ಕಲ್ಲುಕಂಬ ಪ್ರತಾಪಗೌಡ, ಬಸವರಾಜ ಬಿಸಲಹಳ್ಳಿ, ಸಿ.ಎಂ.ವೀರಭದ್ರಯ್ಯ, ಕಂಪ್ಲಿ ಶರಣಬಸವಸ್ವಾಮಿ, ಶಂಕರಬಂಡೆ ಮಲ್ಲಿಕಾರ್ಜುನ, ಮಂಜುನಾಥ ಗೋವಿಂದವಾಡ, ಭೀಮೇಶ್ ಸ್ವಾಮಿ, ಎಚ್.ಎಂ.ಗೌರಿಶಂಕರ, ಜನಕಲ್ಯಾಣ ರಕ್ಷಣ ವೇದಿಕೆಯ ಬಸವರಾಜಸ್ವಾಮಿ, ಅಮರೇಶಯ್ಯ ಹಚ್ಚೊಳ್ಳಿ, ಮದಿರೆ ಬಸವರಾಜಸ್ವಾಮಿ, ಹೆಚ್.ಎಂ.ವೀರೇಶಸ್ವಾಮಿ, ಚನ್ನಬಸಯ್ಯಸ್ವಾಮಿ, ವಿಶ್ರಾಂತ ಪ್ರಾಂಶುಪಾಲರಾದ ಹೇಮರೆಡ್ಡಿ, ಜೆ.ಬಸವರಾಜ ಹಾಗೂ ಜಮಾಪುರ ಪೊಂಪಾಪತಿ, ಮಲ್ಲಿಕಾರ್ಜುನಸ್ವಾಮಿ, ಮಣಿಕಂಠ ಕೆ.ಎಂ. ಹರೀಶ್, ಭರತ್‌ಗೌಡ, ಸುನೀಲ್, ಪ್ರಮೋದರೆಡ್ಡಿ, ಗಿರಿಧರ ಸೇರಿದಂತೆ ವೀರಶೈವ ಸಮಾಜದ ಗಣ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಜನಪರ ಹೋರಾಟಗಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾಡಳಿತ ಮೂಲಕ ರಾಜ್ಯಸರ್ಕಾರಕ್ಕೆ ಮನವಿಪತ್ರ ಕಳಿಸಿಕೊಡಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ