ದೆಹಲಿಯಲ್ಲಿ ಸಮಾವೇಶದ ಮೂಲಕ ಉಪ್ಪಾರರಿಗೆ ಸ್ಥಾನಮಾನಕ್ಕಾಗಿ ಒತ್ತಾಯ

KannadaprabhaNewsNetwork | Published : Dec 19, 2023 1:45 AM

ಸಾರಾಂಶ

ಹೊಸದುರ್ಗಕ್ಕೆ ಆಗಮಿಸಿ ದ್ದ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆಯಲ್ಲಿ ಭಾಗವಹಿಸಿದ್ದ ಬ್ರಹ್ಮವಿದ್ಯಾನಗರದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ದೆಹಲಿಯ ರಾಮಲೀಲಾ ಮೈದಾನದಲ್ಲಿ ಫೆ. 28- 29ರಂದು ಉಪ್ಪಾರ ಸಮಾಜದ ಬೃಹತ್‌ ಸಮಾವೇಶ ನಡೆಸುವ ಮೂಲಕ ಹಿಂದುಳಿದ ಉಪ್ಪಾರ ಸಮಾಜಕ್ಕೆ ಸ್ಥಾನಮಾನ ನೀಡುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ಬ್ರಹ್ಮವಿದ್ಯಾನಗರದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿಕನ್ನಡಪ್ರಭ ವಾರ್ತೆ ಹೊಸದುರ್ಗ ದೆಹಲಿಯ ರಾಮಲೀಲಾ ಮೈದಾನದಲ್ಲಿ ಫೆ. 28- 29ರಂದು ಉಪ್ಪಾರ ಸಮಾಜದ ಬೃಹತ್‌ ಸಮಾವೇಶ ನಡೆಸುವ ಮೂಲಕ ಹಿಂದುಳಿದ ಉಪ್ಪಾರ ಸಮಾಜಕ್ಕೆ ಸ್ಥಾನಮಾನ ನೀಡುವಂತೆ ಒತ್ತಾಯಿಸಲಾಗುವುದು ಎಂದು ಬ್ರಹ್ಮವಿದ್ಯಾನಗರದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹೇಳಿದರು.ಅವರು ಸೋಮವಾರ ಪಟ್ಟಣಕ್ಕೆ ಆಗಮಿಸಿದ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಸಮಾವೇಶದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರನ್ನು ಸಭೆಗೆ ಆಹ್ವಾನಿಸಿ, ಹರಿದ್ವಾರ ಹಾಗೂ ಋಷಿಕೇಶದ ಬಳೀ ಗಂಗಾ ನದಿ ತಟದಲ್ಲಿ ಭೂಮಿಗೆ ಗಂಗೆಯನ್ನು ಹರಿಸಿದ ಭಗೀರಥ ಮಹರ್ಷಿಯ ಆಶ್ರಮ ನಿರ್ಮಾಣ ಹಾಗೂ ಪುತ್ತಳಿ ಸ್ಥಾಪನೆ ಹಾಗೂ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಏಕಕಾಲಕ್ಕೆ ಜಯಂತಿ ಆಚರಿಸುವಂತೆ ಕೇಂದ್ರ ಸರ್ಕಾರದಿಂದ ಭಗೀರಥ ಜಯಂತಿ ಘೋಷಣೆ ಮಾಡುವಂತೆ ಒತ್ತಾಯಿಸಲಾಗುವುದು ಎಂದರು, ಬಹುಸಂಖ್ಯಾತ ದೇವ ಸಂಭೂತರನ್ನು ಹೊಂದಿದ್ದ ಉಪವೀರ ಸಮಾಜ ಒಂದು ಕಾಲಕ್ಕೆ ಸಾಮ್ರಾಜ್ಯವನ್ನು ಕಟ್ಟಿ ರಾಷ್ಟ್ರಭೌಮತ್ವವನ್ನು ಹೊಂದಿತ್ತು. ನಂತರ ಉಪ್ಪನ್ನು ತಯಾರಿಸಿ ದೇಶಕ್ಕೆ ಅತಿ ಹೆಚ್ಚು ಟ್ಯಾಕ್ಸ್‌ ಕಟ್ಟಿ ದೇಶವನ್ನು ಮುನ್ನೆಡಿಸಿದಂತಹ ಸಮಾಜ ಸಮಾಜ ಇತ್ತೀಚಿಗೆ ಅಸಂಘಟಿತವಾಗಿ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಹೆಸರಿನಲ್ಲಿ ಹಂಚಿ ಹೊಗಿದೆ. ಅದನ್ನು ಮತ್ತೆ ಸಂಘಟಿಸುವ ಮೂಲಕ ಮತ್ತೆ ರಾಜಕೀಯ ವಾಗಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮುನ್ನೆಲೆಗೆ ತರುವ ಸಲುವಾಗಿ ಈ ರಥಯಾತ್ರೆಯನ್ನು ಹಮ್ಮಿಕೊಂಡಿದ್ದು, ಈ ರಥಯಾತ್ರೆ ದೇಶದ ಉದ್ದಗಲಕ್ಕೂ ಸಂಚರಿಸಿ ಸಮಾಜವನ್ನು ಸಂಘಟಿಸಲಾಗುತ್ತಿದೆ ಎಂದರು.ಹರೀಶ್ ಮೆಹತೊ ಚೌಹಾಣ್ ಮತ್ತು ತಂಡದ ನೇತೃತ್ವದಲ್ಲಿ ಈ ಯಾತ್ರೆ ಪ್ರಾರಂಭವಾಗಿದ್ದು, ಈಗಾಗಲೇ ನೆರೆ ರಾಜ್ಯಗಳಾದ ಆಂಧ್ರಪ್ರದೇಶ್, ತೆಲಂಗಾಣ, ಮಹಾರಾಷ್ಟ್ರ,ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಂಚಾರ ಮಾಡಿ ಡಿ.9 ರಂದು ಕರ್ನಾಟಕ ಪ್ರವೇಶ ಮಾಡಿದೆ. ಅಲ್ಲಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚಾರ ಮಾಡಿ ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿದೆ. ನಂತರ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಮೂಲಕ ರಾಜ್ಯದ ವಿವಿದೆಡೆಗಳಲ್ಲಿ ಸಂಚರಿಸಲಿದೆ ಎಂದರು.ರಥಯಾತ್ರೆಯಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ, ಹೈಕೋರ್ಟ್‌ ನ ನಿವೃತ್ತ ನ್ಯಾಯಮೂರ್ತಿ ಎಚ್‌ ಬಿಲ್ಲಪ್ಪ, ಉಪ್ಪಾರ ಸಮಾಜದ ಮುಖಂಡರಾದ ಮಧುರೇ ನಟರಾಜ್‌, ಆರ್‌.ಲಕ್ಷ್ಮಯ್ಯ, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ್‌ ಸೇರಿದಂತೆ ಜಿಲ್ಲೆಯ ಹಾಗೂ ತಾಲೂಕಿನ ಸಮಾಜದ ಮುಖಂಡರುಗಳು ಹಾಜರಿದ್ದರು.

Share this article