ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆಯಲು ಒತ್ತಾಯ

KannadaprabhaNewsNetwork |  
Published : Jun 12, 2025, 05:59 AM ISTUpdated : Jun 12, 2025, 06:00 AM IST
11ಸಿಎಚ್‌ಎನ್51ಸಕ್ಕರೆ ಕಾರ್ಖಾನೆಗಳ ಪ್ರಾರಂಭಕೂ ಮುನ್ನ ರೈತ ಮುಖಂಡರು ಮತ್ತು ಕಬ್ಬು ಬೆಳಗಾರರು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯನ್ನು ಜಿಲ್ಲಾಧಿಕಾರಿಗಳು ಕರೆದು ಸಮಸ್ಯೆ ಆಲಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಸಕ್ಕರೆ ಕಾರ್ಖಾನೆಗಳ ಪ್ರಾರಂಭಕ್ಕೂ ಮುನ್ನ ರೈತ ಮುಖಂಡರು, ಕಬ್ಬು ಬೆಳಗಾರರು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯನ್ನು ಜಿಲ್ಲಾಧಿಕಾರಿಗಳು ಕರೆದು ಸಮಸ್ಯೆ ಆಲಿಸಬೇಕು ಎಂದು ಒತ್ತಾಯಿಸಿ ಚಾಮರಾಜನಗರದಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಕ್ಕರೆ ಕಾರ್ಖಾನೆಗಳ ಪ್ರಾರಂಭಕೂ ಮುನ್ನ ರೈತ ಮುಖಂಡರು ಮತ್ತು ಕಬ್ಬು ಬೆಳಗಾರರು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯನ್ನು ಜಿಲ್ಲಾಧಿಕಾರಿಗಳು ಕರೆದು ಸಮಸ್ಯೆ ಆಲಿಸಬೇಕು ಎಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ನಗರದ ಜಿಲ್ಲಾಡಳಿತದ ಭವನದ ಮುಂಭಾಗ ಜಮಾಯಿಸಿದ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಮನವಿ ಸಲ್ಲಿಸಿದರು, ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಪ್ರಸಕ್ತ ಸಾಲಿಗೆ ಕಬ್ಬನ್ನು 4,500ರು.ನಿಗದಿ ಮಾಡಬೇಕು. ಕಟಾವು ಮತ್ತು ಸಾಗಾಣಿಕೆಯನ್ನು ಎಸ್ಎಪಿ ಕಮಿಟಿಯ ನಿರ್ಧಾರದಂತೆ ನಡೆದುಕೊಳ್ಳಬೇಕು. ಮನಬಂದಂತೆ ಕಟಾವು ಸಾಗಾಣಿಕೆ ಕೂಲಿಯನ್ನು ಕಾರ್ಖಾನೆ ಅವರು ನಿಗದಿ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದರು.

ದ್ವಿಪಕ್ಷೀಯ ಒಪ್ಪಂದ ಪತ್ರ ಕಾರ್ಖಾನೆ ಮತ್ತು ಕಬ್ಬು ಬೆಳೆಗಾರ ನಡುವೆ ಆಗಬೇಕು. ಸಕ್ಕರೆ ಕಾರ್ಖಾನೆ ಮುಂಭಾಗ ತೂಕದ ಯಂತ್ರವನ್ನು ಅಳವಡಿಸಬೇಕು. ಸಕ್ಕರೆ ಕಾರ್ಖಾನೆಯೂ ಇಳುವರಿಯಲ್ಲಿ ಮೋಸ ಮಾಡುತ್ತಿದೆ. ಕಳೆದ 15 ವರ್ಷಗಳ ಹಿಂದೆ ಹತ್ತುವರೆ ಪರ್ಸೆಂಟ್ ಗಿಂತ ಹೆಚ್ಚು ತೋರುತ್ತಿದ್ದು ಇವಾಗ ಇಳುವರಿ ಆದಾರದ ಮೇಲೆ ಬೆಲೆ ನೀಡುವ ಕಾರಣ 9% ಹಾಗೂ ಶೇ.9.30 ತೋರಿಸುವ ಹುನ್ನಾರ ನಡೆಯುತ್ತಿದೆ. ಸಕ್ಕರೆಯ ಇಳುವರಿಯಲ್ಲಿ ಮೋಸ ತಪ್ಪಿಸಲು ಸ್ಥಳೀಯ ರೈತ ಮುಖಂಡರ ತಜ್ಞರ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಗೆ ಸಕ್ಕರೆ ಆಯುಕ್ತರನ್ನು ಕರೆಸಿ ಸಭೆ ನಡೆಸಬೇಕು. ಕಬ್ಬು ಕಟಾವಾದ 14 ದಿನದ ಒಳಗೆ ರೈತರ ಹಣ ಪಾವತಿಯಾಗಬೇಕು. ಪಾವತಿಯಾಗದೆ ಹೆಚ್ಚುವರಿ ದಿನಕೆ 14% ಬಡ್ಡಿಯಂತೆ ಪಾವತಿಸಲು ಕ್ರಮ ಕೈಗೊಳ್ಳಬೇಕು. ರೈತರು ತಮ್ಮ ಕಬ್ಬನ್ನು ಸ್ವಂತ ವಾಹನದಲ್ಲಿ ಸಾಗಿಸಲು ಅವಕಾಶ ನೀಡಬೇಕು. ಸಕ್ಕರೆ ಕಾರ್ಖಾನೆಯ ಲಾಭಾಂಶವನ್ನು ಅರಿಯಲು ಸುಮಾರು 10 ವರ್ಷಗಳ ಬ್ಯಾಲೆನ್ಸ್ ಶೇಟ್ ಅನ್ನು ಜಿಲ್ಲಾಡಳಿತ ತರಿಸಿಕೊಳ್ಳಬೇಕು. ಇದನ್ನು ತಜ್ಞರ ಜೊತೆ ಚರ್ಚಿಸಿ ರೈತರಿಗೆ ಲಾಭ ಅಂಶದಲ್ಲಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು,

ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಸಭೆ ನಡೆಸಿ ರೈತರ ಸಮಸ್ಯೆ ಬಗೆಹರಿಸುವಲ್ಲಿ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಿರಂತರ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್ ಮೈಸೂರು ಜಿಲ್ಲಾಧ್ಯಕ್ಷ ವಳಗೆರೆ ಗಣೇಶ್ ಹನುಮಯ್ಯ ದೇವನೂರು ನಾಗೇಂದ್ರ ಪ್ರಕಾಶ್ ಗಾಂಧಿ ಮಲಿಯೂರು ಮಹೇಂದ್ರ ಮುದ್ದಳ್ಳಿ ಮಧು. ಎಚ್ ಗುಂಡ್ಲಾ ಚಿದು, ಗುರುವಿನಪುರ ಚಂದ್ರು, ಆನಂದ, ಸುದೀ, ಊರ್ದಳ್ಳಿ ರಾಮಣ್ಣ ಬಸವಣ್ಣ ಸ್ಯಾಂಡ್ರಳ್ಳಿ ಉಮೇಶ್, ನಾಗರಾಜು, ಬಸವರಾಜ್, ಶಿವಕುಮಾರ್ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ