ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ತಾರತಮ್ಯ ನಿವಾರಣೆಗೆ ಆಗ್ರಹ

KannadaprabhaNewsNetwork |  
Published : Nov 15, 2025, 02:15 AM IST
(14ಎನ್.ಆರ್.ಡಿ1 ಬೆಳೆ ಹಾನಿ ತಾರತ್ಯಮ ಸರಿಪಡಿಸಬೇಕೆಂದು ರೈತರು ತಹಸೀಲ್ದಾರ ಮುಖಾಂತ ಸರ್ಕಾರಕ್ಕೆ ಮನವಿ ನೀಡಿದರು.)    | Kannada Prabha

ಸಾರಾಂಶ

ಸರ್ಕಾರ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ 1 ಹೆಕ್ಟೇರ್‌ ಖುಷ್ಕಿ ಜಮೀನಿಗೆ ₹8500 ಬೆಳೆಹಾನಿ ಪರಿಹಾರ, ನೀರಾವರಿಗೆ ₹17000 ಪರಿಹಾರ ನೀಡಬೇಕು. ಆದರೆ ಈ ವರ್ಷ ನೀರಾವರಿ ಜಮೀನುಗಳಿಗೆ ಕೂಡ ಖುಷ್ಕಿ ಜಮೀನಿಗೆ ನೀಡುವ ₹8500 ಪರಿಹಾರ ನೀಡಿ ನೀರಾವರಿ ಹೊಂದಿರುವ ರೈತರಿಗೆ ಸರ್ಕಾರ ಅನ್ಯಾಯ ಮಾಡಿದೆ.

ನರಗುಂದ: ತಾಲೂಕಿನ ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆಹಾನಿ ಮಾಡಿಕೊಂಡ ರೈತರಿಗೆ ವಿತರಣೆಯಲ್ಲಿ ತಾರತಮ್ಯ ಮಾಲಾಗಿದೆ. ಇದನ್ನು ಒಂದು ವಾರದಲ್ಲಿ ಸರಿಪಡಿಸದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದೆಂದು ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕಾಧ್ಯಕ್ಷ ಉಮೇಶ ಮರ್ಚಪ್ಪನವರ ತಿಳಿಸಿದರು.

ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ತಹಸೀಲ್ದಾರರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.

ಸರ್ಕಾರ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ 1 ಹೆಕ್ಟೇರ್‌ ಖುಷ್ಕಿ ಜಮೀನಿಗೆ ₹8500 ಬೆಳೆಹಾನಿ ಪರಿಹಾರ, ನೀರಾವರಿಗೆ ₹17000 ಪರಿಹಾರ ನೀಡಬೇಕು. ಆದರೆ ಈ ವರ್ಷ ನೀರಾವರಿ ಜಮೀನುಗಳಿಗೆ ಕೂಡ ಖುಷ್ಕಿ ಜಮೀನಿಗೆ ನೀಡುವ ₹8500 ಪರಿಹಾರ ನೀಡಿ ನೀರಾವರಿ ಹೊಂದಿರುವ ರೈತರಿಗೆ ಸರ್ಕಾರ ಅನ್ಯಾಯ ಮಾಡಿದೆ.

ಒಂದು ವಾರದೊಳಗೆ ತಾರತಮ್ಯ ಮಾಡಿದ ಗ್ರಾಮಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಬೇಕು ಮತ್ತು ನೀರಾವರಿ ಜಮೀನು ಹೊಂದಿರುವ ರೈತರಿಗೆ ಪ್ರತಿ 1 ಹೆಕ್ಟೇರ್‌ಗೆ ₹17000 ಪರಿಹಾರ ನೀಡದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ತಾಲೂಕಿನ ರೈತರು ಅಹೋರಾತ್ರಿ ಧರಣಿ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.

ರೈತ ಮುಖಂಡ ಶಂಕರಗೌಡ ಶಿರಿಯಪ್ಪಗೌಡ್ರ ಮಾತನಾಡಿದರು. ತಹಸೀಲ್ದಾರ್ ಶ್ರೀಶೈಲ ತಳವಾರ ರೈತರ ಮನವಿ ಸ್ವೀಕರಿಸಿದರು. ಬಸಯ್ಯ ಹೊರಗಿನಮಠ, ಪ್ರವೀಣ ಯಲಿಗಾರ, ಅಶೋಕ ಮನವಚಾರಿ, ಅರವಿಂದ ಮುದರಡ್ಡಿ, ಅಶೋಕ ಪಾಟೀಲ, ವೆಂಕಟೇಶ ವಾಸನ, ಯಲ್ಲಪ್ಪ ಮರ್ಚಪ್ಪನವರ, ಈರಣ್ಣ ಹುರಕಡ್ಡಿ, ಚಿಕ್ಕಮಠ ಸೇರಿದಂತೆ ಮುಂತಾದವರು ಇದ್ದರು.ಇಂದು ಉಪನ್ಯಾಸ ಕಾರ್ಯಕ್ರಮ

ಮುಂಡರಗಿ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ನ. 15ರಂದು ಸಂಜೆ 4.30ಕ್ಕೆ ಶರಣ ಚಿಂತನ ಮಾಲೆ- ಉಪನ್ಯಾಸ ಕಾರ್ಯಕ್ರಮ ಪಟ್ಟಣದ ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಲಿದೆ.ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಪ್ರೊ. ಆರ್.ಎಲ್. ಪೊಲೀಸಪಾಟೀಲ ಅಧ್ಯಕ್ಷತೆ ವಹಿಸುವರು. ಪುರಸಭೆ ಸದಸ್ಯ ಪ್ರಹ್ಲಾದ್ ಹೊಸಮನಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವೆಂಕಟಾಪುರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಸ್. ಮಠದ ಶರಣ ಮರುಳ ಶಂಕರದೇವರ ಕುರಿತು ಉಪನ್ಯಾಸ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಸಂತೋಷಕುಮಾರ ಮುರುಡಿ, ಮಹಾಲಿಂಗಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಗುವುದು. ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಉಪಸ್ಥಿತರಿರುವರು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಇಂದಿನ ಮಕ್ಕಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಬೇಕು-ರಮೇಶ ಅರಗೋಳ
ಧೂಳಿಪಟ ಆಗಲಿದೆ ಕಾಂಗ್ರೆಸ್: ಮುತಾಲಿಕ್‌