ಸಿಎಂ ಸಿದ್ದರಾಮಯ್ಯರಿಂದ 26 ರಂದು ನಗರ ಪಾಲಿಕೆಯ ವಲಯ ಕಚೇರಿ 3ರ ನೂತನ ಕಟ್ಟಡ ಉದ್ಘಾಟನೆ

KannadaprabhaNewsNetwork |  
Published : Apr 24, 2025, 02:06 AM ISTUpdated : Apr 24, 2025, 12:48 PM IST
5 | Kannada Prabha

ಸಾರಾಂಶ

ಸುಂದರ ವಿನ್ಯಾಸದ ಕಟ್ಟಡ, ಉದ್ಯಾನವನ, ಧ್ವಜ ಸ್ತಂಭ, ವಿಶೇಷ ಚೇತನರಿಗೆ ರ್ಯಾಂಪ್, ಶೌಚಾಲಯ, ಶುದ್ಧ ಕುಡಿಯುವ ನೀರು, ಶಿಶುಪಾಲನಾ ಕೇಂದ್ರ, ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹ,

 ಮೈಸೂರು : ಶಾರದಾದೇವಿನಗರ ಹೈಟೆನ್ಷನ್ ರಸ್ತೆ ತಿಬ್ಬಾದೇವಿ ವೃತ್ತದ ಹತ್ತಿರದಲ್ಲಿ ನಿರ್ಮಿಸಲಾಗಿರುವ ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ 3ರ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಏ.26ರ ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ ಎಂದು ಪಾಲಿಕೆ ಉಪ ಆಯುಕ್ತ ದಾಸೇಗೌಡ ತಿಳಿಸಿದರು.

ಈ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ರಹೀಂ ಖಾನ್, ಬಿ. ಸುರೇಶ್, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸುನಿಲ್ ಬೋಸ್, ನಿಗಮ ಮಂಡಲಿ ಅಧ್ಯಕ್ಷರಾದ ಅನಿಲ್ ಚಿಕ್ಕಮಾದು, ರಮೇಶ ಬಂಡಿಸಿದ್ದೇಗೌಡ, ಮಾನಸ, ಡಾ. ಪುಷ್ಪಾ ಅಮರನಾಥ್ ಮೊದಲಾದವರು ಅತಿಥಿಯಾಗುವರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸುವರು ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಾರದಾದೇವಿನಗರ, ಕುವೆಂಪುನಗರ, ಬೋಗಾದಿ, ರಾಮಕೃಷ್ಣನಗರ, ದಟ್ಟಗಳ್ಳಿ, ಕೆ.ಜಿ. ಕೊಪ್ಪಲು, ಸರಸ್ವತಿಪುರಂ, ನಿವೇದಿತಾನಗರ, ಟಿ.ಕೆ. ಬಡಾವಣೆ, ವಿಜಯನಗರ 3ನೇ ಹಂತ ಪ್ರದೇಶಗಳ ವ್ಯಾಪ್ತಿಗೆ ಒಳಪಡುವ ನಾಗರಿಕರಿಗೆ ಉತ್ತಮ ಸೌಲಭ್ಯ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು.

2021ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಿಎ ನಿವೇಶ ಮಂಜೂರು ಮಾಡಿತು. 1 ಕರೆ 12 ಗುಂಟೆ ಪ್ರದೇಶದಲ್ಲಿ 166 ಚದರ ವಿಸ್ತೀರ್ಣದ 2 ಅಂತಸ್ತಿನ ಸುಸಜ್ಜಿತವಾದ ವಲಯ ಕಚೇರಿ 3ರ ಕಚೇರಿಯ ಕಟ್ಟಡವನ್ನು ಅಂದಾಜು 6.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.

ಕಟ್ಟಡದ ವೈಶಿಷ್ಟ್ಯತೆ

ಸುಂದರ ವಿನ್ಯಾಸದ ಕಟ್ಟಡ, ಉದ್ಯಾನವನ, ಧ್ವಜ ಸ್ತಂಭ, ವಿಶೇಷ ಚೇತನರಿಗೆ ರ್ಯಾಂಪ್, ಶೌಚಾಲಯ, ಶುದ್ಧ ಕುಡಿಯುವ ನೀರು, ಶಿಶುಪಾಲನಾ ಕೇಂದ್ರ, ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹ, ಲಿಫ್ಟ್ ವ್ಯವಸ್ಥೆ ಇದೆ. ಕಂದಾಯ ವಿಭಾಗ, ಆರೋಗ್ಯ ವಿಭಾಗ, ಎಂಜಿನಿಯರ್ ವಿಭಾಗ, ಕಂಪ್ಯೂಟರ್ ವಿಭಾಗ ಸೇರಿ ಆಯಾಯ ಅಧಿಕಾರಿ, ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಸಂಪೂರ್ಣವಾಗಿ ಕೊಠಡಿ ನಿರ್ಮಿಸಲಾಗಿದೆ. ಕಡತಗಳ ಸಂರಕ್ಷಣೆಗಾಗಿ ವ್ಯವಸ್ಥಿತವಾದ ಕಪಾಟುಗಳನ್ನು ಒಳಗೊಂಡ ದಾಖಲಾತಿ ಕೊಠಡಿಗಳನ್ನು ಸ್ಥಾಪಿಸಲಾಗಿದೆ. 60 ಜನರು ಸಭೆ ನಡೆಸಲು ಸುಸಜ್ಜಿತವಾದ ಸಭಾಂಗಣ ನಿರ್ಮಿಸಲಾಗಿದೆ ಎಂದು ಅವರು ವಿವರಿಸಿದರು.

ಪಾಲಿಕೆಯ ಉಪ ಆಯುಕ್ತರಾದ ಕೆ.ಜೆ. ಸಿಂಧು, ಜಿ.ಎಸ್. ಸೋಮಶೇಖರ್, ವಲಯ ಕಚೇರಿ 3ರ ಆಯುಕ್ತ ಟಿ.ಎಸ್. ಸತ್ಯಮೂರ್ತಿ ಮೊದಲಾದವರು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ