ಕಾಶಿ ಮಾದರಿಯಲ್ಲಿ ಗಾಣಗಾಪೂರ ಅಭಿವೃದ್ಧಿ ಮಾಡಿ

KannadaprabhaNewsNetwork | Published : Apr 19, 2025 1:54 AM

ಸಾರಾಂಶ

ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿರುವ ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದಲ್ಲಿ ನೆಲೆಸಿರುವ ಶ್ರೀಗುರು ದತ್ತಾತ್ರೇಯ ಮಹಾರಾಜರ ಧಾರ್ಮಿಕ ಸ್ಥಳವನ್ನು ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿಯಲ್ಲಿ ಸಮಗ್ರ ಅಭಿವೃದ್ಧಿ ಮಾಡುವಂತೆ ಆಗ್ರಹಿಸಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟಿಕಾರ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭವಾಗಿದೆ.

ಕನ್ನಡಪ್ರಭ ವಾರ್ತೆ ಚವಡಾಪುರದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿರುವ ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದಲ್ಲಿ ನೆಲೆಸಿರುವ ಶ್ರೀಗುರು ದತ್ತಾತ್ರೇಯ ಮಹಾರಾಜರ ಧಾರ್ಮಿಕ ಸ್ಥಳವನ್ನು ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿಯಲ್ಲಿ ಸಮಗ್ರ ಅಭಿವೃದ್ಧಿ ಮಾಡುವಂತೆ ಆಗ್ರಹಿಸಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟಿಕಾರ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭವಾಗಿದೆ.ಶಿವಕುಮಾರ ನಾಟಿಕಾರ ಮಾತನಾಡಿ, ಭೀಮಾ ಮತ್ತು ಅಮರ್ಜಾ ನದಿಗಳ ಪವಿತ್ರ ಸಂಗಮ ಸ್ಥಳದಲ್ಲಿ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನಿರ್ಗುಣ ಪಾದುಕಗಳ ದರ್ಶನ ಭಾಗ್ಯಕ್ಕಾಗಿ ದಿನನಿತ್ಯ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ ದೇಶ ವಿದೇಶಗಳ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಬಂದು ಹೋಗುತ್ತಾರೆ. ಆದರೆ ದೇವಸ್ಥಾನ ಇಲ್ಲಿವರೆಗೂ ಯಾವುದೇ ಅಭಿವೃದ್ಧಿ ಹೊಂದಿಲ್ಲ, ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಈ ದೇವಸ್ಥಾನವು ಸರ್ಕಾರಕ್ಕೆ ಕೇವಲ ಆದಾಯದಾಯಕ ದೇವಸ್ಥಾನವಾಗಿದೆ. ಅಭಿವೃದ್ಧಿ ಮಾತ್ರ ಶೂನ್ಯ ಎಂದು ದೂರಿದ್ದಾರೆ.

ಎಲ್ಲಾ ಧರ್ಮೀಯರ ಪಾಲಿಗೆ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ದೇವಲ ಗಾಣಗಾಪುರ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 200 ಕೋಟಿ ರು. ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.ಚಿನ್ಮಯಗಿರಿಯ ವೀರಮಹಾಂತ ಶಿವಾಚಾರ್ಯರು ಮಾತನಾಡಿ, ಗಾಣಗಾಪುರ ಅಭಿವೃದ್ಧಿಗೆ ಹೋರಾಟ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ. ಈ ಹೋರಾಟದಿಂದ ಗಾಣಗಾಪೂರ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ಈ ಪುಣ್ಯಕ್ಷೇತ್ರ ರಾಷ್ಟ್ರ ಮಟ್ಟದಲ್ಲಿ ಹೆಸರಾಗಲೆಂದರು. ಅರ್ಚಕರಿಂದ ಬೆಂಬಲ:

ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಅರ್ಚಕರಾದ ಪ್ರಿಯಾಂಕ್ ಭಟ್ ಪೂಜಾರಿ, ಉದಯ ಭಟ್ ಪೂಜಾರಿ, ಶ್ರೀಪಾದ್ ಭಟ್ ಪೂಜಾರಿ, ಗಂಗಾಧರ ಭಟ್ ಪೂಜಾರಿ, ಮಹೇಶ್ ಭಟ್ ಪೂಜಾರಿ ಸೇರಿದಂತೆ ಅರ್ಚಕರು ಬೆಂಬಲಿಸಿದ್ದಾರೆ.

ಬೇಡಿಕೆಗಳು:ಶ್ರೀ ಕ್ಷೇತ್ರ ದೇವಲ ಗಾಣಗಾಪುರ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಶ್ರೀ ದತ್ತಾತ್ರೇಯ ಮಹಾರಾಜರ ದೇವಸ್ಥಾನ ಮತ್ತು ಸಂಗಮ ಸ್ಥಳಗಳನ್ನು ಕಾಶಿ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು. ದೇವಲ ಗಾಣಗಾಪುರ ದೇವಸ್ಥಾನದ ಸುತ್ತಮುತ್ತಲಿನ ಪ್ರಾಂಗಣ ಹಾಗೂ ರಸ್ತೆಗಳ ಅಗಲೀಕರಣ ಕೈಗೊಂಡು ಕಾರಿಡಾರ್ ಅಭಿವೃದ್ಧಿ, ಸಂಗಮದಲ್ಲಿ "ಅಷ್ಟ ತೀರ್ಥ "ಗಳಿಗೆ ರಸ್ತೆ ನಿರ್ಮಾಣ ಮಾಡಬೇಕು. ಸುಸಜ್ಜಿತವಾದ ಯಾತ್ರಿಕ ನಿವಾಸ ನಿರ್ಮಾಣ, ಅನ್ನಪ್ರಸಾದ ನಿಲಯ ನಿರ್ಮಾಣ ಮಾಡಬೇಕು. ಭೀಮಾ-ಅಮರ್ಜಾ ನದಿ ದಡದಲ್ಲಿ ಸುಸಜ್ಜಿತ ಘಾಟ್, ಗಾಣಗಾಪುರ ಬ್ಯಾರೇಜ್- ಸಂಗಮ ಉದ್ಯಾನವನ ದೇವಲ ಗಾಣಗಾಪುರ ಮತ್ತು ಸಂಗಮದಲ್ಲಿ ಪಾರ್ಕಿಂಗ್, ಹೈ ಟೆಕ್ ಶೌಚಾಲಯ ಮತ್ತು ಸ್ನಾನ ಗೃಹ ನಿರ್ಮಾಣ ಮಾಡಬೇಕೆಂದು ಬೇಡಿಕೆ ಇಟ್ಟರು.

ಚನ್ನಶೇಖರ ಶಿವಾಚಾರ್ಯರು, ಶಿವಾನಂದ ಮಹಾಸ್ವಾಮೀಜಿ, ಬಸವ ಮಹಾಸ್ವಾಮೀಜಿ, ಮುರಳಾರಾಧ್ಯ ಶಿವಾಚಾರ್ಯರು, ಮುಖಂಡರಾದ ಮಾರುತಿ ಮೂರನೇತ್ತಿ, ತಿಪ್ಪಣ್ಣ ಚಿನ್ಮಳ್ಳಿ, ಖಾಜಾಸಾಬ ಚೌಗಡಿ, ಮಲ್ಲಿಕಾರ್ಜುನ ಸಿಂಗೆ, ರಾಜಕುಮಾರ ಉಕ್ಕಲಿ, ದತ್ತು ಹೇರೂರ, ಜಮೀರ್ ಗೌಂಡಿ, ಸಿದ್ದು ಡಾಂಗೆ, ದಿಗಂಬರ ಡಾಂಗೆ,ಭಾಗಪ್ಪ ವಡಗೇರಿ,ಮಹೆಬೂಬ ತಾಂಬೋಳಿ, ಈರಣ್ಣ ಹಾಗರಗುಂಡಗಿ,ರಾಜು ಜಮಾದಾರ,ಕಾಂತು ಮಾವುರ, ರಾಜೇಂದ್ರ ಸರ್ದಾರ್,ವಿಜಯ ವಡಗೇರಿ,ಮರೇಪ್ಪ ಜಮಾದಾರ, ಯಲ್ಲಪ್ಪ ರಾಮಗಾ, ಅಂಬರೀಷ್ ಕಾಮನಕೇರಿ,ಅಮೂಲ್ ಮೂರೆ ಸೇರಿದಂತೆ ಅನೇಕರು ಧರಣಿಯಲ್ಲಿದ್ದರು.

Share this article