ದೇಶದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ

KannadaprabhaNewsNetwork | Published : Jul 16, 2024 12:36 AM

ಸಾರಾಂಶ

ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕಲಿತು ಜೀವನದ ಗುರಿ ಮುಟ್ಟಬೇಕು. ಏಕಾಗ್ರತೆಯಿಂದ ಅಭ್ಯಾಸ ಮಾಡಿ ಪರೀಕ್ಷೆಯನ್ನು ಆಡಿ ಗೆಲ್ಲುವ ಆತ್ಮವಿಶ್ವಾಸ ತಮ್ಮದಾಗಿಸಿಕೊಳ್ಳಬೇಕು. ಭಯದಿಂದ ಓದಬಾರದು. ಪರೀಕ್ಷೆ ಸಂದರ್ಭ ಆತಂಕಕ್ಕೆ ಒಳಗಾಗದೆ ಮುಕ್ತವಾಗಿ ಓದಿದರೆ ಹೆಚ್ಚು ಅಂಕಗಳಿಸಬಹುದು

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಕ್ಷೇತ್ರದಲ್ಲಿ ಅನಕ್ಷರತೆಯನ್ನು ಹೋಗಲಾಡಿಸುವುದೇ ತಮ್ಮ ಕೆ.ಹೆಚ್.ಪಿ ಫೌಂಡೇಷನ್ ಗುರಿ. ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ದೊರಕಿಸುವ ಮೂಲಕ ಅವರನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಪ್ರಗತಿ ಪಥದತ್ತ ಸಾಗುವಂತೆ ಮಾಡುವುದು ತಮ್ಮ ದೃಢ ಸಂಕಲ್ಪವಾಗಿದೆ ಎಂದು ಶಾಸಕ ಕೆ.ಹೆಚ್. ಪುಟ್ಟಸ್ವಾಮಿ ಗೌಡ ಹೇಳಿದರು.

ನಗರದ ಹೊರವಲಯದಲ್ಲಿರುವ ಸಮಾನತಾಸೌಧದ ಒಳಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕಿನಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಶೈಕ್ಷಣಿಕ ಪ್ರಗತಿಗೆ ಆದ್ಯತೆ

ಕೆ.ಹೆಚ್.ಪಿ ಫೌಂಡೇಷನ್ ವತಿಯಿಂದ ಈ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಈಗಾಗಲೇ ಬಸ್ ಪಾಸ್ ವಿತರಣೆ, ಉಚಿತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ, ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರ, ಸಿಇಟಿ-ನೀಟ್ ಪರೀಕ್ಷಗೆ ತಯಾರಿ ಈ ರೀತಿ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಗತಿ ಪಥದತ್ತ ಕೊಂಡೊಯ್ಯುವಂತೆ ಪೋಷಕರಿಗೆ ಕರೆ ನೀಡಿದರು.

ಹಿರಿಯ ಲೇಖಕ ಪುಸ್ತಕಮನೆ ಶ್ರೀ ಹರಿಹರಪ್ರಿಯ ಮಾತನಾಡಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕಲಿತು ಜೀವನದ ಗುರಿ ಮುಟ್ಟಬೇಕು. ಏಕಾಗ್ರತೆಯಿಂದ ಅಭ್ಯಾಸ ಮಾಡಿ ಪರೀಕ್ಷೆಯನ್ನು ಆಡಿ ಗೆಲ್ಲುವ ಆತ್ಮವಿಶ್ವಾಸ ತಮ್ಮದಾಗಿಸಿಕೊಳ್ಳಬೇಕು. ಭಯದಿಂದ ಓದಬಾರದು. ಪರೀಕ್ಷೆ ಸಂದರ್ಭ ಆತಂಕಕ್ಕೆ ಒಳಗಾಗದೆ ಮುಕ್ತವಾಗಿ ಓದಿದರೆ ಹೆಚ್ಚು ಅಂಕಗಳಿಸಬಹುದು ಎಂದು ಹೇಳಿದರು

ಶಿವಗಂಗಾ ಕ್ಷೇತ್ರ ಮಠ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀನಿವಾಸಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸಮೂರ್ತಿ, ಕೋಚಿಮುಲ್ ಕಾಂತರಾಜು, ತಹಸೀಲ್ದಾರ್ ಮಹೇಶ್.ಎಸ್.ಪತ್ರಿ, ಪೌರಾಯುಕ್ತೆ ಡಿ.ಎಂ. ಗೀತಾ, ಶೈಲಜಾಸಪ್ತಗಿರಿ, ಆರ್. ಅಶೋಕ್, ಆರಕ್ಷಕ ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

Share this article