ದೇವರ ಮೇಲಿನ ಭಕ್ತಿಯೇ ಮೋಕ್ಷಕ್ಕೆ ದಾರಿ: ಸಿರಿಗೆರೆ ಶ್ರೀ ಆಶೀರ್ವಚನ

KannadaprabhaNewsNetwork | Published : Apr 15, 2024 1:17 AM

ಸಾರಾಂಶ

ಬುದ್ಧಿಯಿಂದ ಮಾಡುವ ಆಲೋಚನೆ ಹಾಗೂ ಹೃದಯದಿಂದ ಮಾಡುವ ಆಲೋಚನೆಗೂ ವ್ಯತ್ಯಾಸವಿದೆ. ಹೃದಯದಿಂದ ಮಾಡುವ ಆಲೋಚನೆಗಳು ನಿಸ್ವಾರ್ಥ ಹಾಗೂ ಪವಿತ್ರವಾಗಿವೆ. ಮನುಷ್ಯನಿಗೆ ದೇವರಮೇಲಿನ ನಿಜವಾದ ಭಕ್ತಿಯೇ ಮೋಕ್ಷಕ್ಕೆ ದಾರಿಯಾಗಿದೆ ಎಂದು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೊನ್ನಾಳಿಯಲ್ಲಿ ನುಡಿದಿದ್ದಾರೆ.

- ಶ್ರೀ ವೀರಭದ್ರ, ಶನೇಶ್ವರ ದೇಗುಲಗಳ ಕಳಸಾರೋಹಣ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಬುದ್ಧಿಯಿಂದ ಮಾಡುವ ಆಲೋಚನೆ ಹಾಗೂ ಹೃದಯದಿಂದ ಮಾಡುವ ಆಲೋಚನೆಗೂ ವ್ಯತ್ಯಾಸವಿದೆ. ಹೃದಯದಿಂದ ಮಾಡುವ ಆಲೋಚನೆಗಳು ನಿಸ್ವಾರ್ಥ ಹಾಗೂ ಪವಿತ್ರವಾಗಿವೆ. ಮನುಷ್ಯನಿಗೆ ದೇವರಮೇಲಿನ ನಿಜವಾದ ಭಕ್ತಿಯೇ ಮೋಕ್ಷಕ್ಕೆ ದಾರಿಯಾಗಿದೆ ಎಂದು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.

ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಶ್ರೀ ಈಶ್ವರ ಸ್ವಾಮಿ ದೇವಾಲಯಗಳ ಕಳಸಾರೋಹಣದ ಪ್ರಯುಕ್ತ ಚೀಲೂರು ಗ್ರಾಮದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಮೋಕ್ಷಪ್ರಾಪ್ತಿಗೆ ಭಕ್ತಿಮಾರ್ಗ ಅತ್ಯುತ್ತಮವಾದುದು. ಆದ್ದರಿಂದ, ಎಲ್ಲರೂ ಗುರು-ಹಿರಿಯರಲ್ಲಿ, ದೇವರುಗಳಲ್ಲಿ ಭಯ-ಭಕ್ತಿಯಿಂದ ನಡೆದುಕೊಳ್ಳಬೇಕು. ಆ ಮೂಲಕ ಮೋಕ್ಷ ಹೊಂದಬೇಕು ಎಂದರು.

ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಠ-ಮಂದಿರಗಳು ಮನುಷ್ಯನಿಗೆ ಶಾಂತಿ-ನೆಮ್ಮದಿ ನೀಡುತ್ತವೆ. ಗುರುಗಳ ಮಾರ್ಗದರ್ಶನದಿಂದ ಬದುಕಿಗೆ ಅರ್ಥಪೂರ್ಣವಾದ ದಾರಿ ಕಂಡುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.

ಮುಖಂಡರಾದ ಎಚ್.ಆರ್. ಸೋಮಶೇಖರ್, ಜಾವಳ್ಳಿಯ ಅರಬಿಂದೋ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಎಂ.ಎನ್. ವಿನಾಯಕ ಇತರರು ಮಾತನಾಡಿದರು.

ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ. ವಿಶ್ವನಾಥ್, ಶಿವಪ್ಪ ಕೋಡಿಕೊಪ್ಪ, ಎಚ್.ಎ. ಗದ್ದಿಗೇಶ್, ತಾಪಂ ಮಾಜಿ ಅಧ್ಯಕ್ಷ ಡಿ.ಜಿ. ರಾಜಪ್ಪ, ಮಾಜಿ ಸದಸ್ಯ ಸಿ.ಎಲ್. ಸತೀಶ್, ರೂಪ, ಕೆ.ಪಿ. ರವಿಕುಮಾರ ಗೌಡ, ಎಚ್.ಶಿವಪ್ಪ, ಯತೀಶ್‍ಚಂದ್ರ ಕೋರಿ, ಶಿವ ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಗೂ ಚೀಲೂರು ಗ್ರಾಮದ ಮುಖಂಡರಾದ ಪಿ.ಜಿ. ವೀರಭದ್ರಪ್ಪಗೌಡ, ಸಮಿತಿಯ ಧರ್ಮದರ್ಶಿಗಳಾದ ಜಿ. ಚಂದ್ರಶೇಖರಪ್ಪಗೌಡ, ಕೆ.ಎಂ. ಗಣೇಶ್ ಇತರರು ಇದ್ದರು.

ಕಾರ್ಯಕ್ರಮದಲ್ಲಿ ಚೀಲೂರು ಗ್ರಾಮಸ್ಥರು ಮತ್ತು ತರಳಬಾಳು ಯುವ ಪಡೆ ವತಿಯಿಂದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೆ ಭಕ್ತಿ ಸಮರ್ಪಣೆ ಮಾಡಲಾಯಿತು.

- - -

-14ಎಚ್.ಎಲ್.ಐ1:

ಧರ್ಮಸಭೆಯಲ್ಲಿ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ ಆಶೀರ್ವಚನ ನೀಡಿದರು.

Share this article