ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಶೋಷಿತರ ಧ್ವನಿ: ಡಾ. ಬಿ.ಪಿ. ಮಹೇಂದ್ರಕುಮಾರ

KannadaprabhaNewsNetwork | Published : Nov 16, 2024 12:30 AM

ಸಾರಾಂಶ

ಬ್ರಿಟಿಷ್ ಸರ್ಕಾರವು ಬುಡಕಟ್ಟು ಜನಾಂಗದ ಜಮೀನನ್ನು ವಶಪಡಿಸಿಕೊಳ್ಳುವಾಗ ಹಾಗೂ ಕಾಡುಗಳಿಂದ ಬೆಲೆಬಾಳುವ ಮರವನ್ನು ಕಡಿಯುವಾಗ ಮತ್ತು ಜನರ ಸಂಪನ್ಮೂಲಗಳ ಹಕ್ಕನ್ನು ಸ್ವಾಧೀನಪಡಿಸಿ ಕೊಳ್ಳುವಾಗ ಅವರು ಭೂಮಿ ಮತ್ತು ಸಂಪನ್ಮೂಲಗಳ ಹಕ್ಕಿಗಾಗಿ ಜನಜಾಗೃತಿ ಮೂಡಿಸಿದಲ್ಲದೇ ಉಳುವವನೇ ಒಡೆಯ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದರು.

ಹಳಿಯಾಳ: ಬ್ರಿಟಿಷ ವಸಾಹತುಶಾಹಿ ವಿರುದ್ಧ ಮತ್ತು ಬುಡಕಟ್ಟು ಸಮುದಾಯಗಳ ಶೋಷಣೆಯ ವಿರುದ್ಧ ಹೋರಾಡಿದ ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರ ಬದುಕು ಹಾಗೂ ನಾಯಕತ್ವವು ದೇಶವಾಸಿಗಳಿಗೆ ಪ್ರೇರಣೆಯಾಗಲಿ ಎಂದು ಬುಡಕಟ್ಟು ಸಮುದಾಯದ ಸಬಲೀಕರಣ ಹೋರಾಟಗಾರ, ಸಮಾಜಸೇವಕ ಡಾ. ಬಿ.ಪಿ. ಮಹೇಂದ್ರಕುಮಾರ ತಿಳಿಸಿದರು.

ಶುಕ್ರವಾರ ಪಟ್ಟಣದ ಡಾ. ಬಾಬು ಜಗಜೀವನರಾಮ ಸಭಾಭವನದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಬ್ರಿಟಿಷ್ ಸರ್ಕಾರವು ಬುಡಕಟ್ಟು ಜನಾಂಗದ ಜಮೀನನ್ನು ವಶಪಡಿಸಿಕೊಳ್ಳುವಾಗ ಹಾಗೂ ಕಾಡುಗಳಿಂದ ಬೆಲೆಬಾಳುವ ಮರವನ್ನು ಕಡಿಯುವಾಗ ಮತ್ತು ಜನರ ಸಂಪನ್ಮೂಲಗಳ ಹಕ್ಕನ್ನು ಸ್ವಾಧೀನಪಡಿಸಿ ಕೊಳ್ಳುವಾಗ ಅವರು ಭೂಮಿ ಮತ್ತು ಸಂಪನ್ಮೂಲಗಳ ಹಕ್ಕಿಗಾಗಿ ಜನಜಾಗೃತಿ ಮೂಡಿಸಿದಲ್ಲದೇ ಉಳುವವನೇ ಒಡೆಯ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದರು ಎಂದರು.ಹಳಿಯಾಳ ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ ಅವರು ಸಮಾಂರಭಕ್ಕೆ ಚಾಲನೆ ನೀಡಿದರು. ಹಳಿಯಾಳ ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಅವರು ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ ಅಭಿಯಾನದ ಪ್ರಚಾರ ಪತ್ರವನ್ನು ಬಿಡುಗಡೆ ಮಾಡಿದರು.ಸೌಲಭ್ಯ ವಿತರಣೆ: ಕಾರ್ಯಕ್ರಮದಲ್ಲಿ ಬುಡಕಟ್ಟು ಸಮುದಾಯದವರಿಗೆ ಕೃಷಿ ಇಲಾಖೆಯಿಂದ ಹಿಂಗಾರು ಬೆಳೆ ಬಿತ್ತನೆ ಬೀಜದ ಪ್ಯಾಕೇಟ್‌ಗಳನ್ನು ಮತ್ತು ಸಮಾಜ ಕಲ್ಯಾಣ ಇಲಾಖೆಯವರು ಪೌಷ್ಟಿಕ ಆಹಾರವನ್ನು ವಿತರಿಸಿದರು. ಸನ್ಮಾನ: ಕಾರ್ಯಕ್ರಮದಲ್ಲಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಯನ್ನು ಮಾಡಿದ ಬುಡಕಟ್ಟು ಸಮುದಾಯದ ಕುಸ್ತಿಪಟುಗಳಾದ ಪ್ರಿನ್ಸಿಟಾ ಸಿದ್ದಿ, ಶಾಲಿನಾ ಸಿದ್ದಿ ಮತ್ತು ರೋಹನ್ ದೊಡ್ಮಣಿ ಮತ್ತು ಗ್ರೀನ್ ಇಂಡಿಯಾ ಬುಡಕಟ್ಟು ಸಬಲೀಕರಣ ಯೋಜನೆ ದಾಂಡೇಲಿ ನಿರ್ದೇಶಕ ಡಾ. ಬಿ.ಪಿ. ಮಹೇಂದ್ರಕುಮಾರ ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ವೈ.ಕೆ. ಉಮೇಶ, ಪುರಸಭಾ ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಹೆಸ್ಕಾಂ ಎಇಇ ರವೀಂದ್ರ ಮೆಟಗುಡ್, ಕೃಷಿ ಸಹಾಯಕ ನಿರ್ದೇಶಕ ಪಿ.ಐ. ಮಾನೆ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಅಶೋಕ ಪವಾರ, ದರ್ಶನ ನಾಯಕ, ಪರಿಶಿಷ್ಟ ವರ್ಗಗಳ ಇಲಾಖೆ ವಿಜಯಕುಮಾರ ಪಾಟೀಲ, ಪಿಎಸ್ಐ ಅಮೀನ ಅತ್ತಾರ, ಬುಡಕಟ್ಟು ಸಿದ್ದಿ ಸಮುದಾಯದ ಮುಖಂಡ ಇಮಾಮಹುಸೇನ್, ಯಾಕೂಬ, ಮೋನು ದೊಡ್ಮಣಿ ಇದ್ದರು.

ವಾಟಾಳ್ ನಾಗರಾಜ್‌ರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲು ಆಗ್ರಹ

ಸಿದ್ದಾಪುರ: ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ವಾಟಾಳ್ ನಾಗರಾಜ್ ಅವರನ್ನು ಆಯ್ಕೆ ಮಾಡಬೇಕೆಂದು ಕದಂಬ ಸೈನ್ಯ ಕನ್ನಡ ಸಂಘಟನೆಯ ರಾಜ್ಯಾಧ್ಯಕ್ಷ ಬೇಕರಿ ರಮೇಶ್ ಆಗ್ರಹಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಟಾಳ ನಾಗರಾಜ್ ಅವರು ಕನ್ನಡ ನಾಡು, ನುಡಿಗಾಗಿ ಹಲವು ಹೋರಾಟಗಳನ್ನು ಮಾಡಿದ್ದಾರೆ. ಹೀಗಾಗಿ ವಾಟಾಳ್‌ ನಾಗರಾಜ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವುದು ಸೂಕ್ತ ಎಂದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಮಹದೇವಸ್ವಾಮಿ ಮೈಸೂರು, ಗುತ್ಯಪ್ಪ ಮಾದರ್ ಬನವಾಸಿ, ಪ್ರಕಾಶ್ ಶಿವಪ್ಪ ಕಬ್ಬೇರ, ಹೊನ್ನಪ್ಪ ಮಹದೇವ ನಾಯ್ಕ, ಲೋಕೇಶ್ ಸಿದ್ದಾರ್ಥ್ ಸರಳಗಿ, ಸಲ್ಮಾನ್ ಇದ್ದರು.

Share this article