ಡಿಜಿಟಲ್‌ ಸ್ಟಾರ್ಟರ್‌ ರಿಪೇರಿ ದುರಸ್ತಿ ಅನುಮಾನಕ್ಕೆಡೆ

KannadaprabhaNewsNetwork | Published : Mar 19, 2024 12:49 AM

ಸಾರಾಂಶ

ಡಿಜಿಟಲ್‌ ಸ್ಟಾರ್ಟರ್‌ ದುರಸ್ತಿಗೆ ಎಲ್‌ಎನ್‌ಟಿ ಹಾಗೂ ಇನ್ನಿತರ ಟೆಕ್ನಿಷಿಯನ್‌ ಕರೆಸಿದರೂ ದುರಸ್ಥಿಯಾಗದ ಡಿಜಿಟಲ್‌ ಸ್ಟಾರ್ಟರ್‌ ಸೋಮವಾರ ದಿಢೀರ್‌ ಒಂದೇ ದಿನಕ್ಕೇ ದುರಸ್ಥಿಯಾಗಿರುವುದು ಆಶ್ಚರ್ಯ ತರಿಸಿದೆ.

ರಂಗೂಪುರ ಶಿವಕುಮಾರ್‌ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಕಳೆದ 20 ಕ್ಕೂ ಹೆಚ್ಚು ದಿನಗಳಿಂದಲೂ ಗುಂಡ್ಲುಪೇಟೆ ಪಟ್ಟಣಕ್ಕೆ ಕಬಿನಿ ಕುಡಿಯುವ ನೀರಿಲ್ಲ, ಜನರು ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ಕಳೆದ 20 ದಿನಗಳಿಂದ ಹಿಂದೆ ಕೆಟ್ಟಿದ್ದ ಡಿಜಿಟಲ್‌ ಸ್ಟಾರ್ಟರ್‌ ಈಗ ದಿಢೀರ್‌ ದುರಸ್ತಿ ಪಡಿಸಿರುವುದು ಹಲವು ಅನುಮಾನಕ್ಕೆಡೆ ಮಾಡಿದೆ ಜೊತೆಗೆ ಡಿಜಿಟಲ್‌ ಸ್ಟಾರ್ಟರ್‌ ಒಂದೇ ದಿನಕ್ಕೇ ರಿಪೇರಿ ಆಗಿದ್ದು ಕೂಡ ಪವಾಡವಲ್ಲದೇ ಮತ್ತೇನು? ಕಳೆದ 20 ದಿನಗಳ ಹಿಂದೆ ಸಿಂಧುವಳ್ಳಿ ಜಲ ಸಂಗ್ರಾಹಾಲಯದಲ್ಲಿ ಡಿಜಿಟಲ್‌ ಸ್ಟಾರ್ಟರ್‌ ಕೆಟ್ಟಿವೆ. ದುರಸ್ತಿಗೆ ಪುರಸಭೆ ತನ್ನೇಲ್ಲ ಶ್ರಮ ಹಾಕಿತ್ತು ಆದರೂ ಡಿಜಿಟಲ್‌ ಸ್ಟಾರ್ಟರ್‌ ದುರಸ್ಥಿ ಆಗಲೇ ಇಲ್ಲ. ಡಿಜಿಟಲ್‌ ಸ್ಟಾರ್ಟರ್‌ ದುರಸ್ತಿಗೆ ಎಲ್‌ಎನ್‌ಟಿ ಹಾಗೂ ಇನ್ನಿತರ ಟೆಕ್ನಿಷಿಯನ್‌ ಕರೆಸಿದರೂ ದುರಸ್ಥಿಯಾಗದ ಡಿಜಿಟಲ್‌ ಸ್ಟಾರ್ಟರ್‌ ಸೋಮವಾರ ದಿಢೀರ್‌ ಒಂದೇ ದಿನಕ್ಕೇ ದುರಸ್ಥಿಯಾಗಿರುವುದು ಆಶ್ಚರ್ಯ ತರಿಸಿದೆ.

ಕೆಟ್ಟಿರುವ ಡಿಜಿಟಲ್‌ ಸ್ಟಾರ್ಟರ್‌ ದುರಸ್ತಿ ಆಗಲ್ಲ ಎಂದು ಮನಗಂಡ ಪುರಸಭೆ ಅಧಿಕಾರಿಗಳು ಸಾಪ್ಟ್‌ ಸ್ಟಾರ್ಟರ್‌ ಖರೀದಿಗೆ ಟೆಂಡರ್‌ ಕರೆದು ಮಾ.15ರಂದು ಟೆಂಡರ್‌ ಓಪನ್‌ ಆಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಹೇಳಿದ್ದಾರೆ. ಆದರೆ ಸಾಪ್ಟ್‌ ಸ್ಟಾರ್ಟರ್‌ ಗೆ ಟೆಂಡರ್‌ ಆದ ಬಳಿಕ ಹೊಸ ಸಾಪ್ಟ್‌ ಸ್ಟಾರ್ಟರ್‌ ಬರುವವರೆಗೂ ಜನ ನೀರಿಲ್ಲದೆ ಪರದಾಡುತ್ತಿದ್ದಾರೆ. ಈ ಹಿಂದೆ ಡಿಜಿಟಲ್‌ ಸ್ಟಾರ್ಟರ್‌ ರಿಪೇರಿ ಮಾಡಿಸುತ್ತಿದ್ದ ಗುತ್ತಿಗೆದಾರ ಹಳೇಯ ಬಾಕಿ ಕೊಡೋ ತನಕ ಡಿಜಿಟಲ್‌ ಸ್ಟಾರ್ಟರ್‌ ದುರಸ್ಥಿ ಪಡಿಸಲ್ಲ ಎಂದು ಹೇಳಿದ್ದರು ಎನ್ನಲಾಗಿದೆ. ಈಗ ಇದ್ದಕ್ಕಿಂದಂತೆಯೇ ಸೋಮವಾರ ಬೆಳಗ್ಗೆಯೇ ಫಿನಿಕ್ಸ್‌ ನಂತೆ ಎದ್ದು ಬಂದ ಗುತ್ತಿಗೆದಾರ ಡಿಜಿಟಿಲ್‌ ಸ್ಟಾರ್ಟರ್‌ ರಿಪೇರಿಗೆ ಬೆಂಗಳೂರಿನಿಂದ ಟೆಕ್ನಿಷಿಯನ್‌ ಕರೆಸಿ ದುರಸ್ಥಿಗೆ ಮುಂದಾಗಿದ್ದಾರೆ.ರಾತ್ರಿಯೇ ಬರುತ್ತೇ?: ಪುರಸಭೆ ಇಂಜಿನಿಯರ್‌ ಆರಾಧ್ಯ ಕನ್ನಡಪ್ರಭದೊಂದಿಗೆ ಮಾತನಾಡಿ, ಟೆಕ್ನಿಷಿಯನ್‌ ಬಂದಿದ್ದಾರೆ ಸೋಮವಾರ ರಾತ್ರಿ10 ರೊಳಗೆ ನೀರು ಹರಿದು ಗುಂಡ್ಲುಪೇಟೆಗೆ ಬರಲಿದೆ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಡಿಜಿಟಲ್‌ ಸ್ಟಾರ್ಟರ್‌ ದುರಸ್ತಿಯಾಗಿದೆ ಎಂಬರ್ಥದಲ್ಲಿ ಹೇಳುವ ಮೂಲಕ ಕಬಿನಿ ನೀರು ಮಂಗಳವಾರ ಮುಂಜಾನೆಯೇ ಮನೆಗೆ ಖಂಡಿತ ಬರಲಿದೆ.

ಗಮನ ಸೆಳೆದಿದ್ದ ಕನ್ನಡಪ್ರಭ:

ಗುಂಡ್ಲುಪೇಟೆ ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆಗೆ ಪಟ್ಟಣದ ನಾಗರೀಕರು ಪರದಾಡುತ್ತಿದ್ದಾರೆ ಎಂದು ಕನ್ನಡಪ್ರಭ ಮಾ.13 ರಂದು ಗುಂಡುಪೇಟೆ 15 ದಿನಗಳಿಂದ ಕಬಿನಿ ನೀರಿಲ್ಲ ಹಾಗು ಮಾ.18 ರಂದು ಗುಂಡ್ಲುಪೇಟೇಲಿ ನೀರಿಗಾಗಿ ನಿಲ್ಲದ ಹಾಹಾಕಾರ ಎಂದು ವರದಿ ಪ್ರಕಟಿಸಿ ಜಿಲ್ಲಾಡಳಿತ ಗಮನ ಸೆಳೆದಿತ್ತು. ಇದಾದ ಬಳಿಕ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರು ಖಡಕ್ಕಾಗಿ ಪುರಸಭೆ ಮುಖ್ಯಾಧಿಕಾರಿಗೆ ಹೇಳಿ ಕೂಡಲೇ ನೀರು ಪಟ್ಟಣದ ಜನತೆಗೆ ನೀಡಬೇಕು ಎಂದು ತಾಕೀತು ಮಾಡಿದರು.ಪುರಸಭೆ ಮುಖ್ಯಾಧಿಕಾರಿ ಪ್ರಕಾರ ಹಳೆಯ ಬಿಲ್‌ ಉಳಿಸಿಕೊಂಡಿದ್ದ ಗುತ್ತಿಗೆದಾರರಿಗೆ ಬಿಲ್‌ ಸೆಟಲ್‌ಮೆಂಟ್‌ ಮಾಡಿದರೆ ಡಿಜಿಟಲ್‌ ಸ್ಟಾರ್ಟರ್‌ ರಿಪೇರಿ ಆಗುತ್ತದೆ ಎಂದು ಶಾಸಕರ ಗಮನಕ್ಕೆ ತಂದಾಗ ನೀವು ಏನ್‌ ಮಾಡ್ತೀರೋ ಬಿಡ್ತೀರೋ ಗೊತ್ತಿಲ್ಲ ಜನರಿಗೆ ನೀರು ಕೊಡಿ ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.ಶಾಸಕರ ತಾಕೀತಿನ ಬಳಿಕ ಎಚ್ಚೆತ್ತ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಗುತ್ತಿಗೆದಾರರ ಮನವೊಲಿಸಿ, ಹಳೆ ಬಿಲ್‌ ಕೊಡುತ್ತೇನೆ ಎಂದು ಹೇಳಿದ ನಂತರ ಡಿಜಿಟಲ್‌ ಸಾರ್ಟರ್‌ ದುರಸ್ತಿ ಆಗಿದೆ.ಡಿಜಿಟಲ್‌ ಸ್ಟಾರ್ಟರ್‌ ಕಳೆದ ಹಲವು ವರ್ಷಗಳಿಂದ ದುರಸ್ಥಿ ಪಡಿಸುತ್ತಿದ್ದ ಗುತ್ತಿಗೆದಾರ ಕನ್ನಡಪ್ರಭದೊಂದಿಗೆ ಮಾತನಾಡಿ, ಸೋಮವಾರ ಸ್ಟಾರ್ಟರ್‌ ರಿಪೇರಿ ಆಗುತ್ತದೆ ನೀರು ಕೂಡ ಸೋಮವಾರ ರಾತ್ರಿಯೇ ಬರುತ್ತದೆ ಎಂದು ಹೇಳಿದ್ದಾರೆ.

Share this article