ಇ-ಖಾತಾ ಗೊಂದಲದ ಪ್ರಶ್ನೆಗಳಿಗೆಪೌರಾಡಳಿತ ನಿರ್ದೇಶನಾಲಯ ಉತ್ತರ!

KannadaprabhaNewsNetwork | Published : May 7, 2025 12:49 AM

ಸಾರಾಂಶ

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ ರಿಜಿಸ್ಟರ್‌ನಲ್ಲಿ ದಾಖಲಾದ ಆಸ್ತಿಗಳಿಗೆ ತೆರಿಗೆ ವಿಧಿಸಬೇಕೇ ಅಥವಾ ದಂಡ ವಿಧಿಸಬೇಕೇ ಎಂಬ ಜನ ಸಾಮಾನ್ಯರ ಪ್ರಶ್ನೆಗಳಿಗೆ ಪೌರಾಡಳಿತ ನಿರ್ದೇಶಕನಾಲಯ ಕೆಲ ಸಲಹೆಗಳನ್ನು ಸಾರ್ವಜನಿಕರಿಗೆ ನೀಡಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ ರಿಜಿಸ್ಟರ್‌ನಲ್ಲಿ ದಾಖಲಾದ ಆಸ್ತಿಗಳಿಗೆ ತೆರಿಗೆ ವಿಧಿಸಬೇಕೇ ಅಥವಾ ದಂಡ ವಿಧಿಸಬೇಕೇ ಎಂಬ ಜನ ಸಾಮಾನ್ಯರ ಪ್ರಶ್ನೆಗಳಿಗೆ ಪೌರಾಡಳಿತ ನಿರ್ದೇಶಕನಾಲಯ ಕೆಲ ಸಲಹೆಗಳನ್ನು ಸಾರ್ವಜನಿಕರಿಗೆ ನೀಡಿದೆ.ಪ್ರಶ್ನೆ೧: ಪ್ರಥಮವಾಗಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಯಾವೆಲ್ಲ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು?

ಉತ್ತರ: ಕರ್ನಾಟಕ ಪೌರ ಸಭೆಗಳ ಅಧಿ ನಿಯಮ ೧೯೬೪ ಪ್ರಕರಣ ೯ ಮತ್ತು ಕರ್ನಾಟಕ ಪೌರ ನಿಗಮಗಳ ಅಧಿ ನಿಯಮ ೧೯೭೬ ಪ್ರಕರಣ ೧೧೦ ರಲ್ಲಿ ವಿನಾಯಿತಿಗೊಳಪಟ್ಟ ಆಸ್ತಿಗಳನ್ನು ಹೊರತು ಪಡಿಸಿ ಉಳಿದಂತಹ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು.

ಪ್ರಶ್ನೆ೨: ಎ ರಿಜಿಸ್ಟರ್‌ನಲ್ಲಿ ನಮೂದಿಸಲಾದ ಆಸ್ತಿಗಳು ಯಾವುವು?

ಉತ್ತರ: ಎ) ಗ್ರಾಮ ಠಾಣಾ

ಬಿ) ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕುಪತ್ರಗಳು.

ಸಿ) ಕಂದಾಯ ಇಲಾಖೆಯಿಂದ ೯೪ ಸಿಸಿ ಅಡಿ ನೀಡಲಾದ ಹಕ್ಕು ಪತ್ರ.

ಡಿ) ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ಬಡಾವಣೆಯಲ್ಲಿನ ಸ್ವತ್ತುಗಳು.

ಮೇಲ್ಕಂಡ ಆಸ್ತಿಗಳನ್ನು ಅಧಿಕೃತವೆಂದು ಪರಿಗಣಿಸಿದ್ದು, ಸದರಿ ಆಸ್ತಿಗಳನ್ನು ಎ ರಿಜಿಸ್ಟರ್‌ನಲ್ಲಿ ನಮೂದಿಸಬಹುದಾಗಿದೆ.

ಪ್ರಶ್ನೆ೩: ಬಿ ರಿಜಿಸ್ಟರ್‌ನಲ್ಲಿ ನಮೂದಿಸಲಾದ ಆಸ್ತಿಗಳು ಯಾವುವು?

ಎ) ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆಗಳ ನಿವೇಶನಗಳು/ ಕಟ್ಟಡಗಳು.

ಬಿ) ಭೂ ಪರಿವರ್ತನೆಯಾಗದೇ ಉಪ ವಿಭಜನೆ ಮಾಡಿ ನಿವೇಶನಗಳನ್ನಾಗಿ ಮಾರಾಟ ಮಾಡಿರುವ ನಿವೇಶನಗಳು/ಕಟ್ಟಡಗಳು.

ಮೇಲ್ಕಂಡ ಆಸ್ತಿಗಳನ್ನು ಅನಧಿಕೃತ ಆಸ್ತಿಗಳೆಂದು ಪರಿಗಣಿಸಿದ್ದು, ಸದರಿ ಆಸ್ತಿಗಳನ್ನು ಬಿ ರಿಜಿಸರ್‌ನಲ್ಲಿ ನಮೂದಿಸಬೇಕಾಗುತ್ತದೆ.

ಪ್ರಶ್ನೆ೪: ಬಿ ರಿಜಿಸ್ಟರ್‌ನಲ್ಲಿ ದಾಖಲಿಸಲಾದ ಆಸ್ತಿಗಳಿಗೆ ತೆರಿಗೆ ವಿಧಿಸಬೇಕೇ ಅಥವಾ ದಂಡ ವಿಧಿಸಬೇಕೇ?

ಉತ್ತರ: ಬಿ ರಿಜಿಸ್ಟರ್‌ನಲ್ಲಿ ದಾಖಲಿಸಲಾಗುವ ಆಸ್ತಿಗಳಿಗೆ ಮೊದಲ ಬಾರಿಗೆ ಸ್ವತ್ತು ತೆರಿಗೆಯ ೨ ರಷ್ಟು ತೆರಿಗೆಯನ್ನು ನಂತರದ ವರ್ಷಗಳಲ್ಲಿ ಸ್ವತ್ತು ತೆರಿಗೆಯನ್ನು ಮಾತ್ರ ವಿಧಿಸುವುದು.

ಪ್ರಶ್ನೆ ೫: ಯಾವ ದಿನಾಂಕದವರೆಗೆ ಸೃಜನೆಯಾದ ಆಸ್ತಿಗಳನ್ನು ಬಿ ರಿಜಿಸ್ಟರ್‌ನಲ್ಲಿ ದಾಖಲಿಸಬೇಕು?

ಉತ್ತರ: ಕರ್ನಾಟಕ ಪೌ. ಸಭೆಗಳ ಅಧಿ ನಿಯಮ ೧೯೬೪ ಪ್ರಕರಣ ೧೦೬ ಮತ್ತು ಕರ್ನಾಟಕ ಪೌರ ನಿಗಮಗಳ ಅಧಿ ನಿಯಮ ೧೯೭೬ ಪ್ರಕರಣ ೧೧ (ಬಿ)ಗೆ ೨೦೨೪ ರ ಸೆ.೧೦ ರ ತಿದ್ದು ಪಡಿ ತರಲಾಗಿದ್ದು,ಸದರಿ ತಿದ್ದುಪಡಿಯ ಪೂರ್ವದಲ್ಲಿ ಸೃಜಿಸಲಾದ ಅನಧಿಕೃತ ಆಸ್ತಿಗಳಲ್ಲಿ ಬಿ ರಿಜಿಸ್ಟರ್‌ನಲ್ಲಿ ದಾಖಲಿಸಬೇಕು.

ಪ್ರಶ್ನೆ೬: ಬಿ ರಿಜಿಸ್ಟರ್‌ನಲ್ಲಿ ದಾಖಲಿಸಲು ಪಡೆಯಬೇಕಾದ ದಾಖಲೆಗಳು ಯಾವುದು?

ಉತ್ತರ: ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲಿಕತ್ವ ಸಾಬೀತು ಪಡಿಸುವ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು.

ಪ್ರಶ್ನೆ೭: ಯಾವ ವರ್ಷದಿಂದ ಬಿ ರಿಜಿಸ್ಟರ್‌ನಲ್ಲಿ ದಾಖಲಿಸುವ ಆಸ್ತಿಗಳಿಗೆ ಆಸ್ತಿ ತೆರಿಗೆ ವಿಧಿಸಬೇಕಾಗಿರುತ್ತದೆ?

ಉತ್ತರ: ಕರ್ನಾಟಕ ಪೌ. ಸಭೆಗಳ ಅಧಿ ನಿಯಮ ೧೯೬೪ ಪ್ರಕರಣ ೧೦೬ ಮತ್ತು ಕರ್ನಾಟಕ ಪೌರ ನಿಗಮಗಳ ಅಧಿ ನಿಯಮ ೧೯೭೬ ಪ್ರಕರಣ ೧೧ (ಬಿ)ಗೆ ೨೦೨೪ ರ ಸೆ.೧೦ ರಿಂದ ಜಾರಿಗೆ ಬಂದಿದ್ದು,೨೦೨೪-೨೫ ನೇ ಸಾಲಿನಿಂದ ಆಸ್ತಿ ತೆರಿಗೆ ವಿಧಿಸಬೇಕಾಗಿರುತ್ತದೆ.

ಪ್ರಶ್ನೆ೮: ಬಿ ರಿಜಿಸ್ಟರ್‌ನಲ್ಲಿ ನಮೂದಿಸಲು ಅವಕಾಶವಿಲ್ಲದಿರುವ ಸ್ವತ್ತುಗಳು ಯಾವುವು?

ಉತ್ತರ: ಸರ್ಕಾರಿ ಜಾಗದಲ್ಲಿರುವ ಸ್ವತ್ತುಗಳು, ಸರ್ಕಾರದ ನಿಗಮ ಮಂಡಳಿಗಳ ಜಾಗಗಳು, ನಗರ ಸ್ಥಳೀಯ ಸಂಸ್ಥೆಗಳ ಜಾಗದ ಸ್ವತ್ತುಗಳು.

ಪ್ರಶ್ನೆ೯: ಬಿ ರಿಜಿಸ್ಟರ್‌ನಲ್ಲಿ ದಾಖಲಿರುವ ಆಸ್ತಿಗಳಿಗೆ ಉದ್ಯತಾ/ಖಾತಾ ನೀಡಬಹುದೇ?

ಉತ್ತರ: ಬಿ ರಿಜಿಸ್ಟರ್‌ನಲ್ಲಿ ದಾಖಲಿರುವ ಆಸ್ತಿಗಳಿಗೆ ಇ-ಆಸ್ತಿ ತಂತ್ರಾಂಶದಲ್ಲಿ ನಮೂನೆ ೨ಎ/೩ ಸೃಜಿಸಿ ನೀಡಬಹುದಾಗಿದೆ.

ಪ್ರಶ್ನೆ೧೦: ಅನಧಿಕೃತ ಸ್ವತ್ತುಗಳಿಗೆ ನಮೂನೆ ೨ಎ/೩ಎ ನೀಡಿದ್ದಲ್ಲಿ ಸಕ್ರಮಗೊಳಿದಂತಾಗುವುದೇ?

ಉತ್ತರ: ಇಲ್ಲ, ಆಸ್ತಿ ತೆರಿಗೆ ವಿಧಿಸುವ ಉದ್ದೇಶಕ್ಕಾಗಿ ಪ್ರತ್ಯೇಕ ವಹಿಯಲ್ಲಿ ಅನಧಿಕೃತ ಸ್ವತ್ತುಗಳನ್ನು ದಾಖಲಿಸಿ ನಿರ್ವಹಿಸಲಾಗುತ್ತಿದೆ.

Share this article