ತೆಂಗು ಬೆಳೆಗಾರರಿಗೆ ಹಸಿರೆಲೆ ಗೊಬ್ಬರ, ಔಷಧಿ ವಿತರಣೆ

KannadaprabhaNewsNetwork |  
Published : Mar 11, 2024, 01:18 AM IST
10ಎಚ್ಎಸ್ಎನ್7 : ಸಿಡಿಬಿ ಯೋಜನೆ ಎಲ್ ಓ ಡಿ ಪಿ ಕಾರ್ಯಕ್ರಮದಡಿಯಲ್ಲಿ ರೈತ ಫಲಾನುಭವಿಗಳಿಗೆ ಪರಿಕರ ವಿತರಣಾ ಕಾರ್ಯಕ್ರಮದಲ್ಲಿ  ಶಾಸಕ ಸಿಎನ್  ಬಾಲಕೃಷ್ಣ ರವರು   ರೈತರಿಗೆ ಹಸಿರೆಲೆ ಗೊಬ್ಬರ ಔಷಧಿಗಳನ್ನು ವಿತರಿಸಿದರು. | Kannada Prabha

ಸಾರಾಂಶ

ತೆಂಗಿನ ಬೆಳೆಗೆ ರೋಗ ತಡೆಯಲು ಜೊತೆಗೆ ಹೆಚ್ಚಿನ ಇಳುವರಿ ಪಡೆಯಲು ತೋಟಗಾರಿಕಾ ಇಲಾಖೆ ವತಿಯಿಂದ ತಗಡೂರು ಗ್ರಾಪಂನನ್ನು ಆಯ್ಕೆ ಮಾಡಿಕೊಂಡು ರೈತರಿಗೆ ಸುಮಾರು 17 ಸಾವಿರ ಮೌಲ್ಯದ ಹಸಿರೆಲೆ ಗೊಬ್ಬರ ಮತ್ತು ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಶಾಸಕ ಸಿಎನ್ ಬಾಲಕೃಷ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ತೆಂಗಿನ ಬೆಳೆಗೆ ರೋಗ ತಡೆಯಲು ಜೊತೆಗೆ ಹೆಚ್ಚಿನ ಇಳುವರಿ ಪಡೆಯಲು ತೋಟಗಾರಿಕಾ ಇಲಾಖೆ ವತಿಯಿಂದ ತಗಡೂರು ಗ್ರಾಪಂನನ್ನು ಆಯ್ಕೆ ಮಾಡಿಕೊಂಡು ರೈತರಿಗೆ ಸುಮಾರು 17 ಸಾವಿರ ಮೌಲ್ಯದ ಹಸಿರೆಲೆ ಗೊಬ್ಬರ ಮತ್ತು ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಶಾಸಕ ಸಿಎನ್ ಬಾಲಕೃಷ್ಣ ತಿಳಿಸಿದರು.

ಹೋಬಳಿಯ ತಗಡೂರು ಗ್ರಾಪಂ ಆವರಣದಲ್ಲಿ ತಾಲೂಕು ತೋಟಗಾರಿಕೆ ಇಲಾಖೆ ವತಿಯಿಂದ 2023 - -24ನೇ ಸಾಲಿನ ಸಿಡಿಬಿ ಯೋಜನೆ ಎಲ್ಓಡಿಪಿ ಕಾರ್ಯಕ್ರಮದಡಿಯಲ್ಲಿ ರೈತ ಫಲಾನುಭವಿಗಳಿಗೆ ಪರಿಕರ ವಿತರಣಾ ಕಾರ್ಯಕ್ರಮದಲ್ಲಿ ರೈತರಿಗೆ ಹಸಿರೆಲೆ ಗೊಬ್ಬರ ಔಷಧಿಗಳನ್ನು ವಿತರಿಸಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ತೆಂಗು ಬೆಳೆಗೆ ನುಸಿರೋಗ ಸೇರಿದಂತೆ ವಿವಿಧ ಕಾಯಿಲೆಗಳಿಂದ ತೆಂಗು ಬೆಳೆ ಹಾಳಾಗುತ್ತಿದ್ದು ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ ತಾಲೂಕಿನಲ್ಲಿ ಪ್ರಸ್ತುತ ಈ ಸಾಲಿನಲ್ಲಿ ತಗಡೂರು ಗ್ರಾಪಂನನ್ನು ಆಯ್ಕೆ ಮಾಡಿಕೊಂಡು ಈ ಭಾಗದ ಸುಮಾರು 400ಕ್ಕೂ ಹೆಚ್ಚು ರೈತರಿಗೆ ಉಚಿತವಾಗಿ ಹಸಿರೆಲೆ ಗೊಬ್ಬರ ಸೇರಿದಂತೆ ಔಷಧಿಗಳನ್ನು ವಿತರಿಸಲಾಗುತ್ತಿದೆ ರೈತರು ಈ ಔಷಧಿಗಳನ್ನು ಅಧಿಕಾರಿಗಳ ಸಲಹೆಯಂತೆ ತೆಂಗಿನ ಮರಗಳಿಗೆ ಬಳಸುವ ಮೂಲಕ ಹೆಚ್ಚಿನ ಇಳುವರಿ ಪಡೆಯಲು ಮುಂದಾಗಬೇಕು ಎಂದರು. ತೋಟಗಾರಿಕಾ ಇಲಾಖೆಯಲ್ಲಿ ಅನೇಕ ಸೌಲಭ್ಯಗಳು ರೈತರಿಗೆ ಸಿಗಲಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ತೋಟಗಾರಿಕಾ ಬೆಳೆಗಳಲ್ಲಿ ಹೆಚ್ಚಿನ ಲಾಭಗಳಿಸಬಹುದು ಎಂ ಸಿದ್ದರಹಟ್ಟಿ ಬಳಿ ಇರುವ ಆಶ್ರಮ ಶಾಲೆ ನವೀಕರಣಕ್ಕೆ ಸುಮಾರು 1ಕೋಟಿ ಅನುದಾನ ನೀಡಲಾಗಿದೆ ಗ್ರಾಪಂ ವ್ಯಾಪ್ತಿಯ ಅನೇಕ ಹಳ್ಳಿಗಳಿಗೆ ಕುಡಿಯುವ ನೀರು ರಸ್ತೆ ಸಮುದಾಯ ಭವನಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದರು. ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆ ಪ್ರಗತಿಯಲ್ಲಿದ್ದು ಈ ವರ್ಷದ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ಕೆರೆಗಳಿಗೆ ನೀರು ಹರಿಸಲಾಗುತ್ತದೆ ಎಂದರು.

ಈ ವೇಳೆ ತಗಡೂರು ಗ್ರಾಪಂ ಅಧ್ಯಕ್ಷೆ ಮಂಜುಳಮ್ಮ ನಿಂಗೇಗೌಡ, ಗ್ರಾಪಂ ಸದಸ್ಯರಾದ ಮಲಿಂಗೇಗೌಡ, ಕೆ. ಪಿ. ಕುಮಾರ್, ಶಂಕರ್, ತಾಲೂಕು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್ , ಮುಖಂಡರಾದ ಬಾಗೂರು ಶಿವಣ್ಣ, ಓಬಳಾಪುರ ಬಸವರಾಜ್, ತಮ್ಮಯಣ್ಣ, ತಗಡೂರು ಬಸವರಾಜ್ , ನಾಗೇಶ್ , ಜಯರಾಮ್ , ಚಂದ್ರಣ್ಣ , ಪಿಡಿಒ ಜ್ಯೋತಿ , ಹೋಬಳಿ ತೋಟಗಾರಿಕೆ ಅಧಿಕಾರಿ ರವಿನಾಯಕ್ ಮತ್ತಿತರರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ