ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಬ್ಯಾಚ್ ಆಫ್ ಸೋಶಿಯಲ್ ಸರ್ವಿಸ್ ಬ್ಯಾಚ್‌ನವರು ಭಾನುವಾರ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಟ್ರಾಕ್ ಶೂಟ್ ಮತ್ತು ಟಿ ಶರ್ಟ್ ಅನ್ನು ಬಾಸ್ ಬ್ಯಾಚ್‌ನ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ವಿತರಿಸಿದರು.ನಗರದ ಪಂಚಗಿರಿ ಬೊಧನಾ ಪ್ರೌಢಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪತ್ರಿಕಾ ವಿತರಕರಿಗೆ ಟ್ರಾಕ್ ಶೂಟ್ ಮತ್ತು ಟಿ ಶರ್ಟ್ ವಿತರಿಸಿ ಕೆ.ವಿ.ನವೀನ್ ಕಿರಣ್ ಮಾತನಾಡಿ, ಪತ್ರಿಕಾ ವಿತರಕರ ಕಾರ್ಯ ಯೋಧರ ಕಾರ್ಯವಿದ್ದಂತೆ. ಪ್ರತಿದಿನ ಬೆಳಿಗ್ಗೆ ನಾಲ್ಕು ರಿಂದ ಐದು ಗಂಟೆಗೆ ಎದ್ದು ಮನೆ ಮನೆಗೆ ಹೋಗಿ ಪತ್ರಿಕೆಗಳನ್ನು ಹಂಚುತ್ತಿರುವ ಹುಡುಗರಿಗೆ ಟ್ರಾಕ್ ಡ್ರೆಸ್ ಮತ್ತು ಟೀ ಶರ್ಟ್ ವಿತರಣೆ ಮಾಡುತ್ತಿರುವುದು ಒಳ್ಳೆಯ ಕೆಲಸ ಎಂದರು.
ಗ್ರಾಮಗಳಲ್ಲಿ ನೇತ್ರ ತಪಾಸಣೆಇಷ್ಟು ವರ್ಷಗಳಿಂದ ನಾವು ಅವಶ್ಯಕತೆ ಇರುವವರಿಗೆ ಔಷಧೋಪಚಾರ ದಿನಸಿ ಕಿಟ್ಟು ಶಾಲಾ ವಿದ್ಯಾರ್ಥಿಗಳಿಗೆ ಶಾಲೆಯ ಶುಲ್ಕ ತಂದೆ ತಾಯಿ ಇಲ್ಲದೆ ಇರುವ ಮಕ್ಕಳಿಗೆ ಬ್ಯಾಗ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸುವುದು ಮತ್ತು ಪರಿಸರ ಸಂರಕ್ಷಣೆ ಮಾಡುವುದು ನಮ್ಮ ಮೂಲ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ನಾವು ನೇತ್ರ ತಪಾಸಣೆ ಮತ್ತು ದಂತ ತಪಾಸಣೆ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶದಲ್ಲಿ ಮಾಡುವ ಉದ್ದೇಶವನ್ನು ನಾವು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.ಈ ವೇಳೆ ಸಂಘಟನೆಯ ಬಿ.ಮಹೇಶ್ , ಪ್ರವೀಣ್, ಆರ್, ವೆಂಕಟೇಶ್, ಸುಬ್ರಮಣ್ಯಂ, ನಾಯ್ಡು, ನಾಗಮೋಹನ್, ಮಹಾಂತೇಶ್, ಚಂದ್ರಕಾ0ತ್ ,ಹರೀಶ್, ಸುಬ್ಬು ಸ್ವಾಮಿ, ಸುಜಾತ ನವೀನ್ ಕಿರಣ್, ದೀಪ್ತಿ ಪ್ರಿಯ, ಅಸ್ಲಾಂ ಪಾಷಾ , ಮಧು,ಸುಬ್ಬು , ದಿವಂಗತ ಅಶೋಕ್ ( ಬಾಂಡ್) ಅವರ ಸಹೋದರಿ ಸೌಮ್ಯ ಮತ್ತು ಗುಂಪಿನ ಸದಸ್ಯರು ಇದ್ದರು.