ಕನ್ನಡಪ್ರಭ ವಾರ್ತೆ ಹುಣಸೂರು
ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಾಗಿದ್ದು, ಅದೆಲ್ಲವೂ ಕೂಡ ಪ್ರತಿ ಜಿಲ್ಲೆ, ಪ್ರತಿ ತಾಲೂಕಿನ, ಪ್ರತಿ ಪಂಚಾಯಿತಿಗಳಿಗೂ ತಲುಪುವ ನಿಟ್ಟಿನಲ್ಲಿ ಕೆಲಸಗಳಾಗಿದ್ದು, ಅಭಿವೃದ್ಧಿ ಕೆಲಸಗಳ ಅನುದಾನಗಳು ನೇರವಾಗಿ ತಲುಪಿ ಕಾರ್ಯವೃದ್ದಿಯಾಗಿರುವುದನ್ನು ನೋಡಬಹದಾಗಿದೆಎಂದು ತಿಳಿಸಿದರು.ಪ್ರಧಾನಮಂತ್ರಿಗಳವರ ಅಭಿವೃದ್ಧಿ ಸಂಕೇತದ ಯೋಜನೆಗಳಾದ ಸಂಧ್ಯಾ ಸುರಕ್ಷ ಯೋಜನೆ, ಫಸಲ್ ಭೀಮ್ ಯೋಜನೆ, ಜಲಜೀವನ್ ಮಿಷನ್ ಯೋಜನೆ, ಮುದ್ರಾ ಯೋಜನೆ, ಸಂಸದ್ ಆದರ್ಶ್ ಗ್ರಾಮ ಯೋಜನೆ, ಪ್ರಧಾನ್ ಮಂತ್ರಿ ಉಜ್ವಲ ಯೋಜನೆ, ಇನ್ನೂ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಮಂತ್ರಿಗಳು ಜಾರಿಗೆ ತಂದಿದ್ದು, ಅದೆಲ್ಲವೂ ದೇಶದಲ್ಲಿ ಪ್ರಸ್ತುತ ಮಾನವ ಸಂಪನ್ಮೂಲ ಯಂತ್ರಗಳಾಗಿ ಕಾರ್ಯ ನಿರ್ವಹಿಸುತ್ತಿವೆ.
ಮಂಡಲ ಅಧ್ಯಕ್ಷರಾದ ನಾಗಣ್ಣಗೌಡ, ಗಣೇಶ್, ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಜೈ ರಾಮೇಗೌಡ, ಖಜಾಂಚಿಯಾದ ಆರ್. ಚಂದ್ರಶೇಖರ್, ಕಾರ್ಯಾಲಯ ಕಾರ್ಯದರ್ಶಿ ಪಾಪಣ್ಣ, ರಮೇಶ್ ಕುಮಾರ್, ನಾಗರಾಜ್ ಮಾಲ್ಲಾಡಿ, ಮಂಜುನಾಥ, ಸೋಮಶೇಖರ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಕಾಂತರಾಜು ,ರವಿಕುಮಾರ್, ರವಿಶಂಕರ್ , ವೆಂಕಟಮ್ಮ, ಮಂಜುಳಮ್ಮ, ವೆಂಕಟೇಶ್, ಯೋಗೇಶ್, ಅಣ್ಣಯ್ಯಚಾರಿ, ನಾಗರಾಜಪ್ಪ ಇದ್ದರು.