ರಾಮನಗರ: ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಸೇರಿದ ಕಾರ್ಯಕರ್ತರು ರಾಜ್ಯಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕ ಸುರೇಶ್ ಬಾಬು ಮತ್ತಿತರ ನಾಯಕರು ಭಾಗಿಯಾಗಿ ಸಾಥ್ ನೀಡಿದರು.ರಾಮನಗರಕ್ಕೆ ಪುರಾತನ ನಂಟಿದೆ. ಐತಿಹಾಸಿಕವಾಗಿ ರಾಮನಗರ ಗುರುತಿಸಿಕೊಂಡಿದೆ. ಪ್ರಭು ಶ್ರೀರಾಮಚಂದ್ರರು ಪಾದಸ್ಪರ್ಷ ಮಾಡಿದ ಸ್ಥಳ ರಾಮನಗರ. ಪ್ರಭು ಶ್ರೀರಾಮನ ಹೆಸರಿನಲ್ಲಿರುವ ಭಕ್ತಿಯ ಹೆಸರನ್ನು ತೆಗೆದು ದುರುದ್ದೇಶಪೂರ್ವಕವಾಗಿ ಬೆಂಗಳೂರು ದಕ್ಷಿಣ ಎಂದು ಕಾಂಗ್ರೆಸ್ ಸರ್ಕಾರ ಹೆಸರಿಟ್ಟಿದೆ. ಅಭಿವೃದ್ಧಿ ಹೆಸರೇಳಿಕೊಂಡು ಐತಿಹಾಸಿಕವಾಗಿರುವ ಪ್ರಭು ಶ್ರೀರಾಮನ ಹೆಸರಿನಲ್ಲಿರುವ ರಾಮನ ಹೆಸರನ್ನು ತೆಗೆಯಬೇಕು ಎಂಬ ಪ್ರಮುಖ ಉದ್ದೇಶದಿಂದಲೇ ಜಿಲ್ಲೆಯ ಹೆಸರು ಬದಲಾವಣೆ ಮಾಡಿದೆ ಎಂದು ಟೀಕಿಸಿದರು.
ಕಾಂಗ್ರೆಸ್ನಿಂದ ಇತಿಹಾಸ ಅಳಿಸುವ ಕೆಲಸ ಆಗುತ್ತಿದೆ. ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿ, ಶೈಕ್ಷಣಿಕವಾಗಿ ಅಭಿವೃದ್ಧಿಗೆ ಒತ್ತು ನೀಡಬೇಕೇ ಹೊರತು ಜಿಲ್ಲೆಯ ಹೆಸರಿನ ಬದಲಾವಣೆಯಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಈ ಕೂಡಲೇ ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಹೆಸರು ಬದಲಾವಣೆ ಮಾಡಿರುವ ನಿಲುವನ್ನು ಕೈಬಿಡಬೇಕು. ಇಲ್ಲದಿದ್ದರೆ ಪ್ರತಿ ತಾಲೂಕು ಕೇಂದ್ರಗಳಲ್ಲಿ ಹೋರಾಟ ನಡೆಸಿ ಜಿಲ್ಲಾ ಬಂದ್ ಗೆ ಕರೆ ನೀಡಲಾಗುವುದು ಎಂದು ಪ್ರತಿಭಟನಾಕರರು ಎಚ್ಚರಿಕೆ ನೀಡಿದರು.ಹಿಂದೂ ಜಾಗರಣಾ ವೇದಿಕೆ ಮುಖಂಡರಾದ ಮಂಜುನಾಥ್, ಅನಿಲ್, ಉಮೇಶ್, ಮಹಾಲಿಂಗು, ನಂದೀಶ್ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಮುಖಂಡರುಗಳಾದ ಎಸ್.ಆರ್. ನಾಗರಾಜು, ಪದ್ಮನಾಭ್, ರುದ್ರದೇವರು, ಚಂದ್ರು, ನಾಗೇಶ್, ರಾಜು, ಸುರೇಶ್, ಶಿವಾನಂದ್, ಮಹದೇವ್, ಮಂಜುನಾಥ್, ನಾಗಾನಂದ್, ಸಂಜಯ್, ಪ್ರಕಾಶ್, ನಾಗರಾಜು, ಭಾನುಪ್ರಕಾಶ್, ಕಿಶನ್, ಕಾಳಯ್ಯ, ಚನ್ನಪ್ಪ, ಜಯಕುಮಾರ್, ಕೆಂಪರಾಜು, ರಾಘವೇಂದ್ರ, ಹರೀಶ್, ಚಂದನ್, ಚಂದ್ರಶೇಖರರೆಡ್ಡಿ ಭಾಗವಹಿಸಿದ್ದರು.
27ಕೆಆರ್ ಎಂಎನ್ 4.ಜೆಪಿಜಿರಾಮನಗರದ ಐಜೂರು ವೃತದಲ್ಲಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.