ಕಲಬುರಗಿ: ಮುಂದಿನ ವರ್ಷದಿಂದ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ನಡಿ ಸದಸ್ಯತ್ವ ಹೊಂದಿರುವ 357 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸೇರಿ ಎಲ್ಲ ಸದಸ್ಯ ಸಂಘಗಳಿಗೆ ಲಾಭಾಂಶ ನೀಡಲಾಗುವುದು ಎಂದು ಬ್ಯಾಂಕ್‌ನ ಅಧ್ಯಕ್ಷ ಸೋಮಶೇಖರ ಗೋನಾಯಕ ಹೇಳಿದರು.
ಶಹಾಬಾದ ಕ್ರಾಸ್‌ನ ಕಲ್ಯಾಣ ಮಂಟಪದಲ್ಲಿ ನಡೆದ ಬ್ಯಾಂಕ್‌ನ 99ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, 12 ಕೋಟಿ ಕೂಡಿಟ್ಟ ಹಾನಿ ಹೋಗಲಾಡಿಸಿದರೆ ಲಾಭಾಂಶ ಸರಳವಾಗಿ ಕೊಡಬಹುದಾಗಿದೆ. ಮುಂದಿನ ವರ್ಷ ಈಗಿನ ಹಾದಿಯಲ್ಲೇ ಮುನ್ನೆಡೆದರೆ ಹಾನಿ ಕೊನೆಗಾಣಿಸಬ ಹುದಾಗಿದೆ. ಸದಸ್ಯರಿಗೆ ಲಾಭಾಂಶ ನೀಡಿದರೆ ಬ್ಯಾಂಕ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ ಲಾಭ ಹಂಚಿಕೆ ಮಾಡಿದಂತಾಗುತ್ತದೆ ಎಂದು ಸರ್ವ ಸದಸ್ಯರ ಗಮನಕ್ಕೆ ಗೋನಾಯಕ ತಂದರು.ರೈತರನ್ನು ಆರ್ಥಿಕ ಸಬಲರನ್ನಾಗಿ ಮಾಡಿರುವ ಮಧ್ಯಮಾವಧಿ ಸಾಲ ಸಹ ಮುಂದಿನ ವರ್ಷದಲ್ಲಿ ನೀಡಲು ಉದ್ದೇಶಿಸಲಾಗಿದೆ. ಕಳೆದೆರಡು ವರ್ಷಗಳಿಂದ ಸಾಲ ನೀಡಿಕೆ ಹಾಗೂ ವಸೂಲಾತಿಯಲ್ಲಿ ನಿಯಮ ಬದ್ಧತೆ, ಅನಗತ್ಯ ವೆಚ್ಚಕ್ಕೆ ಕಡಿವಾಣದ ಆರ್ಥಿಕ ಶಿಸ್ತು ಮೈಗೂಢಿಸಿಕೊಂಡ ಪರಿಣಾಮ ಡಿಸಿಸಿ ಬ್ಯಾಂಕ್ ಲಾಭದತ್ತ ದೃಢ ಹೆಜ್ಜೆ ಹಾಕಲು ಸಾಧ್ಯವಾಗಿದೆ ಎಂದರು.
ಕಲಬುರಗಿ-ಯಾದಗಿರಿ ಜಿಲ್ಲೆ ಸೇರಿ ಒಟ್ಟಾರೆ 1, 56ಲಕ್ಷ ರೈತರಿಗೆ ಪ್ರಸಕ್ತ ಅವಧಿವರೆಗೆ 818 ಕೋಟಿ ಬೆಳೆ ಸಾಲ ವಿತರಿಸಲಾಗಿದೆ. ಹೊಸ ಸಾಲ ಇನ್ನೂ ನಾವು ನಿರೀಕ್ಷಿಸಿದಷ್ಟು ವಿತರಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಲ ವಿತರಿಸಲಾಗುವುದು. ಮಧ್ಯಮಾವಧಿ ಸಾಲ ವಸೂಲಾತಿ ಮಾಡಿರುವುದು ಹಾಗೂ ಈ ಸಾಲ ಪಾವತಿಸಿದ ರೈತರ ಬಡ್ಡಿ ಹಣವನ್ನು ಸರ್ಕಾರವೇ ೧೮ ಕೋಟಿ ಬಿಡುಗಡೆ ಮಾಡಿರುವುದು ಜತೆಗೆ ಸಾಲ ಮನ್ನಾ ಹಾಗೂ ಸಹಾಯಧನ ಸೇರಿ ೯.೬೬ ಕೋಟಿ ಸರ್ಕಾರದಿಂದ ಬಿಡುಗಡೆಯಾಗಿರುವುದು ಆರ್ಥಿಕ ಬಲವರ್ಧನೆಗೆ ಕಾರಣವಾಗಿದೆ ಎಂದರು.ಸನ್ಮಾನ: ಉತ್ತಮವಾಗಿ ಕಾರ್ಯನಿರ್ವಹಿಸಿ ಅತ್ಯುತ್ತಮವಾಗಿ ಲಾಭ ಹೊಂದಿರುವ 10 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಗೆ ಸನ್ಮಾನಿಸಲಾಯಿತು. ಪ್ರಮುಖವಾಗಿ ಸಭೆಯಲ್ಲಿ ೨೦೨೪-೨೫ ಸಾಲಿನ ಖರ್ಚು ವೆಚ್ಚಕ್ಕೆ ಹಾಗೂ ೨೦೨೫-೨೬ ನೇ ಸಾಲಿನ ಆಯವ್ಯಯಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಡಿಸಿಸಿ ಬ್ಯಾಂಕ್‌ನ ಎಂಡಿ ಪವನಕುಮಾರ ವಾರ್ಷಿಕ ವರದಿ ಓದಿದರು. ಬ್ಯಾಂಕ್‌ನ ನಿರ್ದೇಶಕರು ಹಾಗೂ ವಿಧಾನ ಪರಿಷತ್ ಸದಸ್ಯರಾಗಿರುವ ತಿಪ್ಪಣ್ಣಪ್ಪ ಕಮಕನೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕ ಬಸವರಾಜ ಪಾಟೀಲ್ ಸ್ವಾಗತಿಸಿದರು. ಮತ್ತೋರ್ವ ನಿರ್ದೇಶಕ ಬಾಪುಗೌಡ ಪಾಟೀಲ್ ವಂದಿಸಿದರು.ಬ್ಯಾಂಕ್‌ನ ನಿರ್ದೇಶಕರಾದ ಶಿವಾನಂದ ಮಾನಕರ, ಅಶೋಕ ಸಾವಳೇಶ್ವರ, ಗುರುನಾಥ ರೆಡ್ಡಿ ಹಳಿ ಸಗರ, ಸಿದ್ರಾಮರೆಡ್ಡಿ ಕೌಳೂರ, ನಿಂಗಣ್ಣ ದೊಡ್ಡಮನಿ, ಮಹಾಂತಗೌಡ ಪಾಟೀಲ್, ಕಲ್ಯಾಣರಾವ ಪಾಟೀಲ್ ಮೂಲಗೆ ಅಜೀತಕುಮಾರ ಪಾಟೀಲ್, ಶಂಕರ ಭೂಪಾಲ ಪಾಟೀಲ್, ಇಬ್ರಾಹಿಂ ಶಿರವಾಳ ಶಹಾಪುರ, ಚಂದ್ರಶೇಖರ ತಳ್ಳಳ್ಳಿ ಇದ್ದರು.
ಫೋಟೋ: ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ನ 99ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬ್ಯಾಂಕ್‌ನ ಅಧ್ಯಕ್ಷ ಸೋಮಶೇಖರ ಗೋನಾಯಕ ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ ಇದ್ದರು.