ಹಕ್ಕುಗಳ ಬಗ್ಗೆ ಮಾತಾಡದೆ ಕರ್ತವ್ಯ ಪಾಲಿಸಿ: ಸೋಮನಕಟ್ಟಿ

KannadaprabhaNewsNetwork |  
Published : Jan 27, 2025, 12:51 AM IST
೨೬ಬಿಎಸ್ವಿ೦೧- ಬಸವನಬಾಗೇವಾಡಿಯ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕಾಡಳಿತ ಭಾನುವಾರ ಹಮ್ಮಿಕೊಂಡಿದ್ದ ೭೬ ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಸಂವಿಧಾನ ಜಗತ್ತಿನಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ ಭಾರತ ಎಂದು ತಿಳಿಸಿಕೊಡುತ್ತದೆ. ಪ್ರಜೆಗಳಿಂದ ಪ್ರಜೆಗಳಿಗೋಸ್ಕರವಿರುವ ಸರ್ಕಾರವೇ ಪ್ರಜಾಪ್ರಭುತ್ವ. ಪ್ರಜೆಗಳು ಹಕ್ಕುಗಳ ಬಗ್ಗೆ ಮಾತನಾಡದೇ ತಮ್ಮ ಕರ್ತವ್ಯಗಳನ್ನು ಎಲ್ಲರೂ ಪಾಲಿಸುವಂತಾಗಬೇಕೆಂದು ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಸಂವಿಧಾನ ಜಗತ್ತಿನಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ ಭಾರತ ಎಂದು ತಿಳಿಸಿಕೊಡುತ್ತದೆ. ಪ್ರಜೆಗಳಿಂದ ಪ್ರಜೆಗಳಿಗೋಸ್ಕರವಿರುವ ಸರ್ಕಾರವೇ ಪ್ರಜಾಪ್ರಭುತ್ವ. ಪ್ರಜೆಗಳು ಹಕ್ಕುಗಳ ಬಗ್ಗೆ ಮಾತನಾಡದೇ ತಮ್ಮ ಕರ್ತವ್ಯಗಳನ್ನು ಎಲ್ಲರೂ ಪಾಲಿಸುವಂತಾಗಬೇಕೆಂದು ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ ಹೇಳಿದರು.ಪಟ್ಟಣದ ಬಸವೇಶ್ವರ ಸರ್ಕಾರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕಾಡಳಿತ ಹಮ್ಮಿಕೊಂಡಿದ್ದ ೭೬ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶವು ಅನೇಕರ ಮಹನೀಯರ ಹೋರಾಟ, ತ್ಯಾಗ, ಬಲಿದಾನದ ಪ್ರತಿಫಲವಾಗಿ ೧೯೪೭ ರ ಆ.೧೫ ರಂದು ಸ್ವಾತಂತ್ರ್ಯ ಪಡೆಯಿತು. ನಂತರ ದೇಶ ಗಣತಂತ್ರವಾಗಲು ಸಾಧ್ಯವಾಯಿತು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳ ಫಲ ಮುಟ್ಟಬೇಕೆಂಬ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು. ಸಂವಿಧಾನದ ರಚನೆ, ಅದರಲ್ಲಿರುವ ವಿಷಯಗಳು, ತಿದ್ದುಪಡಿ ಸೇರಿದಂತೆ ಸಂವಿಧಾನದ ಮಹತ್ವದ ಕುರಿತು ವಿವರಿಸಿದರು.ತಾಲೂಕಿಗೆ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಹಕಾರ ರತ್ನ ಪ್ರಶಸ್ತಿ ಲಭಿಸಿದೆ. ಪದವಿ ಕಾಲೇಜಿನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಕ್ರೀಡಾಕೂಟದಲ್ಲಿ ಸಾಧನೆ, ಅನೇಕರ ರೈತರು ಸಾಧನೆ ಮಾಡಿದ್ದಾರೆ. ತಾಲೂಕು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಸಚಿವರು, ಶಾಸಕರು ಸಹ ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು. ತಾಪಂ ಇಒ ಪ್ರಕಾಶ ದೇಸಾಯಿ, ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ನಿವೃತ್ತ ಯೋಧರಾದ ಮಲ್ಲಿಕಾರ್ಜನ ತಳವಾರ, ಶಿವಾನಂದ ಅಡಗಿಮನಿ ಇದ್ದರು. ಬಿಇಒ ವಸಂತ ರಾಠೋಡ ಸ್ವಾಗತಿಸಿದರು. ಕೊಟ್ರೇಶ ಹೆಗ್ಡಾಳ, ಬಿ.ವ್ಹಿ.ಚಕ್ರಮನಿ ನಿರೂಪಿಸಿದರು. ಶಿವಾನಂದ ಮಡಿಕೇಶ್ವರ ವಂದಿಸಿದರು. ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಮನಸೂರಿಗೊಂಡವು. ವಿವಿಧ ಸಾಧಕರಿಗೆ ತಾಲೂಕಾಡಳಿತದಿಂದ ಸನ್ಮಾನಿಸಲಾಯಿತು. ಎಲ್ಲ ಸಾಧಕರಿಗೆ ಶಾಲು ಹಾಕಿ ಪ್ರಶಸ್ತಿ ಪತ್ರ, ಪುಸ್ತಕ, ಹೂ ನೀಡಿ ಗೌರವಿಸಿದರೆ ಪೌರಕಾರ್ಮಿಕರಿಗೆ ಕೇವಲ ಪ್ರಶಸ್ತಿ ಪತ್ರ, ಪುಸ್ತಕ, ಹೂ ಮಾತ್ರ ನೀಡಿ ಗೌರವಿಸಿದ್ದು ಕಂಡುಬಂದಿತು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌