ಊರಲ್ಲೇ ಉದ್ಯೋಗ ಖಾತ್ರಿ ಕಾಮಗಾರಿ ಮಾಡಿ ಉತ್ತಮ ಜೀವನ ನಿರ್ವಹಿಸಿ-ಅಕ್ಷಯ

KannadaprabhaNewsNetwork | Published : Apr 6, 2024 12:55 AM

ಸಾರಾಂಶ

. ಕೂಲಿಕಾರರು ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದಿಂದ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದ್ದು, ತಮ್ಮೂರಿನಲ್ಲಿ ಕೂಲಿ ಮಾಡುವ ಮೂಲಕ ಗ್ರಾಮಸ್ಥರು ಉತ್ತಮಜೀವನ ನಿರ್ವಹಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ ತಿಳಿಸಿದರು.

ಬ್ಯಾಡಗಿ: ಗ್ರಾಮೀಣ ಪ್ರದೇಶದಿಂದ ಪಟ್ಟಣದತ್ತ ಗುಳೆ ಹೋಗುವುದನ್ನುತಡೆಯಬೇಕು, ಕೂಲಿಕಾರರು ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದಿಂದ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದ್ದು, ತಮ್ಮೂರಿನಲ್ಲಿ ಕೂಲಿ ಮಾಡುವ ಮೂಲಕ ಗ್ರಾಮಸ್ಥರು ಉತ್ತಮಜೀವನ ನಿರ್ವಹಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ ತಿಳಿಸಿದರು.ತಾಲೂಕಿನಚಿಕ್ಕ ಬಾಸೂರು, ಹಿರೇಹಳ್ಳಿ, ಕುಮ್ಮೂರು, ಮತ್ತೂರು, ಹಿರೇಅಣಜಿ, ಸೂಡಂಬಿ ಸೇರಿದಂತೆ ವಿವಿಧಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಕೂಲಿಕಾರರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ, ಕೂಲಿಕಾರರ ಅಹವಾಲು ಸ್ವೀಕಾರೊಂದಿಗೆ ಮತದಾನ ಜಾಗೃತಿಯಲ್ಲಿ ಪಾಲ್ಗೊಂಡರು.ಪ್ರಸಕ್ತ ಸಾಲಿನಲ್ಲಿ ಎಲ್ಲ ತಾಲೂಕುಗಳು ಬರಗಾಲ ಪಟ್ಟಿಯಲ್ಲಿದ್ದು, ಬಹುತೇಕವಾಗಿ ಮಳೆಯ ಪ್ರಮಾಣ ಕೊರತೆಯಿಂದ ನೀರಿನ ಸಮಸ್ಯೆ ಉದ್ಭವಿಸಿದೆ. ಎಲ್ಲೆಡೆ ಕೂಲಿಯ ಸಮಸ್ಯೆಯಿದ್ದು, ಗ್ರಾಮೀಣ ಪ್ರದೇಶದ ಕೂಲಿಕಾರರ ಸಲುವಾಗಿ ನರೇಗಾ ಯೋಜನೆ ಜಾರಿಯಿದೆ. ಇದಕ್ಕಾಗಿ ಕೆರೆಕಟ್ಟೆ, ಕಾಲುವೆ, ಸರ್ಕಾರದ ಕಾಮಗಾರಿ, ತೋಟಗಾರಿಕೆ, ಕೃಷಿ ಚಟುವಟಿಕೆಗಳಿಗೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬಕೂಲಿಕಾರ್ಮಿಕರಿಗೆ ದಿನಗೂಲಿ ರು. ೩೪೯ ನಿಗದಿಯಾಗಿದೆ. ಕೂಲಿಕಾರರಿಗೆ ಕೂಸಿನ ಮನೆ, ನೆರಳು, ನೀರು, ಪ್ರಥಮಚಿಕಿತ್ಸೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಒದಗಿಸಲು ಯೋಜನೆಯಲ್ಲಿ ಅವಕಾಶವಿದೆ. ಇದನ್ನುಕಡ್ಡಾಯವಾಗಿ ಪಿಡಿಓಗಳು ಜಾರಿಗೊಳಿಸಬೇಕು. ಪ್ರತಿಯೊಬ್ಬ ಕೂಲಿಕಾರರಿಗೆ ೧೦೦ ದಿನ ಅವಕಾಶವಿದೆ. ಮಹಿಳೆಯರಿಗೆ ಸಮಾನ ವೇತನ ಸಮಾನ ಕೂಲಿ ವ್ಯವಸ್ಥೆಯಿದ್ದು, ಅವರನ್ನು ಹೆಚ್ಚು ತೊಡಗಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯತ್ನಿಸುವಂತೆ ಸೂಚಿಸಿದರು.ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಕೆ.ಎಂ. ಮಾತನಾಡಿ, ಕಳೆದ ವರ್ಷ ಜಿಲ್ಲೆಯಲ್ಲಿ ಉತ್ತಮವಾಗಿ ನರೇಗಾ ಯೋಜನೆ ಜಾರಿಗೊಳಿಸಿದ ತಾಲೂಕುಗಳ ಪಟ್ಟಿಯಲ್ಲಿ ಬ್ಯಾಡಗಿಯೂ ಸೇರಿದೆ. ತಾಲೂಕಿನ ೨೧ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಯೋಜನೆ ಜಾರಿಯಿದ್ದು, ಕೂಲಿಕಾರರ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕೂಲಿಗಾಗಿ ಅರ್ಜಿ ಸಲ್ಲಿಸಿದ ತಕ್ಷಣ ಸ್ಥಳೀಯ ಗ್ರಾಮ ಪಂಚಾಯತಿ ಪಿಡಿಒ ವಿಳಂಬ ಮಾಡದೆ ತಕ್ಷಣ ಕೆಲಸ ನೀಡುವ ಮೂಲಕ ಎನ್‌ಎಂಆರ್ ನಿರ್ವಹಣೆ ಮಾಡಬೇಕೆಂದರು. ಕೂಲಿಕಾರರ ಗುಂಪಿನಲ್ಲಿ ಕೂಲಿ ಮೇಟಿಯಿದ್ದು ಎಲ್ಲ ಕೆಲಸಗಳನ್ನು ನಿರ್ವಹಣೆ ಮಾಡುವ ಮೂಲಕ ಕೂಲಿಕಾರರ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು. ಪ್ರತಿಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ದೂರು ಪೆಟ್ಟಿಗೆಗಳಿದ್ದು, ಸಮಸ್ಯೆಯಿದ್ದಲ್ಲಿ ದೂರು ಸಲ್ಲಿಸಲು ಅವಕಾಶವಿದೆ. ಅಲ್ಲದೆ ಸಹಾಯವಾಣಿ ಕೂಡ ಕಾರ್ಯನಿರ್ವಹಿಸುತ್ತಿದೆ, ವಲಸೆ ಯಾಕ್ರಿ ನಿಮ್ಮೂರಿನಲ್ಲಿ ಕೆಲಸ ನಿರ್ವಹಿಸುವಂತೆ ಮನವಿ ಮಾಡಿದರು.ಲೋಕಸಭೆ ಚುನಾವಣೆ ಘೋಷಣೆಯಾಗಿದ್ದು, ದೇಶದ ೧೮ ವರ್ಷದ ತುಂಬಿದ ಪ್ರತಿಯೊಬ್ಬ ನಾಗರಿಕರಿಗೂ ಮತದಾನ ಹಕ್ಕಿದೆ. ಯಾರೂ ಮತದಾನದಿಂದ ವಂಚಿತರಾಗಬಾರದು, ನೊಂದಾಯಿಸಿದ ಮತಗಟ್ಟೆಗಳಲ್ಲಿ ನಿಗದಿತ ದಿನದಂದು ತಪ್ಪದೆ ಮತದಾನ ಮಾಡುವ ಮೂಲಕ ದೇಶದ ಸಂವಿಧಾನ ನೀಡಿದ ಹಕ್ಕನ್ನು ಚಲಾಯಿಸುವ ಕುರಿತು ಪ್ರಮಾಣ ವಚನ ಮಾಡಿಸಿದಲ್ಲದೆ, ಆಮಿಷಗಳಿಗೆ ಬಲಿಯಾಗಬಾರದು. ಮೇ ೭ರಂದು ಮತದಾನವನ್ನುತಪ್ಪದೆ ಮಾಡುವಂತೆ ಜಾಗೃತಿ ಸಮಿತಿ ಮನವರಿಕೆ ಮಾಡಿತು.ಈ ವೇಳೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಪರಶುರಾಮ ಅಗಸನಹಳ್ಳಿ, ಲತಾ ತಬರೆಡ್ಡಿ, ಗದಿಗೆಪ್ಪಕೊಪ್ಪದ, ಬಸವರಾಜ ಶಿಡ್ರಳ್ಳಿ, ಕೋಟೆಪ್ಪ ಹರಿಜನ, ಗೋಪಾಲಸ್ವಾಮಿ ಎಂ., ಎಂಜಿನಿಯರ್ ಹಾಲಪ್ಪ ಬ್ಯಾಡಗಿ, ಪ್ರಕಾಶ ಹಿರೇಮಠ, ಲಕ್ಷ್ಮೀ ಎಂ. ಇದ್ದರು.

Share this article