ಕನ್ನಡಪ್ರಭ ವಾರ್ತೆ ಕುದೂರು
ಸೋಲೂರು ಗ್ರಾಮದ ರಾಜಶೇಖರಯ್ಯ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಏರ್ಪಡಿಸಿದ್ದ ಪರಿಸರ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಮಾಲಿನ್ಯವನ್ನು ಮಾಡದೇ ಇರುವ ಬಗ್ಗೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಪರಿಸರ ಜಾಗೃತಿ ಮೂಡಿಸುವಂತಹ ಪಠ್ಯಗಳನ್ನು ಶಾಲಾ ಹಂತದಲ್ಲಿ ಪರಿಚಯಿಸಬೇಕು. ಪರಿಸರ ಸಂರಕ್ಷಣೆ ಕುರಿತ ಜಾಗೃತಿ ಕೇವಲ ಒಂದು ದಿನ ಕಾರ್ಯಕ್ರಮವಾಗಬಾರದು. ಅದು ನಮ್ಮ ಜೀವನ ಕ್ರಮವಾಗಬೇಕು ಎಂದು ತಿಳಿಸಿದರು.ಶಿಕ್ಷಣ ಸಂಸ್ಥೆಯ ಛೇರ್ಮನ್ ರಾಜಶೇಖರಯ್ಯ ಮಾತನಾಡಿ, ಗಿಡ- ಮರಗಳಿಗೂ ಪ್ರಾಣಿಗಳಂತೆ ಜೀವ ಇರುವುದರ ಜೊತೆಗೆ ನಮ್ಮ ಭಾವನೆಗಳಿಗೆ ಸ್ಪಂದಿಸುತ್ತವೆ. ಪ್ರಕೃತಿ ಮನುಷ್ಯನ ಆಸೆಯನ್ನು ಪೂರೈಸುತ್ತದೆಯೇ ಹೊರತು ದುರಾಸೆಯನ್ನಲ್ಲ. ಇಂದು ಮನುಷ್ಯನ ಸ್ವಾರ್ಥಕ್ಕೆ ನೀರು, ಗಾಳಿ, ಮಣ್ಣು ಎಲ್ಲವನ್ನೂ ಮಲಿನ ಮಾಡುತ್ತಿದ್ದೇವೆ. ಒಂದು ಹಂತದ ತನಕ ಪ್ರಕೃತಿ ನಮ್ಮೆಲ್ಲಾ ತಪ್ಪುಗಳನ್ನು ಕ್ಷಮಿಸುತ್ತದೆ. ಒಮ್ಮೆ ಅದು ತಿರುಗಿ ಬಿದ್ದರೆ ಖಂಡಿತವಾಗಿಯೂ ಪ್ರಳಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನೂರಾರು ಗಿಡಗಳನ್ನು ಸೋಲೂರು ಹಾಗೂ ಸುತ್ತಮುತ್ತಲಿನ ರೈತರಿಗೆ ಉಚಿತವಾಗಿ ವಿತರಣೆ ಮಾಡಿದರು. ಸೋಲೂರು ಗ್ರಾಮದ ಗ್ರಾಮದೇವತೆ ದೇವಾಲಯದಿಂದ ಹೆದ್ದಾರಿಯವರೆವಿಗೆ ಬೀದಿನಾಟಕಗಳನ್ನು ಪ್ರದರ್ಶನ ಮಾಡಿದರು.