-26 ಜಿಲ್ಲೆಗಳಲ್ಲಿ ಮಹಿಳಾ ಆಯೋಗ ಅಧ್ಯಕ್ಷೆ ಪ್ರವಾಸ । ಕೂಲಿ ಕಾರ್ಮಿಕರ ಸಮಸ್ಯೆ ಆಲಿಕೆ
----ಕನ್ನಡಪ್ರಭ ವಾರ್ತೆ ಕಲಬುರಗಿ
ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹೊನ್ನಕಿರಣಗಿ ಗ್ರಾಮದ ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿದರು.ಮಹಿಳಾ ಆಯೋಗ ಅಧ್ಯಕ್ಷರು ರಾಜ್ಯದ 26 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಹೊನ್ನಕಿರಣಗಿ ಗ್ರಾಮ ಪಂಚಾಯತಿಯ ನರೇಗಾ ಕೂಲಿ ಕಾರ್ಮಿಕರಲ್ಲಿ ವಿಶೇಷತೆ ಕಂಡು ಬಂದಿದೆ ಎಂದು ತಿಳಿಸಿದರು. 47 ಕುಟುಂಬಗಳು 100 ಮಾನವ ದಿನಗಳು ಮುಕ್ತಾಯಗೊಂಡಿದೆ. ಕೂಲಿ ಕಾರ್ಮಿಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.
ಜಿಪಂ ಸಿಇಒ ಭಂವರ ಸಿಂಗ್ ಮೀನಾ ಮಾತನಾಡಿ, ಹೊನ್ನಕಿರಣಗಿ ಗ್ರಾಪಂಯು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನರೇಗಾ ಯೋಜನೆಯ ಸಾಧನೆ ಹಾಗೂ ಪರಿಣಾಮಕಾರಿ ಅನುಷ್ಠಾನ ಮಾಡುತ್ತಿದೆ. ಪ್ರತಿಯೊಬ್ಬ ಕೂಲಿ ಕಾರ್ಮಿಕರು ಪಿ.ಎಮ್.ಜೆ.ಜೆ.ವೈ. (Pಒಎಎಙ) ಮತ್ತು ಪಿ.ಎಮ್.ಎಸ್.ಬಿ.ವೈ. ಯೋಜನೆಗಳಡಿ ಇನ್ಸುರೆನ್ಸ್ ಮಾಡಿಕೊಳ್ಳಬೇಕು. ಈಗಾಗಲೇ 01-04-2025 ರಿಂದ ಕೂಲಿ ಮೊತ್ತವನ್ನು 370 ರು.ಗಳಿಗೆ ಹೆಚ್ಚಿಸಲಾಗಿದೆ ಎಂದರು.ಈ ಸಂವಾದ ಕಾರ್ಯಕ್ರಮದಲ್ಲಿ 425 ಕೂಲಿ ಕಾರ್ಮಿಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ತಾಪಂ ಸಿಇಒ ಅಧಿಕಾರಿ ಎಂ.ಡಿ ಸೈಯದ ಪಟೇಲ, ಕಲಬುರಗಿ ತಾಪಂ ಸಹಾಯಕ ನಿರ್ದೇಶಕ ರೇವಣಸಿದ್ದಪ್ಪ ಗೌಡರ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವಿತಾ ಕಾಗೆ, ಗ್ರಾಪಂ ಅಧ್ಯಕ್ಷರು, ತಾಂತ್ರಿಕ ಸಂಯೋಜಕ ಸತೀಶ್, ತಾಂತ್ರಿಕ ಸಹಾಯಕ ಜಗದೀಶ್ ಮೇಗಪ್ಪಿ, ಐಈಸಿ ಸಂಯೋಜಕರಾದ ಮೋಸಿನ ಖಾನ್ ಹಾಗೂ ಗ್ರಾ.ಪಂ ಸಿಬ್ಬಂದಿ, ಕ್ಷೇತ್ರ ಸಹಾಯಕರಾದ ಸದಾಶಿವ ಹೈದರಾ ಹಾಗೂ ಗ್ರಾಮಸ್ಥರಿದ್ದರು.----ಫೋಟೋ- ಮಹಿಳಾ 1 ಮತ್ತು ಮಹಿಳಾ 2