ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಪ್ರಭಾಕರ ಕೋರೆ ಸಾಧನೆ ಅನನ್ಯ

KannadaprabhaNewsNetwork | Published : Feb 29, 2024 2:01 AM

ಸಾರಾಂಶ

ಹಲವಾರು ಏರಿಳಿತದಲ್ಲಿಯೂ ರೈತ ಸ್ನೇಹಿಯಾಗಿ, ಸಹಕಾರಿ ಬಂಧುವಾಗಿ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಕಲ್ಪಿನೆಗೂ ಮೀರಿದ ಸಾಧನೆ ಮಾಡುವ ಮೂಲಕ ಡಾ.ಪ್ರಭಾಕರ ಕೋರೆ ಅವರ ಸಾಧನೆ ಅನನ್ಯ ಎಂದು ಮಾಜಿ ಜಿಪಂ ಸದಸ್ಯ ಡಾ. ಸಿ.ಬಿ.ಕುಲಿಗೋಡ ಹೇಳಿದರು.

ಕನ್ನಡಪ್ರಭ ವಾರ್ತೆ ಮುಗಳಖೋಡ

ಹಲವಾರು ಏರಿಳಿತದಲ್ಲಿಯೂ ರೈತ ಸ್ನೇಹಿಯಾಗಿ, ಸಹಕಾರಿ ಬಂಧುವಾಗಿ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಕಲ್ಪಿನೆಗೂ ಮೀರಿದ ಸಾಧನೆ ಮಾಡುವ ಮೂಲಕ ಡಾ.ಪ್ರಭಾಕರ ಕೋರೆ ಅವರ ಸಾಧನೆ ಅನನ್ಯ ಎಂದು ಮಾಜಿ ಜಿಪಂ ಸದಸ್ಯ ಡಾ. ಸಿ.ಬಿ.ಕುಲಿಗೋಡ ಹೇಳಿದರು.

ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ಹಮ್ಮಿಕೊಳ್ಳಲಾಗಿದ ಅಮಿತ ಕೋರೆ ಅಭಿಮಾನಿ ಬಳಗ, ಕೆಎಲ್ಇ ಡಾ.ಪ್ರಭಾಕರ್ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬೆಳಗಾವಿ, ಜವಾಹರ ಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 4 ರಂದು ಮುಗಳಖೋಡದ ಶ್ರೀ ಯಲ್ಲಾಲಿಂಗ ಮಹಾರಾಜರ ಮಠದಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕುಡಚಿ ಮಂಡಲ ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡರ ಮಾತನಾಡಿ, ಈ ಬೃಹತ್ ಉಚಿತ ಆರೋಗ್ಯ ತಪಾಸಣೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು. ಕೆಎಲ್‌ಇ ಸಹಾಯಕ ಪ್ರಾಧ್ಯಾಪಕ ಡಾ. ಅಲ್ಲಮಪ್ರಭು ಕುಡಚಿ ಮಾತನಾಡಿ, ಈ ಆರೋಗ್ಯ ಶಿಬಿರದಲ್ಲಿ ಹೃದಯ ರೋಗ, ಮೂತ್ರಪಿಂಡ, ಕ್ಯಾನ್ಸರ್, ಹರಣಿ, ಮೂಲವ್ಯಾದಿ, ಹಲ್ಲಿನ ಚಿಕಿತ್ಸೆ, ಸ್ತ್ರೀ ರೋಗ ಸೇರಿದಂತೆ ಎಲ್ಲ ನುರಿತ ತಜ್ಞ ವೈದ್ಯರಿಂದ ತಪಾಸಣೆ, ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ಉಚಿತವಾಗಿ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಚೇತನ ಯಡವಣ್ಣವರ, ರಾಜಶೇಖರ ನಾಯಕ, ಮಹಾಂತೇಶ ಯರಡತ್ತಿ, ಕುಡಚಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ, ರಾಘವೇಂದ್ರ ಪತ್ತಾರ, ಡಾ ಅಲ್ಲಮಪ್ರಭು ಕುಡಚಿ, ಮುಖಂಡರಾದ ಬಸನಗೌಡ ಆಸಂಗಿ, ಅಗ್ರಾಣಿ ಶೇಗುಣಸಿ, ಅನ್ನಪೂರ್ಣ ಯರಡತ್ತಿ, ಲತಾ ಹುದ್ದಾರ, ಅನೀಲ ಹಿಪ್ಪರಗಿ, ಸುಭಾಷ ಕಟಾವಿ, ಹನಮಂತ ಯಲಶಟ್ಟಿ, ಸಚೀನ ಪ್ರಧಾನಿ, ಅಲ್ಲಪ್ಪ ಬೆಳಗಲಿ, ಚನ್ನಪ್ಪ ಹಳಿಂಗಳಿ ಉಪಸ್ಥಿತರಿದ್ದರು.

Share this article