ಕನ್ನಡಪ್ರಭ ವಾರ್ತೆ ಮೈಸೂರು
ಅಧ್ಯಾಪನೆ ಹಾಗೂ ಸಂಶೋಧನೆಯಲ್ಲಿ ಸಮಾನ ಆಸಕ್ತಿ ಹೊಂದಿರುವ ಡಾ. ಸುಮಿತ್ರಾ ಅವರು ವಿಶ್ವೇಶ್ವರಯ್ಯ ಅವರ ಕೊಡುಗೆಗಳನ್ನು ಅಧ್ಯಯನ ಮಾಡಿ, ದಾಖಲಿಸಿದ್ದಾರೆ. ಆರಂಭದಲ್ಲಿಯೇ ಪ್ರಮಖ ಫೋಟೋಗಳಿವೆ.
ನಂತರ ಪೀಠಿಕೆ, ಬಾಲ್ಯ, ಆರ್ಥಿಕ ಯೋಜನೆಗಳು, ದಕ್ಷ ಎಂಜಿನಿಯರ್, ದೊಡ್ಡ ಕೈಗಾರಿಕೋದ್ಯಮಿ, ಪರಿಣಿತ ಆಡಳಿತಾಧಿಕಾರಿ, ಸಾಮಾಜಿಕ ಕಾರ್ಯಕರ್ತ, ಸಾರ್ವಜನಿಕ ಸೇವೆಗಳು, ರಾಜಕಾರಣದಲ್ಲಿ ಪಾತ್ರ ವಿಭಿನ್ನ ದೃಷ್ಟಿಕೋನದ ವ್ಯಕ್ತಿ ಎಂಬುದನ್ನು ಸಮರ್ಥವಾಗಿ ನಿರೂಪಿಸಿದ್ದಾರೆ. ವಿಶ್ವೇಶ್ವರಯ್ಯ ಅವರು ಮಾದರಿ ಮುತ್ಸದ್ಧಿ, ಅತ್ಯುತ್ತಮ ಆಡಳಿತಗಾರ, ಪ್ರಾಮಾಣಿಕ, ದಕ್ಷ ಮತ್ತು ದೂರದೃಷ್ಟಿಯುಳ್ಳ ವ್ಯಕ್ತಿ ಅವರು ದಿವಾನರಾಗಿದ್ದ ಅವಧಿಯಲ್ಲಿ ಮೈಸೂರು ಸರ್ವಾಂಗೀಣ ಅಭಿವೃದ್ಧಿಯಾಯಿತು. ಇದರಿಂದಾಗಿಯೇ ಅವರನ್ನು ಆಧುನಿಕ ಮೈಸೂರಿನ ಶಿಲ್ಪಿ ಎಂದು ಕರೆಯಲಾಯಿತು. ಮೂಲತಃ ಅವರು ಮೋಕ್ಷಗುಂಡಂ- ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಗಿಡ್ಡಲೂರು ತಾಲೂಕಿನವರು.ಚಿಕ್ಕಬಳ್ಳಾಪುರ ಬಳಿಯ ಮುದ್ದೇನಹಳ್ಳಿಯಲ್ಲಿ ವಾಸ್ತವ್ಯ. ಶ್ರೀನಿವಾಸ ಶಾಸ್ತ್ರಿ- ವೆಂಕಟಲಕ್ಷ್ಮಮ್ಮ ಅವರ ಪುತ್ರ. ಜನನ 1860, ಆ. 27. 15 ವರ್ಷ ಇದ್ದಾಗ ತಂದೆ ನಿಧನ. ಎಚ್. ರಾಮಯ್ಯ ಪೋಷಕರು, ಬೆಂಗಳೂರು ಸೆಂಟಲ್ ಕಾಲೇಜಿನಲ್ಲಿ ಪದವಿ, ನಾದಲ್ಲಿ ಎಂಜಿನಿಯರ್ ಪದವಿ, 1884 ರಲ್ಲಿ ಬ್ರಿಟಿಷ್ ಸೇವೆ ಸೇರ್ಪಡೆ- ಅಸಿಸ್ಟೆಂಟ್ ಎಂಜಿನಿಯರ್, ಬಾಂಬೆ ಗೌರ್ನಮೆಂಟ್, 1909 ರಲ್ಲಿ ನಿವೃತ್ತಿ. ಅದೇ ವರ್ಷ ನ.15 ರಂದು ಮೈಸೂರು ಸರ್ವೀಸ್‌ಗೆ ಮುಖ್ಯ ಎಂಜಿನಿಯರ್ ಆಗಿ ಸೇರ್ಪಡೆ, ಅವರ ಎಂಜಿನಿಯರಿಂಗ್ ಕೌಶಲ್ಯಕ್ಕೆ ನಮ್ಮ ಕಣ್ಮುಂದೆ ಇರುವ ಕನ್ನಂಬಾಡಿ ಕಟ್ಟೆಯೇ ಸಾಕ್ಷಿ. ಟಿ. ಆನಂದರಾವ್ [ಅಗ್ರಹಾರ] ವೃತ್ತ. 1912 ರಲ್ಲಿ ಮೈಸೂರು ದಿವಾನರಾದರು. ಅವರ ಅವಧಿಯಲ್ಲಿ ಕೈಗಾರೀಕರಣ ಆಯಿತು.
ನಾಲೆಗಳು, ಕುಡಿಯುವ ನೀರಿನ ಯೋಜನೆ, ಸ್ವಯಂಚಾಲಿತ ಸ್ಲೂಯಿಸ್ ಗೇಟ್‌ಗಳು - ಪೂನಾ ನೀರಿನ ಯೋಜನೆ, ಹೈದರಾಬಾದ್ ನೀರಿನ ಯೋಜನೆ, ಕೆಆರ್ಎಸ್, ಮಾರಿ ಕಣಿವೆ, ಶಿವನಸಮುದ್ರ ವಿದ್ಯುತ್ ಉತ್ಪಾದನೆ,
ಕೈಗಾರಿಕರಣ ಇಲ್ಲವೇ ಅವನತಿ ಎಂಬ ಹಿನ್ನಲೆಯಲ್ಲಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಕಾಗದ ಕಾರ್ಖಾನೆ ಆರಂಭಿಸಿದರು. ಇರ್ವಿನ್ ನಾಲೆ ಅಂತ ಇದ್ದದ್ದು ವಿಸಿ ನಾಲೆ ಆಯ್ತು, ಮೈಶುಗರ್ಸ್, ಮೈಸೂರು ಸೋಪ್ ಮೈಸೂರು ಸ್ಯಾಂಡಲ್ ಆಯಿಲ್ ಕಾರ್ಖಾನೆ, ಸಿಟಿಐ ಆರಂಭಿಸಿದರು.
ಊಟ, ತಿಂಡಿ, ಡ್ರೆಸ್ ಶಿಸ್ತು. ಸೂಟು-ಬೂಟು, ಮೈಸೂರುಪೇಟ- ಹೀಗೆ ಇಡೀ ವ್ಯಕ್ತಿತ್ವವನ್ನು ತುಂಬಾ ಅಚ್ಚುಕಟ್ಟಾಗಿ ದಾಖಲಿಸಿದ್ದಾರೆ.1960 ರಲ್ಲಿಯೇ ಅವರು ಭಾರತರತ್ನ ಪ್ರಶಸ್ತಿ ಪುರಸ್ಕೃತರು.
ಮಳವಳ್ಳಿಯ ಇತಿಹಾಸ ಮತ್ತು ಸಂಸ್ಕೃತಿ
ಈ ಕೃತಿಯನ್ನು ಮರಡಿಲಿಂಗೇಶ್ವರ ಪ್ರಕಾಶನ (ಮೊ.96865 35465) ಪ್ರಕಟಿಸಿದೆ. ಮೈಸೂರು ವಿವಿ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ವೈ.ಎಚ್. ನಾಯಕವಾಡಿ ಮುನ್ನುಡಿ ಬರೆದಿದ್ದಾರೆ.