ಬೇಸಿಗೆ ದಾಹ ತಣಿಸಲು ಚಿಂಚಾ ಪಾನಕ ಕುಡಿಯಿರಿ

KannadaprabhaNewsNetwork |  
Published : Apr 20, 2024, 01:02 AM IST
ಕ್ಯಾಪ್ಷನಃ18ಕೆಡಿವಿಜಿ35ಃದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಆರೋಗ್ಯಕರ ಆಯುಷ್ ಪಾನಕ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಬೇಸಿಗೆ ಬಂತೆಂದರೆ ಬಿಸಿಲಿನ ತಾಪಕ್ಕೆ ಯಾವ ಊಟವು ರುಚಿಸದು ಮತ್ತು ಬಾಯಾರಿಕೆ ತಣಿಸಲು ತಂಪು ಪಾನೀಯಗಳಿಗೆ ಮೊರೆ ಹೋಗುವವರೇ ಹೆಚ್ಚು. ಆಯುಷ್ ಇಲಾಖೆ ಜನರ ಆರೋಗ್ಯ ವೃದ್ಧಿ ಜೊತೆಗೆ ಬಿಸಿಲಿನ ಬಾಯಾರಿಕೆ ದಾಹ ಕಡಿಮೆ ಮಾಡಲು ಆಯುಷ್ ಪದ್ಧತಿಯ ಚಿಂಚಾ ಪಾನಕದ ಪರಿಚಯ ಮಾಡಿದೆ. ಇದು ಆರೋಗ್ಯ ಸಂರಕ್ಷಣೆಗೆ ಬಹೋಪಯೋಗಿ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್‌ ಅಭಿಮತ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಬೇಸಿಗೆ ಬಂತೆಂದರೆ ಬಿಸಿಲಿನ ತಾಪಕ್ಕೆ ಯಾವ ಊಟವು ರುಚಿಸದು ಮತ್ತು ಬಾಯಾರಿಕೆ ತಣಿಸಲು ತಂಪು ಪಾನೀಯಗಳಿಗೆ ಮೊರೆ ಹೋಗುವವರೇ ಹೆಚ್ಚು. ಆಯುಷ್ ಇಲಾಖೆ ಜನರ ಆರೋಗ್ಯ ವೃದ್ಧಿ ಜೊತೆಗೆ ಬಿಸಿಲಿನ ಬಾಯಾರಿಕೆ ದಾಹ ಕಡಿಮೆ ಮಾಡಲು ಆಯುಷ್ ಪದ್ಧತಿಯ ಚಿಂಚಾ ಪಾನಕದ ಪರಿಚಯ ಮಾಡಿದೆ. ಇದು ಆರೋಗ್ಯ ಸಂರಕ್ಷಣೆಗೆ ಬಹೋಪಯೋಗಿ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಹೇಳಿದರು.

ಗುರುವಾರ ಆಯುಷ್ ಇಲಾಖೆಯಿಂದ ಪರಿಚಯಿಸುತ್ತಿರುವ ಆರೋಗ್ಯಕರ ಆಯುಷ್ ಪಾನಕ ಪರಿಚಯ ಕಾರ್ಯಕ್ರಮ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಿಂಚಾ ಪಾನಕ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಪಾನಕ ಸ್ವಾಧಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆಮಾತಿನಂತೆ ಮನೆಯಲ್ಲಿಯೇ ಸಿಗುವ ವಸ್ತುಗಳಲ್ಲಿಯೇ ಆರೋಗ್ಯ ವೃದ್ಧಿ, ಸಂರಕ್ಷಣೆ, ರೋಗನಿರೋಧಕ ಅಂಶಗಳು ಇರುತ್ತವೆ. ಆದರೆ, ನಮಗೆ ಅವನ್ನು ತಯಾರಿಸಿಕೊಳ್ಳುವ ವಿಧಾನಗಳ ಅರಿವಿರಬೇಕು. ಆಯುಷ್ ಇಲಾಖೆ ಮನೆಯಲ್ಲಿ ಸಿಗುವ ವಸ್ತು ಉಪಯೋಗಿಸಿ ತಯಾರಿಸಬಹುದಾದ ಚಿಂಚಾ ಪಾನಕ ಅಂದರೆ, ಹುಣಸೆಹಣ್ಣಿನ ಪಾನಕ ಎಂದು ಇದನ್ನು ಕರೆಯಲಾಗುತ್ತದೆ. ಇದರಿಂದ ಬಾಯಾರಿಕೆ ಕಡಿಮೆ, ಜೊತೆಗೆ ದೇಹದಲ್ಲಿನ ಉಷ್ಣತೆ ತಗ್ಗಿಸಲಿದೆ. ಮಲಬದ್ಧತೆಯನ್ನೂ ನಿವಾರಿಸಲಿದೆ. ಇದು ಆರೋಗ್ಯಕರ ಪಾನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯೋಗೇಂದ್ರಕುಮಾರ್, ಎಐಸಿ ಅಧಿಕಾರಿ ಉದಯ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಮಠದ್, ಆಯುಷ್ ವೈದ್ಯರಾದ ಡಾ.ಎಂ.ಸಿ.ಸುರೇಶ್ ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

- - -

ಬಾಕ್ಸ್‌ ಚಿಂಚಾ ತಯಾರಿಕೆ ಹೇಗೆ? ಚಿಂಚಾ ಪಾನಕ ತಯಾರಿಸುವ ವಿಧಾನ ಬಹಳ ಸುಲಭವಾಗಿದೆ. 5 ಲೀಟರ್ ಪಾನಕ ತಯಾರಿಸಲು 100 ಗ್ರಾಂ ಹುಣಸೇಹಣ್ಣು, 40 ಗ್ರಾಂ ಬೆಲ್ಲದ ಪುಡಿ, 10 ಗ್ರಾಂ ಜೀರಿಗೆ ಪುಡಿ, 5 ಗ್ರಾಂ ಕಾಳುಮೆಣಸಿನ ಪುಡಿ, 5 ಗ್ರಾಂ ಸೈಂಧವ ಲವಣ ಮಿಶ್ರಣ ಮಾಡಬೇಕು. ಸೇವನೆ ಮಾತ್ರ 50 ರಿಂದ 100 ಮಿಲಿಯಷ್ಟು ಅಗತ್ಯ ನೀರು ಸೇರಿಸಿಕೊಂಡು ಕುಡಿಯಬೇಕು.

- - - -ಫೋಟೋ:

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಆರೋಗ್ಯಕರ ಆಯುಷ್ ಪಾನಕ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ