ಕಾರಂತ ಲೇಔಟ್‌ನಿಂದ ನುಗ್ಗಿದ ನೀರು: ದಾಸರಹಳ್ಳಿ ಕ್ಷೇತ್ರದ ಹಲವೆಡೆ ಜನಜೀವನ ಅಸ್ತವ್ಯಸ್ತ

KannadaprabhaNewsNetwork |  
Published : Oct 23, 2024, 01:46 AM IST
ಮನೆಗಳಿಗೆ ನೀರು ನುಗ್ಗಿದ ಪ್ರದೇಶಗಳಿಗೆ ಶಾಸಕ ಎಸ್.ಮುನಿರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಭಾರಿ ಮಳೆಗೆ ರಾಜಗಾಲುವೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಅಕ್ಕಪಕ್ಕದ ಲೇಔಟ್‌ಗೆ ನೀರು ನುಗ್ಗಿದೆ. ಇದರಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ಭಾರಿ ಮಳೆಗೆ ರಾಜಗಾಲುವೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಅಕ್ಕಪಕ್ಕದ ಲೇಔಟ್‌ಗೆ ನೀರು ನುಗ್ಗಿದೆ. ಇದರಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಬಿಡಿಎಯಿಂದ ನಿರ್ಮಾಣ ಆಗುತ್ತಿರುವ ಶಿವರಾಮ ಕಾರಂತ ಬಡಾವಣೆಯಿಂದ ಅತೀ ಹೆಚ್ಚು ನೀರು ಈ ಭಾಗಗಳಿಗೆ ಹರಿದು ಬರುತ್ತಿದೆ. ತಗ್ಗು ಪ್ರದೇಶಗಳು ಜಲಾವೃತವಾಗುತ್ತಿವೆ. ಈ ಮೊದಲು ಎಷ್ಟೇ ಮಳೆ ಬಂದರೂ ಸಮಸ್ಯೆ ಇರಲಿಲ್ಲ. ಬಿಡಿಎ ಲೇಔಟ್ ಅಭಿವೃದ್ಧಿ ಪಡಿಸುತ್ತಿದೆ. ಅಲ್ಲಿನ ಮಳೆ ನೀರು ಶೇಖರಣೆಗೆ ಜಾಗವಿಲ್ಲದೆ ತಗ್ಗು ಪ್ರದೇಶಗಳಿಗೆ ಬರುತ್ತಿದೆ. ಮೊದಲೇ ದುಸ್ಥಿತಿಯಲ್ಲಿರುವ ರಾಜಕಾಲುವೆಗಳಿಗೆ ಯಥೇಚ್ಛ ನೀರು ಬರುತ್ತಿದೆ. ಇದರಿಂದ ರಾಜಗಾಲುವೆ ತುಂಬಿ ತಗ್ಗು ಪ್ರದೇಶದ ಅಕ್ಕಪಕ್ಕದ ಲೇಔಟ್‌ಗಳಿಗೂ ನೀರು ವ್ಯಾಪಿಸಿದೆ.

ರಾಜಗಾಲುವೆ ಉಕ್ಕಿ ಚಿಕ್ಕಬಾಣವಾರದ ಮಾರುತಿ ನಗರ, ದ್ವಾರಕನಗರ, ಹಲವು ಮನೆಗಳಿಗೆ ನೀರು ನುಗ್ಗಿದೆ. ಹಾಗೇ ಅಬ್ಬಿಗೆರೆಯ ಕೆರೆ ತುಂಬಿದ್ದು ಹರಿಯುತ್ತಿದೆ. ಇದರಿಂದ ನಿಸರ್ಗ, ಸಪ್ತಗಿರಿ, ಕಾವೇರಿ ಬಡಾವಣೆಗೆ ಸಂಪರ್ಕ ರಸ್ತೆ ಕುಸಿದಿದೆ. ಅಹಾರ ಪದಾರ್ಥಗಳು, ನೀರಿನ ಸಂಪುಗಳು ಮಳೆ ನೀರಿನಲ್ಲಿ ಮುಳುಗಿವೆ. ಕುಡಿಯಲು ನೀರಿನ ಅಭಾವ ತಲೆದೂರಿದೆ.

ವಾರ್‌ ರೂಂ ಆರಂಭ: ಸುಮತಿಪುರಸಭೆ ಕಿರಿಯ ಅಭಿಯಂತರೆ ಸುಮತಿ, ಭಾರಿ ಪ್ರಮಾಣದಲ್ಲಿ ನೀರು ಯೆಥೇಚ್ವವಾಗಿ ಹರಿದು ಬರುತ್ತಿದ್ದು ಈಗಾಗಲೇ ರಾಜಗಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯಲು ಹೂಳೆತ್ತುವ ಕಾರ್ಯ ನಡೆಯುತ್ತಿದೆ ಹಾಗೂ ತಾತ್ಕಲಿಕವಾಗಿ ಅಕ್ಕಪಕ್ಕದ ನಿವಾಸಿಗಳ ಮನೆ ತೆರವಿಗೆ ಸೂಚಿಸಲಾಗಿದೆ. ಮಳೆ ಹಾನಿ ಎದುರಿಸಲು ವಾರ್ ರೂಂ ಕೂಡ ರಚಿಸಲಾಗಿದೆ ಎಂದರು.---

ಸಾಂತ್ವನ ಕೇಂದ್ರ ಆರಂಭ

ಒಂದು ವಾರಗಳಿಂದ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ತೊಂದರೆಯಾಗುತ್ತಿದೆ. ನಾವು ಎಷ್ಟೇ ಪ್ರಯತ್ನ ಪಟ್ಟರೂ ಆಗುತ್ತಿಲ್ಲ. ಸಮುದಾಯ ಭವನದಲ್ಲಿ ಸಾಂತ್ವನ ಕೇಂದ್ರ ಆರಂಭಿಸಲಾಗಿದೆ. ಇದರಿಂದ ಮನೆಗಳಿಗೆ ನೀರು ನುಗ್ಗಿ ಸಮಸ್ಯೆಗೆ ಒಳಗಾದವರು ಇಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

-ಎಚ್.ಎ.ಕುಮಾರ್. ಮುಖ್ಯಾಧಿಕಾರಿ, ಪುರಸಭೆ.

---

ಬಾಕ್ಸ್...

ಜನರಿಗೆ ಊಟದ ವ್ಯವಸ್ಥೆ: ಮುನಿರಾಜು

ಸರಾಗವಾಗಿ ನೀರು ಹರಿಯಲು ರಾಜಗಾಲುವೆ ಸ್ವಚ್ಛಗೊಳಿಸಬೇಕು. ಜನರಿಗೆ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರು, ಊಟದ ವ್ಯವಸ್ಥೆ ಕಲ್ಪಿಸುವಂತೆ ಪುರಸಭೆ ಅಧಿಕಾರಿಗಳಿಗೆ ಶಾಸಕ ಎಸ್.ಮುನಿರಾಜು ಸೂಚಿಸಿದ್ದಾರೆ. ರಾಜಗಾಲುವೆ ಒತ್ತುವರಿಯನ್ನು ಕೂಡಲೇ ತೆರವು ಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಶಾಸಕರು ರಾಜಗಾಲುವೆಯ ಸಮಸ್ಯೆಯಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಜಂಟಿ ವಲಯ ಅಯುಕ್ತ ಗಿರೀಶ್, ಚಿಕ್ಕಬಾಣವಾರ ಪುರಸಭೆ ಮುಖ್ಯಾಧಿಕಾರಿ ಎಚ್.ಎ.ಕುಮಾರ್ ಇದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ