ಹಿರಿಯೂರಲ್ಲಿ ವಿಜೃಂಭಣೆಯ ದಸರಾ ಅಂಬಿನೋತ್ಸವ

KannadaprabhaNewsNetwork |  
Published : Oct 13, 2024, 01:00 AM IST
ಚಿತ್ರ 2 | Kannada Prabha

ಸಾರಾಂಶ

ನಗರದ ಸರ್ಕಾರಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ಸಮೀಪದ ಬನ್ನಿ ಮಂಟಪದ ಹತ್ತಿರ ಶನಿವಾರ ನಗರದ ಪ್ರಮುಖ ದೇವತೆಗಳ ಸಮ್ಮುಖದಲ್ಲಿ ದಸರಾ ಅಂಬಿನೋತ್ಸವ ಸಕಲ ಭಕ್ತಾದಿಗಳ ಸಮ್ಮುಖದಲ್ಲಿ ನೇರವೇರಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರದ ಸರ್ಕಾರಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ಸಮೀಪದ ಬನ್ನಿ ಮಂಟಪದ ಹತ್ತಿರ ಶನಿವಾರ ನಗರದ ಪ್ರಮುಖ ದೇವತೆಗಳ ಸಮ್ಮುಖದಲ್ಲಿ ದಸರಾ ಅಂಬಿನೋತ್ಸವ ಸಕಲ ಭಕ್ತಾದಿಗಳ ಸಮ್ಮುಖದಲ್ಲಿ ನೇರವೇರಿತು.

ನಗರದಲ್ಲಿ ದಸರಾ ಹಬ್ಬದ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ಪೂಜಾ ಕಾರ್ಯಗಳು ನಡೆದಿದ್ದು, ಶನಿವಾರ ನಗರದ ಪ್ರಮುಖ ದೇವರುಗಳಾದ ಶ್ರೀ ತೇರುಮಲ್ಲೇಶ್ವರ ಸ್ವಾಮಿ, ಮೈಲಾರಲಿಂಗೇಶ್ವರ ಸ್ವಾಮಿ, ರಾಜಾ ದುರ್ಗಾಪರಮೇಶ್ವರಿ ದೇವಿ, ರೇವಣಸಿದ್ದೇಶ್ವರ ಸ್ವಾಮಿ, ಬನಶಂಕರಿ ದೇವಿ, ಹೊಸೂರಮ್ಮ , ಲಕ್ಷ್ಮೀನರಸಿಂಹಸ್ವಾಮಿ, ಕಾಳಿಕಾಂಬ ದೇವಿ, ವೀರಭದ್ರ ಸ್ವಾಮಿ, ಗೌರಸಂದ್ರ ಮಾರಮ್ಮ, ಹುಲಿಗಮ್ಮ ಹಾಗೂ ಪೌದಿಯಮ್ಮ ಸೇರಿದಂತೆ ಒಂಭತ್ತು ದೇವರುಗಳು ವಿವಿಧ ವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಜೆ ಬನ್ನಿ ಮಂಟಪದ ಆವರಣಕ್ಕೆ ಬಂದು ಸೇರಿದವು.

ಅನಂತರ ತಹಸೀಲ್ದಾರ್ ರಾಜೇಶ್ ಕುಮಾರ್ ಸಾಂಪ್ರದಾಯಿಕ ವೇಷ ತೊಟ್ಟು, ಅಲಂಕೃತ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆಯಲ್ಲಿ ತಂದಿದ್ದ ಬಿಲ್ಲು ಬಾಣಗಳನ್ನು ಹೂಡಿ ಬಿಡುವ ಮೂಲಕ ದಸರಾ ಅಂಬಿನೋತ್ಸವ ಕಾರ್ಯಕ್ಕೆ ಚಾಲನೆ ನೀಡಿದರು. ಬನ್ನಿ ಮರದಿಂದ ನಗರದ ದೇವತೆಗಳನ್ನು ಕೂರಿಸಿದ ಸ್ಥಳದವರೆಗೆ ಬಾಣ ಹೊಡೆಯುತ್ತ ಸಾಗುವ ಮೂಲಕ ಅಂಬಿನೋತ್ಸವ ನೇರವೇರಿತು.

ನಂತರ ಬನ್ನಿ ಮರದ ಆಂಜನೇಯ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ತದನಂತರ ಭಕ್ತಾಧಿಗಳು ಬನ್ನಿ ಮರದಿಂದ ಬನ್ನಿ ಪತ್ರೆ ಕಿತ್ತು ಪರಸ್ಪರ ಒಬ್ಬರಿಗೊಬ್ಬರು ಹಂಚುವ ಮೂಲಕ ಪ್ರೀತಿ, ಸ್ನೇಹ, ಬಾಂಧವ್ಯ ವಿನಿಮಯ ಮಾಡಿಕೊಳ್ಳುವ ಮೂಲಕ ಭಾವೈಕತೆ ಸಂದೇಶ ಸಾರಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಕಂದಾಯ ಅಧಿಕಾರಿಗಳಾದ ತಿಪ್ಪೇಸ್ವಾಮಿ, ರಾಜು, ಮಾಯವರ್ಮ, ಸ್ವಾಮಿ, ಮಂಜು, ಬೋಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ರಾಜಪ್ಪ ಮತ್ತು ಪದಾಕಾರಿಗಳು ಹಾಗೂ ಭಕ್ತಾಧಿಗಳು ಹಾಜರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ