ಉತ್ತಮ ಮಾರ್ಗದರ್ಶನ ಶಿಕ್ಷಕರ ಕರ್ತವ್ಯ: ಡಿಡಿಪಿಐ ಜವರೇಗೌಡ

KannadaprabhaNewsNetwork | Published : Mar 14, 2024 2:06 AM

ಸಾರಾಂಶ

ಮಕ್ಕಳು ಶಿಕ್ಷಕರ ಮಾರ್ಗದರ್ಶನವನ್ನು ತಮ್ಮ ಜೀವನದಲ್ಲಿ ಅಳವಡಿಕೊಳ್ಳುತ್ತಾರೆ. ಉತ್ತಮ ಮಾರ್ಗದರ್ಶನ ನೀಡುವುದು ಶಿಕ್ಷಕರ ಕರ್ತವ್ಯ ಎಂದು ಡಿಡಿಪಿಐ ಜವರೇಗೌಡ ತಿಳಿಸಿದರು. ಆಲೂರಲ್ಲಿ ಏರ್ಪಡಿಸಲಾಗಿದ್ದ ಸಮೂಹ ಸಂಪನ್ಮೂಲ ಕೇಂದ್ರದ ಬಲವರ್ಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹುಣಸವಳ್ಳಿ ಸಿಆರ್‌ಸಿಯಲ್ಲಿ ಶೈಕ್ಷಣಿಕ ಕಾರ್ಯಾಗಾರಆಲೂರು: ಮಕ್ಕಳು ಶಿಕ್ಷಕರ ಮಾರ್ಗದರ್ಶನವನ್ನು ತಮ್ಮ ಜೀವನದಲ್ಲಿ ಅಳವಡಿಕೊಳ್ಳುತ್ತಾರೆ. ಉತ್ತಮ ಮಾರ್ಗದರ್ಶನ ನೀಡುವುದು ಶಿಕ್ಷಕರ ಕರ್ತವ್ಯ ಎಂದು ಡಿಡಿಪಿಐ ಜವರೇಗೌಡ ತಿಳಿಸಿದರು.

ಕಸಬಾ ಹುಣಸವಳ್ಳಿ ಸಿಆರ್‌ಸಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಸಮೂಹ ಸಂಪನ್ಮೂಲ ಕೇಂದ್ರದ ಬಲವರ್ಧನೆ ಕಾರ್ಯಕ್ರಮ ಹಾಗೂ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ನಮ್ಮ ದೇಶದ ನೆಲದಲ್ಲಿ ಗುರು ಪರಂಪರೆಯು ಪುರಾತನ ಕಾಲದಿಂದ ನಡೆದುಕೊಂಡು ಬಂದಿದೆ. ಅಂತಹ ಗುರು ಪರಂಪರೆಯು ದೇಶದ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಹೊರಹೊಮ್ಮಿಸುವಲ್ಲಿ ಸಹಕಾರಿಯಾಗಿದೆ. ಶಿಕ್ಷಕರು ಸಂಪನ್ಮೂಲ ಭರಿತರಾಗಲು ಇಲಾಖೆಯಿಂದ ಹಲವಾರು ಕಾರ್ಯಾಗಾರ, ತರಬೇತಿ ಹಾಗೂ ವಿಶೇಷ ಸಭೆಗಳನ್ನು ನಡೆಸಲು ಸಂಪನ್ಮೂಲ ಕೇಂದ್ರಗಳಿವೆ. ಶಿಕ್ಷಕರಿಗೆ ಅವಶ್ಯವಿರುವ ಎಲ್ಲಾ ಸಂಪನ್ಮೂಲಗಳು ಕೊಠಡಿಯಲ್ಲಿದೆ ಎಂದರು.

ಡಯಟ್ ಪ್ರಾಂಶುಪಾಲೆ ಪುಷ್ಪಲತಾ ಮಾತನಾಡಿ, ಜಿಲ್ಲೆಯಲ್ಲಿ ಆಲೂರು ತಾಲೂಕು ಶೈಕ್ಷಣಿಕ ಕಾರ್ಯಗಳ ಅನುಷ್ಠಾನ ಮತ್ತು ಕ್ರಿಯಾಶೀಲ ಕೆಲಸಗಳಲ್ಲಿ ಮುಂದಿದೆ. ಇಲ್ಲಿನ ಅಧಿಕಾರಿ ವರ್ಗ ಮತ್ತು ಮೇಲ್ವಿಚಾರಣ ತಂಡ ಉತ್ತಮವಾಗಿದೆ. ಗುಣಾತ್ಮಕ ಶಿಕ್ಷಣಕ್ಕಾಗಿ ಸಂಪನ್ಮೂಲ ಕೇಂದ್ರವು ಅತಿ ಅವಶ್ಯಕ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ.ಕೃಷ್ಣೇಗೌಡ ಮಾತನಾಡಿ, ಕ್ಲಸ್ಟರ್ ಕೇಂದ್ರಗಳನ್ನು ಸಂಪನ್ಮೂಲ ಕೇಂದ್ರಗಳಾಗಿ ಬಲವರ್ಧನೆ ಮಾಡಿ ಶಿಕ್ಷಕರನ್ನು ಇನ್ನಷ್ಟು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಮಾಡುವ ಮೂಲಕ ಮಕ್ಕಳ ಕಲಿಕೆ ಒತ್ತು ನೀಡಬೇಕು. ತಾಲೂಕಿನಲ್ಲಿ ೧೪ ಕೇಂದ್ರಗಳಿದ್ದು ಅದರಲ್ಲಿ ಹುಣಸವಳ್ಳಿ ಕ್ಲಸ್ಟರ್ ಕೇಂದ್ರವನ್ನು ಬಲವರ್ಧನೆ ಮಾಡಿರುವುದು ಉತ್ತಮ ಎಂದರು.

ಇದೇ ವೇಳೆ ಕ್ಲಸ್ಟರ್ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರಿಗೆ ಹಾಗೂ ತಾಲೂಕಿನಲ್ಲಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡ ಅಧಿಕಾರಿಗಳಿಗೆ ಬೀಳ್ಕೊಡಲಾಯಿತು.

ನೋಡಲ್ ಅಧಿಕಾರಿ ಹಾಗೂ ಡಯಟ್‌ನ ಹಿರಿಯ ಉಪನ್ಯಾಸಕ ಚಂದ್ರೇಗೌಡ, ಬಿಆರ್‌ಸಿ ಸುಜಾತ, ಕ್ಲಸ್ಟರ್ ಕೇಂದ್ರದ ಸಿ.ಆರ್‌.ಪಿ ತೀರ್ಥಮಣಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಶೋಭಾ, ರುದ್ರೇಶ್, ಮುಖ್ಯ ಶಿಕ್ಷಕಿ ದ್ರಾಕ್ಷಾಯಿಣಿ, ವರದರಾಜು, ರಮೇಶ್, ರವಿಕುಮಾರ್, ಕವಿತಾ, ವಸಂತ, ರವಿ, ಸುನಿತಾ, ಸುಮಾ, ಅಣ್ಣೆಗೌಡ, ಶಿವರಾಮ್, ನಾಗರಾಜ್, ಕೃಷ್ಣಶೆಟ್ಟಿ, ಎಲ್ಲಾ ಶಾಲೆಗಳ ಸಿಬ್ಬಂದಿ ಹಾಜರಿದ್ದರು.ಆಲೂರಲ್ಲಿ ಏರ್ಪಡಿಸಿದ್ದ ಸಮೂಹ ಸಂಪನ್ಮೂಲ ಕೇಂದ್ರದ ಬಲವರ್ಧನೆ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಡಿಡಿಪಿಐ ಜವರೇಗೌಡ ಉದ್ಘಾಟಿಸಿದರು.

Share this article