ಗೃಹಲಕ್ಷ್ಮಿ ಸಹಕಾರ ಸಂಘದಿಂದ ಮಹಿಳೆಯರಿಗೆ ಆರ್ಥಿಕ ಬಲ

KannadaprabhaNewsNetwork |  
Published : Nov 15, 2025, 01:15 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಗೃಹಲಕ್ಷಿ ಯೋಜನೆಯಡಿ 1.24 ಕೋಟಿ ಮಹಿಳೆಯರು ಲಾಭ ಪಡೆಯುತ್ತಿದ್ದು, ಗೃಹಲಕ್ಷಿ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸುವ ಮೂಲಕ ಮಹಿಳೆಯರ ಆರ್ಥಿಕಮಟ್ಟ ಮತ್ತಷ್ಟು ಸದೃಢಗೊಳಿಸಲು ರಾಜ್ಯ ಸರ್ಕಾರ ಕಾರ್ಯಕ್ರಮ ರೂಪಿಸಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.

- 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಸಂಸದೆ ಡಾ.ಪ್ರಭಾ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಗೃಹಲಕ್ಷಿ ಯೋಜನೆಯಡಿ 1.24 ಕೋಟಿ ಮಹಿಳೆಯರು ಲಾಭ ಪಡೆಯುತ್ತಿದ್ದು, ಗೃಹಲಕ್ಷಿ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸುವ ಮೂಲಕ ಮಹಿಳೆಯರ ಆರ್ಥಿಕಮಟ್ಟ ಮತ್ತಷ್ಟು ಸದೃಢಗೊಳಿಸಲು ರಾಜ್ಯ ಸರ್ಕಾರ ಕಾರ್ಯಕ್ರಮ ರೂಪಿಸಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ನಗರದ ಡಾ.ಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳ ಹಿರೇಮಠದಲ್ಲಿ ಶುಕ್ರವಾರ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಮಟ್ಟದ ಸಹಕಾರ ಬ್ಯಾಂಕುಗಳ ಒಕ್ಕೂಟ ಸೇರಿದಂತೆ ವಿವಿಧ ಸಹಕಾರ ಸಂಘಗಳಿಂದ ಹಮ್ಮಿಕೊಂಡಿದ್ದ 72 ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ದೊಡ್ಡಮಟ್ಟದಲ್ಲಿದೆ. ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಪೂರೈಸುತ್ತಿರುವವರಲ್ಲಿ ಪುರುಷರ ಸಂಖ್ಯೆ 14,696, ಮಹಿಳೆಯರ ಸಂಖ್ಯೆ 18,105 ಇದೆ. ಮೀನುಗಾರಿಕೆಯಲ್ಲೂ ಮಹಿಳೆಯರ ಪಾರಮ್ಯವಿದೆ. ಭಾರತದಲ್ಲಿ ಶೇ.90 ಹಳ್ಳಿಗಳಲ್ಲಿ ವಿವಿಧ ಸಹಕಾರ ಸಂಸ್ಥೆಗಳಿರುವುದು ಗಮನಾರ್ಹ ಅಂಶ. ಭಾರತವು 2040ರ ವೇಳೆಗೆ 30 ಟ್ರಿಲಿಯನ್ ಆರ್ಥಿಕತೆ ಹೊಂದುವ ಗುರಿ ಹೊಂದಿದೆ. ಅದನ್ನು ಸಾಕಾರಗೊಳಿಸಬೇಕೆಂದರೆ ಗ್ರಾಮೀಣ ಭಾಗದ ಎಲ್ಲರನ್ನೂ ಒಳಗೊಂಡಂತೆ ಅಭಿವೃದ್ಧಿ ಆಗಬೇಕು ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲದ ನಿರ್ದೇಶಕ, ಹಿರಿಯ ಸಹಕಾರಿ ಧುರೀಣ ಜೆ.ಆರ್.ಷಣ್ಮುಖಪ್ಪ ಮಾತನಾಡಿ, ನೆಹರು ಪಂಚ ವಾರ್ಷಿಕ ಯೋಜನೆಗಳಲ್ಲಿ ಸಹಕಾರ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿ, ಆಸರೆಯಾಗಿದ್ದರು. ಈ ಮೂಲಕ ದೇಶದ ಆರ್ಥಿಕ ಸ್ಥಿತಿಗೆ ಶಕ್ತಿ ತುಂಬಿ, ಭದ್ರಗೊಳಿಸಿದ್ದರು. ಆ ಕಾರಣಕ್ಕೆ ನೆಹರೂ ಜನ್ಮದಿನದಂದೇ ನ.14ರಿಂದ ಸಹಕಾರ ಸಪ್ತಾಹ ಆಚರಿಸಲಾಗುತ್ತದೆ ಎಂದರು.

ಯೂನಿಯನ್ ಅಧ್ಯಕ್ಷ ಸಿರಿಗೆರೆ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕನ್ಯಕಾ ಪರಮೇಶ್ವರಿ ಕೋ.ಆಪ್ ಬ್ಯಾಂಕ್ ಅಧ್ಯಕ್ಷ ಆರ್.ಜಿ.ಶ್ರೀನಿವಾಸ ಮೂರ್ತಿ, ನಿವೃತ್ತ ಪ್ರಾಧ್ಯಾಪಕ ಡಾ. ಎಚ್.ಎಸ್. ಮಂಜುನಾಥ ಕುರ್ಕಿ, ನಿರ್ದೇಶಕರಾದ ಕೆ.ಜಿ.ಸುರೇಶ, ಡಿ.ಕುಮಾರ, ಎಚ್.ಜಿ.ಮಂಜುಳಾ ಗಣೇಶ, ಜಗದೀಶಪ್ಪ ಬಣಕಾರ್, ಜೆ.ಎಸ್.ವೇಣುಗೋಪಾಲಯ್ಯ, ಬಿ.ಶೇಖರಪ್ಪ, ಜಿ.ಎಸ್. ಸಂತೋಷ, ಸೈಜದ್ ಸಲೀಂ ಸೈಯದ್, ವಿ.ಮಂಜುನಾಥ್, ಕೆ.ಎಚ್.ಷಣ್ಮುಖಪ್ಪ, ಸಿದ್ದೇಶ, ದೀಪಕ ಪಟೇಲ್, ಎಸ್.ಜಿ.ಸತೀಶ ಇನ್ನಿತರರು ಇದ್ದರು.

- - -

-14ಕೆಡಿವಿಜಿ10, 11.ಜೆಪಿಜಿ:

ದಾವಣಗೆರೆಯಲ್ಲಿ ಶುಕ್ರವಾರ 72ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು.

PREV

Recommended Stories

ಬಿಹಾರ ಫಲಿತಾಂಶ ಕರ್ನಾಟಕದ ಮುಂದಿನ ಚುನಾವಣೆಗೆ ದಿಕ್ಸೂಚಿ
ಮಕ್ಕಳ ಸ್ವಾವಲಂಬನೆ ಬದುಕಿಗೆ ನೆಹರು ಆದರ್ಶ