ಶಿಕ್ಷಣವೆಂಬುದು ವ್ಯಾಪಾರಿಕರಣವಾಗಿದೆ: ಮುರುಘಾಮಠದ ಡಾ.ಶ್ರೀ ಮಲ್ಲಿಕಾರ್ಜುನ ಮರುಘರಾಜೇಂದ್ರ ಶ್ರೀ ವಿಷಾದ

KannadaprabhaNewsNetwork | Updated : Jul 21 2024, 09:50 AM IST
Follow Us

ಸಾರಾಂಶ

ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ಶಿಬಿರದ ಸಮಾರೋಪ ನಡೆಯಿತು.

  ಆನಂದಪುರ :  ಯುವಜನತೆಯನ್ನು ಸರಿದಾರಿಯಲ್ಲಿ ನಡೆಯುವಂತೆ ಮತ್ತು ಶಿಸ್ತು ಬದ್ಧ ಜೀವನ ನಡೆಸುವಲ್ಲಿ ಪೋಷಕರ ಪಾತ್ರ ಅತ್ಯ ಅಮೂಲ್ಯವಾದದ್ದು ಎಂದು ಮುರುಘಾಮಠದ ಡಾ.ಶ್ರೀ ಮಲ್ಲಿಕಾರ್ಜುನ ಮರುಘರಾಜೇಂದ್ರ ಹೇಳಿದರು.

ಅವರು ಮುರುಘಾಮಠದಲ್ಲಿ ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ಶಿಬಿರದ ಸಮಾರೋಪದಲ್ಲಿ ಮಾಡನಾಡಿದ ಅವರು, ಯುವ ಜನಾಂಗ ಯಾವುದೋ ಕ್ಷುಲ್ಲಕ ಕಾರಣಗಳಿಗೆ ಖಿನ್ನತೆಗೆ ಒಳಗಾಗಿ, ಆತ್ಮಹತ್ಯೆ ಎಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ವಿಷಾದನೀಯ ಸಂಗತಿ. ವಿದ್ಯಾರ್ಥಿಗಳು ಮೊದಲು ಸಂಕೋಚಿತ ಮನೋಭಾವದಿಂದ ಹೊರಬರುವಂತಾಗಬೇಕು. ಯುವ ಜನತೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ತಾಳ್ಮೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಪ್ರತಿಯೊಬ್ಬ ಪೋಷಕರು ತಮ್ಮ ಮನೆಗಳಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ವಚನಕಾರರು ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಸಾರಿದ್ದಾರೆ. ವಚನಕಾರರ ಉತ್ತಮ ಸಂದೇಶವನ್ನು ಯುವ ಜನಾಂಗ ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು.

ಶಿಕ್ಷಣವೆಂಬುದು ವ್ಯಾಪಾರಿಕರಣವಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ ಇಂತಹ ವಿದ್ಯಾರ್ಥಿಗಳಿಗೆ ಮಠಮಾನ್ಯಗಳು ಉತ್ತಮ ಶಿಕ್ಷಣ ನೀಡಲು ಮುಂದಾಗುತ್ತಿವೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಸಮಾಜದ ಸೇವೆಯನ್ನು ಮಾಡುವಂತಹ ಮನೋಭಾವ ಬೆಳೆಸಿಕೊಳ್ಳ ಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗುತ್ತಲ ಶ್ರೀಗಳು, ರಿಪ್ಪನ್ ಪೇಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಚಂದ್ರಶೇಖರ್, ಆಚಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಕಲೀಮುನಾ ಖಾನ್ ಉಪಾಧ್ಯಕ್ಷ ನಾಗರತ್ನ, ಸದಸ್ಯ ಲತಾ, ರಿಪ್ಪನ್ ಪೇಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಧನಲಕ್ಷ್ಮಿ ಗಂಗಾಧರ್, ಸದಸ್ಯ ಗಣಪತಿ, ಕಾಲೇಜು ಸಮಿತಿಯ ಸದಸ್ಯ ಹಾಲಸ್ವಾಮಿ ಗೌಡ, ಶಿಬಿರಾಧಿಕಾರಿ ದೇವರಾಜ್, ಶಿಲ್ಪಾ ಪಾಟೀಲ್ ಉಪಸ್ಥಿತರಿದ್ದರು.