ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅಗತ್ಯ

KannadaprabhaNewsNetwork |  
Published : Oct 10, 2024, 02:25 AM IST
9ಎಚ್ಎಸ್ಎನ್7 : ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಕಾರ್ಜುವಳ್ಳಿ ಮಠದ ಶ್ರೀ ದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಜ್ಞಾನ ಸಶಕ್ತವಾದದ್ದು. ಅದು ಕೊಡುವ ಬಲದಿಂದ ವ್ಯಷ್ಟಿ ಹಾಗೂ ಸಮಷ್ಟಿಯ ಅಜ್ಞಾನದ ತಮಂಧತೆಯನ್ನು ದೂರ ಮಾಡಿ ವಿವೇಕದ ಬೆಳಕನ್ನು ಮೂಡಿಸಬಹುದು. ಜ್ಞಾನದ ಬೆಳಕಲ್ಲಿ ಸಾಗಿದಾಗ ಲೋಕ ಸುಜ್ಞಾನಗೊಳ್ಳುತ್ತದೆ. ವಿದ್ಯಾರ್ಥಿನಿಯರು ಪದವಿಯೊಂದಿಗೆ ತಮ್ಮ ಜ್ಞಾನವನ್ನು ವಿವೇಕವನ್ನು ಉದ್ದೀಪಿಸಿಕೊಂಡು ಸಮಾಜಕ್ಕೆ ಬೆಳಕಾಗಬೇಕು. ಶಿಕ್ಷಣವು ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಲು ನೆರವಾಗುತ್ತದೆ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಆಲೂರು

ಶಿಕ್ಷಣವು ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಲು ನೆರವಾಗುತ್ತದೆ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಲಿಂಗಾಯಿತ ಸಮಾಜದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ಜ್ಞಾನ ಸಶಕ್ತವಾದದ್ದು. ಅದು ಕೊಡುವ ಬಲದಿಂದ ವ್ಯಷ್ಟಿ ಹಾಗೂ ಸಮಷ್ಟಿಯ ಅಜ್ಞಾನದ ತಮಂಧತೆಯನ್ನು ದೂರ ಮಾಡಿ ವಿವೇಕದ ಬೆಳಕನ್ನು ಮೂಡಿಸಬಹುದು. ಜ್ಞಾನದ ಬೆಳಕಲ್ಲಿ ಸಾಗಿದಾಗ ಲೋಕ ಸುಜ್ಞಾನಗೊಳ್ಳುತ್ತದೆ. ವಿದ್ಯಾರ್ಥಿನಿಯರು ಪದವಿಯೊಂದಿಗೆ ತಮ್ಮ ಜ್ಞಾನವನ್ನು ವಿವೇಕವನ್ನು ಉದ್ದೀಪಿಸಿಕೊಂಡು ಸಮಾಜಕ್ಕೆ ಬೆಳಕಾಗಬೇಕು ಎಂದರು. ತಾಲೂಕು ವೀರಶೈವ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್ ಮಾತನಾಡಿ, ವಿದ್ಯಾರ್ಥಿನಿಯರು ಪರಿಶ್ರಮದಿಂದ ಓದಿದರೇ ಖಂಡಿತ ಯಶಸ್ಸು ಪಡೆಯಬಹುದು. ಸಮಾಜದಲ್ಲಿ ಅನೇಕ ವಿದ್ಯಾರ್ಥಿಗಳು ಕಡುಬಡತನದಲ್ಲಿಯೇ ಓದಿ ದೊಡ್ಡ ದೊಡ್ಡ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಾಕಷ್ಟು ಉದಾಹರಣೆಗಳಿವೆ. ಕಷ್ಟಗಳಿಗೆ ಕೊರಗದೆ ಛಲದಿಂದ ಮುನ್ನುಗ್ಗಿದಾಗ ಮಾತ್ರ ಸಾಧನೆ ನಮ್ಮದಾಗುತ್ತದೆ. ಪದವಿಯೊಂದಿಗೆ ಸಂಸ್ಕಾರ ಬೆಳೆಸಿಕೊಳ್ಳಿ ಎಂದರು.ಕಾರ್ಯಕ್ರಮದಲ್ಲಿ ಸಂಘದ ಲೆಕ್ಕಪತ್ರಗಳನ್ನು ಓದಿ ಅಂಗೀಕರಿಸಲಾಯಿತು. ನಂತರ ಪ್ರತಿವರ್ಷದಂತೆ ಈ ವರ್ಷವೂ ಸಹ ಕಾರ್ಜುವಳ್ಳಿ ಹಿರೇಮಠದಿಂದ ಲಿಂ. ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸ್ಮರಾಣಾರ್ಥವಾಗಿ 10ನೇ ತರಗತಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮಾಜದ 4 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ಕಾರ್ಯಕ್ರಮದಲ್ಲಿ ಸಂಕಲಾಪುರ ಮಠದ ಪೀಠಾಧ್ಯಕ್ಷ ಶ್ರೀ ಧರ್ಮರಾಜೇಂದ್ರ ಸ್ವಾಮೀಜಿ, ಆಖಿಲ ಭಾರತ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಅಜಿತ್ ಚಿಕ್ಕಕಣಗಾಲು, ಉಪಾಧ್ಯಕ್ಷ ಜಯಣ್ಣ, ಪ್ರಧಾನ ಕಾರ್ಯದರ್ಶಿ ಎಸ್.ಎಸ್ ಶಿವಮೂರ್ತಿ, ಸಹ ಕಾರ್ಯದರ್ಶಿ ಡಾ.ಜಯರಾಜ್, ಖಜಾಂಚಿ ಟೀಕರಾಜು, ನಿದೇರ್ಶಕರಾದ ಉಮಾರವಿಪ್ರಕಾಶ್, ಮೋಹನ್ ಅಬ್ಬನ, ಹೆಮಂತ್, ನಟರಾಜ್, ಸಂದೀಪ, ಕಾಂತರಾಜು, ಶಾಂತರಾಜು, ಸೋಮಶೇಖರ್, ನಂಜೇಶ್, ಸಂತೋಷ್ ಸೇರಿದಂತೆ ಮುಂತಾದವರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ