ಶಿಕ್ಷಣವೆಂದರೆ ಓದು ಬರೆಯುವುದಲ್ಲ: ಶಿವಶರಣ ಗುಂದಗಿ

KannadaprabhaNewsNetwork |  
Published : Feb 29, 2024, 02:03 AM IST
ಉಉ | Kannada Prabha

ಸಾರಾಂಶ

ಆಲಮೇಲ: ಶಿಕ್ಷಣವೆಂದರೆ ಕೇವಲ ಓದು ಬರೆಯುವುದಲ್ಲ, ಒಳ್ಳೆಯ ನಡುವಳಿಕೆ, ಬದುಕುವ ಕಲೆ, ಕೌಶಲ, ಮೌಲ್ಯಗಳು, ನಡೆ-ನುಡಿ, ಆಚಾರ ಸಂಸ್ಕೃತಿ-ಸಂಸ್ಕಾರ ಬಿತ್ತಿ ಪರಿಪೂರ್ಣ ಮಾನವನ್ನಾಗಿ ಪರಿವರ್ತಿಸುವುದೆ ನಿಜವಾದ ಶಿಕ್ಷಣದ ಗುರಿ ಎಂದು ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ ಪಾಲಕರಿಗೆ ಸಲಹೆ ನಿಡಿದರು. ಪಟ್ಟಣದ ಭೀಮಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು.

ಕನ್ಯಾ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯ ರವಿ ಹೊಸಮನಿ ಮಾತನಾಡಿ, ಇಂದಿನ ಸ್ಪರ್ಧಾಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟರ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಭವಷ್ಯ ಉಜ್ವಲವಾಗಿರಲಿದೆ ಎಂದರು.ಸಾನಿಧ್ಯ ವಹಿಸಿದ್ದ ದೇವರಗುಡ್ಡದ ಒಡೆಯರಾದ ಡಾ,ಸಂದೀಪ ಪಾಟೀಲ, ವಿದ್ಯಾರ್ಥಿಗಳು ನಿತ್ಯದ ಜೀವನದಲ್ಲಿ ಸಮಯ ಪ್ರಜ್ಞೆ ಹಾಗೂ ಶಿಸ್ತುಬದ್ದತೆ ಕಾಯ್ದುಕೊಳ್ಳುವ ಜೊತೆಗೆ ಅಭ್ಯಾಸದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಆಶೀರ್ವಚನ ನಿಡಿದರು.

ಕಾರ್ಯಕ್ರಮದಲ್ಲಿ ರಾಮಪುರ ಆರೂಢಮಠದ ನಿತ್ಯಾನಂದ ಮಹಾರಾಜರು, ಬಂಕಲಗಾ ಹಿರೇಮಠದ ಮಲ್ಲಯ್ಯಾ ಸ್ವಾಮೀಜಿ, ಶಾಸಕ ಅಶೋಕ ಮನಗೂಳಿ ಪುತ್ರ ಕುಮಾರ ಮನಗೂಳಿ, ಸಂಸ್ಥೆಯ ಅಧ್ಯಕ್ಷ ಡಾ,ಸಂಜೀವಕುಮಾರ ಯಂಟಮನ, ನ್ಯಾಯವಾದಿ ಅಶೋಕ ಗಾಯಕವಾಡ, ರಮೇಶ ಬಂಟನೂರ, ದೌಲಪ್ಪ ಸೋನ್ನ, ಸುರೇಶ ಹಲ್ಲೂರ, ಗ್ರಾಪಂ ಮಾಜಿ ಅಧ್ಯಕ್ಷ ಅಯೂಬ ದೇವರಮನಿ, ಪಪಂ ಸದಸ್ಯ ಅಶೋಕ ಕೊಳಾರಿ, ವಹಾಬ ಸುಂಬಡ, ಮುಖ್ಯ ಗುರುಮಾತೆ ಪುಷ್ಪಾ.ಪಿ(ಕೇರಳ), ಶಿಕ್ಷಕಿಯರಾದ ಅರ್ಚನಾ, ಶ್ರವಣಾ, ಅಶ್ವಿನಿ, ಪ್ರವಲೀಕಾ, ಅಮೃತಾ, ದೀಪಾ, ಶಾಬಿನ್ ಹಾಗೂ ಯಲ್ಲಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.ಪೋಟೋ-01-ಪಟ್ಟಣದ ಭೀಮಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ರ್ವಾಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ದೇವರಗುಡ್ಡದ ಒಡೆಯರಾದ ಡಾ,ಸಂದೀಪ ಪಾಟೀಲ ಶಾಸಕ ಅಶೋಕ ಮನಗೂಳಿಯವರ ಪುತ್ರ ಕುಮಾರ ಮನಗೂಳಿ, ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ ಜ್ಯೋತಿ ಬೆಳಗಿಸುತ್ತಿರುವದು, ಸಂಸ್ಥೆಯ ಅಧ್ಯಕ್ಷ ಡಾ,ಸಂಜೀವಕುಮಾರ ಯಂಟಮನ, ಸಿಂದಗಿಯ ನ್ಯಾಯವಾದಿ ಅಶೋಕ ಗಾಯಕವಾಡ,ರಮೇಶ ಬಂಟನೂರ, ಸುರೇಶ ಹಲ್ಲೂರ,ಗ್ರಾಪಂ ಮಾಜಿ ಅಧ್ಯಕ್ಷ ಅಯೂಬ ದೇವರಮನಿ,ಪಪಂ ಸದಸ್ಯ ಅಶೋಕ ಕೊಳಾರಿ,ವಹಾಬ ಸುಂಬಡ, ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...