ಕನ್ನಡಪ್ರಭ ವಾರ್ತೆ ಐಗಳಿಅಭಿನವ ಗುರುಲಿಂಗ ಜಂಗಮ ಪೂಜ್ಯರು ರಾಜ್ಯದ ಅತೀ ಗಡಿಯಲ್ಲಿರುವ ಚಿಕ್ಕ ಗ್ರಾಮ ಕಕಮರಿಯಲ್ಲಿ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ನಿಜವಾಗಿ ಗುರುಕುಲಕ್ಕಿಂತ ಹೆಚ್ಚಿಗೆ ಸೌಲಭ್ಯ ಇದೆ. ಬಡ ಕುಟುಂಬದ ಮಕ್ಕಳಿಗೆ ದಾರಿದೀಪವಾಗಿದೆ. ಆಧ್ಯಾತ್ಮಿಕ, ಅಕ್ಷರ, ಅನ್ನ ತ್ರಿವಿಧ ದಾಸೋಹ ಒಳ್ಳೆಯ ರೀತಿಯಿಂದ ನಡೆಸಿದ್ದಾರೆ. ಎಲ್ಲ ಮಕ್ಕಳಿಗೂ ಅಕ್ಷರದ ಜೊತೆಗೆ ಸಂಸ್ಕಾರ ನೀಡಿದ್ದಾರೆ ಎಂದು ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ಸಮೀಪದ ಕಕಮರಿ ಗ್ರಾಮದ ಸದ್ಗುರು ರಾಯಲಿಂಗೇಶ್ವರ ಸಂಸ್ಥಾನ ಮಠಕ್ಕೆ ಆಕಸ್ಮಿಕವಾಗಿ ಭೇಟಿ ನೀಡಿ ಪೂಜ್ಯ ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಅಲ್ಲಿಯ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಐ.ಟಿ.ಐ ಮತ್ತು ಡಿಗ್ರಿ ಕಾಲೇಜ, ವಸತಿ ನಿಲಯ, ಗಣಕಯಂತ್ರ ಕೊಠಡಿ, ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳು ಅಲ್ಲಿರುವ ಸ್ವಚ್ಛತೆ, ಮಕ್ಕಳಲ್ಲಿರುವ ಶಿಸ್ತು ಸಮಾನತೆ ವೀಕ್ಷಿಸಿದರು. ನಂತರ ಮಾತನಾಡಿದ ಅವರು, ನಾನು ಈ ಮಠದ ಭಕ್ತ. ಶ್ರೀಮಠಕ್ಕೆ ಹಾಗೂ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಪೂಜ್ಯ ಅಭಿನವ ಗುರುಲಿಂಗ ಸ್ವಾಮೀಜಿ ಮಾತನಾಡಿ, ಶಾಸಕ ಗಣೇಶ ಹುಕ್ಕೇರಿ ಅವರು ಚಿಕ್ಕೋಡಿ ಹಾಗೂ ಸದಲಗಾ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಕ ಹುಕ್ಕೇರಿ ತಮ್ಮ ಹೆಸರು ಉಳಿಯುವಂತೆ ಅಭಿವೃದ್ಧಿ ಮಾಡಿ ಎಲ್ಲರ ಮನದಾಳದಲ್ಲಿ ಉಳಿದುಕೊಂಡಿದ್ದಾರೆ ಎಂದರು.
ಶ್ರೀಮಠದ ಕಾರ್ಯದರ್ಶಿ ಗಿರೀಶ ಮಹಾರಾಜರು, ಹಿರಿಯ ಪತ್ರಕರ್ತ ಮಲಗೌಡ ಪಾಟೀಲ, ಅಣ್ಣಾಸಾಬ ದಾವಾಡೆ, ಅಜೀತ ಕಟಗೇರಿ, ಸುನೀಲ ತೆರದಾಳ, ಅಜೀತ ಕಿಲ್ಲೇದಾರ, ಸಂಜಯ ಪಿರಾಜೆ, ಬಾಬು ಮಿರ್ಜಿ, ಅಣ್ಣಾಸಾಬ ಘಟಗೆ ಸೇರಿದಂತೆ ಅನೇಕರು ಇದ್ದರು. ಮುಖ್ಯ ಶಿಕ್ಷಕ ಬಸರಗಿ ಸ್ವಾಗತಿಸಿ ವಂದಿಸಿದರು.