ಛಾಯಾಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ

KannadaprabhaNewsNetwork |  
Published : Sep 15, 2025, 01:01 AM IST
ಚಿಕ್ಕೋಡಿ | Kannada Prabha

ಸಾರಾಂಶ

ಛಾಯಾಗ್ರಾಹಕರು ಅಸಂಘಟಿತ ಕಾರ್ಮಿಕರೆಂದು ಸರ್ಕಾರ ಗುರುತಿಸಿರುವುದು ಮಹತ್ವದ ಹೆಜ್ಜೆ. ಆದರೆ ವೃತ್ತಿ ಉಳಿವಿಗೆ ಅಕಾಡಮಿ ಅಗತ್ಯ.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಛಾಯಾಗ್ರಾಹಕರಿಗೆ ಎದುರಾಗಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಕಾರ್ಮಿಕ ಸಚಿವ ಸಂತೋಷ ಲಾಡ್‌ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುತ್ತದೆ. ಚಿಕ್ಕೋಡಿ ನಗರದಲ್ಲಿ ಛಾಯಾಚಿತ್ರ ಭವನ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಗಣೇಶ ಹುಕ್ಕೇರಿ ಭರವಸೆ ನೀಡಿದರು.

ತಾಲೂಕು ಛಾಯಾಗ್ರಾಹಕರ ಸಂಘ ಚಿಕ್ಕೋಡಿಯಿಂದ ಆಯೋಜಿಸಿದ 186ನೇ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಛಾಯಾಗ್ರಾಹಕರ ಸಂಘದ ರಾಜ್ಯ ನಿರ್ದೇಶಕ ಮಲ್ಲಿಕಾರ್ಜುನ ಕೆ.ಆರ್.ಮಾತನಾಡಿ, ಛಾಯಾಗ್ರಾಹಕರು ಅಸಂಘಟಿತ ಕಾರ್ಮಿಕರೆಂದು ಸರ್ಕಾರ ಗುರುತಿಸಿರುವುದು ಮಹತ್ವದ ಹೆಜ್ಜೆ. ಆದರೆ ವೃತ್ತಿ ಉಳಿವಿಗೆ ಅಕಾಡಮಿ ಅಗತ್ಯ. ತಂತ್ರಜ್ಞಾನ ಬೆಳೆದಂತೆ ಛಾಯಾಗ್ರಾಹಕರು ನವೀಕರಿಸಿಕೊಳ್ಳುವುದು ಕಾಲದ ಅವಶ್ಯಕತೆ ಎಂದು ಒತ್ತಿ ಹೇಳಿದರು. ಪುರಸಭೆ ಅಧ್ಯಕ್ಷೆ ವೀಣಾ ಕವಟಗಿಮಠ ಮಾತನಾಡಿ, ಛಾಯಾಗ್ರಾಹಕರು ತಮ್ಮ ಮಕ್ಕಳನ್ನು ಬೇರೆ ಬೇರೆಡೆ ತರಬೇತಿ ಕೊಡಿಸಿ ನುರಿತ ಫೋಟೋಗ್ರಾಫರ್‌ ಮಾಡಬೇಕು ಎಂದರು.

ಚರಮೂರ್ತಿಮಠದ ಸಂಪಾದನ ಸ್ವಾಮೀಜಿ, ಚಿಂಚಣಿ ಶಿವಪ್ರಸಾದ ದೇವರು ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಇದೇ ವೇಳೆ ಹಿರಿಯ ಛಾಯಾಗ್ರಾಹಕರಾದ ರಾಜು ಸಂಕೇಶ್ವರಿ ದಂಪತಿ ಮತ್ತು ವಿನೋದ ಪೋತದಾರ ದಂಪತಿ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆ ಮೇಲೆ ಪುರಸಭೆ ಸದಸ್ಯ ಅನಿಲ ಮಾನೆ, ಚಿಕ್ಕೋಡಿ ತಾಲೂಕು ಛಾಯಾಗ್ರಾಹಕರ ಅಧ್ಯಕ್ಷ ಶಂಕರ ಮಾನಗಾಂವಿ, ರಾಜ್ಯ ಸಂಘದ ನಿರ್ದೇಶಕರಾದ ಬಸವರಾಜ ರಾಮನ್ನವರ, ಸುರೇಶ ಬಾಳೋಜಿ, ಬೆಳಗಾವಿ ಅಧ್ಯಕ್ಷ ಲಕ್ಷ್ಮಣ ಯಮಕನಮರಡಿ, ಜಿಲ್ಲಾ ಕಾರ್ಯದರ್ಶಿ ರಾಜು ಸಂಕೇಶ್ವರಿ, ಸುರೇಶ ರಜಪೂತ, ಮಾರುತಿ ಫರಾಳೆ, ದಿಗಂಬರ ಕೋಳೆಕರ, ರಾಮಪ್ಪ ಹಾಲಟ್ಟಿ, ಮಾಚಿದೇವ ಬೋಸಲೆ, ಕಲ್ಲಪ್ಪ ಬಡಿಗೇರ, ಸುರೇಶ ಕೆಂಚಗೌಡ, ಸುನೀಲ ಪಾಟೀಲ, ರಾಜು ದೊಂಗಡಿ, ರಾಜು ಸಂಕಪಾಳ, ಪರುಶುರಾಮ ಕಮತೆ, ಮಹಾದೇವ ಪಾಟೀಲ, ಗಣಪತಿ ಹಿರೇಮಠ, ವಿಠ್ಠಲ ಜನವಾಡೆ, ಪ್ರಕಾಶ ಘೋರಪಡೆ ಮುಂತಾದವರು ಇದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ