ಪ್ರಹ್ಲಾದ್‌ ಜೋಶಿ ಪರ ಪತ್ನಿ ಮತಯಾಚನೆ

KannadaprabhaNewsNetwork | Published : Apr 20, 2024 1:01 AM

ಸಾರಾಂಶ

ಧಾರವಾಡ ಲೋಕಸಭಾ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಪರ ಅವರ ಪತ್ನಿ ಜ್ಯೋತಿ ಜೋಶಿ ನೇತೃತ್ವದಲ್ಲಿ ಮಹಿಳಾ ಕಾರ್ಯಕರ್ತೆಯರು ಪಾದಯಾತ್ರೆ ಮೂಲಕ ಮತಯಾಚಿಸಿದರು.

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಧಾರವಾಡ ಲೋಕಸಭಾ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಪರ ಅವರ ಪತ್ನಿ ಜ್ಯೋತಿ ಜೋಶಿ ನೇತೃತ್ವದಲ್ಲಿ ಮಹಿಳಾ ಕಾರ್ಯಕರ್ತೆಯರು ಪಾದಯಾತ್ರೆ ಮೂಲಕ ಮತಯಾಚಿಸಿದರು.

ಯಲ್ಲಮ್ಮದೇವಿ, ವಿಠ್ಠಲ್-ರುಕ್ಮಣಿ, ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ಅರಳಲೆಹಿರೇಮಠ, ಕೆಂಡದಮಠಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದು ಮತಯಾಚನೆಗೆ ಚಾಲನೆ ನೀಡಿದರು. ಪಾದಯಾತ್ರೆ ಮೂಲಕ ಪ್ರಭಂಜನ ಗಾರ್ಮೆಂಟ್ಸ್‌, ನೇಕಾರ ಓಣಿ, ಖನೋಜಗಲ್ಲಿ, ಸುಂಕದಕೇರಿ, ಕೊಟ್ಟಿಗೇರಿ, ಬ್ರಾಹ್ಮಣ ಗಲ್ಲಿ, ಶಹಬಜಾರ ಸೇರಿದಂತೆ ವಿವಿಧಡೆ ಸಂಚರಿಸಿ ಬಿಜೆಪಿ ಅಭಿವೃದ್ಧಿ ಕಾರ್ಯಗಳ ಬಿತ್ತಿಪತ್ರಗಳನ್ನು ಹಂಚುವ ಮೂಲಕ ಮತಯಾಚಿಸಿದರು.

ಮೋದಿ ಅವರ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಜ್ಯೋತಿ ಜೋಶಿ, ನರೇಂದ್ರ ಮೋದಿ ಅವರು ಕಳೆದ ೧೦ ವರ್ಷಗಳಲ್ಲಿ ಹಲುವಾರು ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ವಿಶೇವಾಗಿ ಕೋವಿಡ್ ವೇಳೆ ೧೪೨ ಕೋಟಿ ಜನರಿಗೆ ಉಚಿತ ಲಸಿಕೆ ನೀಡಿ ಜೀವ ಕಾಪಾಡಿದ ಮಹಾನ್ ವ್ಯಕ್ತಿ. ಉಚಿತ ಅಕ್ಕಿ ಜತೆಗೆ ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದರು.

ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಬಿಳಿಕುದರಿ, ಸಂಜನಾ ರಾಯ್ಕರ, ಲಕ್ಷ್ಮೀ ತೋಟದ, ಎನ್.ವ್ಹಿ.ಪದ್ಮಾ, ಲತಾ ಸಂಶಿ, ಅನ್ನಪೂರ್ಣ ವಳಗೇರಿ, ಲಕ್ಷ್ಮೀ ಕಮ್ಮಾರ, ನೀಲವ್ವ ಕಾಲವಾಡ, ಜ್ಯೋತಿ ಉಂಕಿ, ನೀಲವ್ವ ಏಳುಮೊಗ್ಗದ, ಲಲಿತವ್ವ ಏಳುಮೊಗ್ಗದ, ಲಲಿತಾ ಕೋತಂಬ್ರಿ, ನಿರ್ಮಲಾ ರುದ್ರಾಕ್ಷಿ, ಜ್ಯೋತಿ ರುದ್ರಾಕ್ಷಿ, ಬಸವರಾಜ ನಾರಾಯಣಪುರ, ಮಂಜುನಾಥ ತಳವಾರ, ಹೊನ್ನಪ್ಪ ಹೂಗಾರ, ಸೋಮಶೇಖರ ಗೌರಿಮಠ, ರಾಜು ಟೋಪಣ್ಣವರ, ಹರೀಶ ಭವಾನಿ, ಯಲ್ಲಪ್ಪ ಸುಂಕದ, ಮೋಹನ ಮಿರಜಕರ, ಶಿವು ಬುದ್ದಪ್ಪನವರ, ಮಧು ಜಂಗಳಿ, ಮಹೇಶ ಕುರಂದವಾಡ, ಸಿದ್ದಪ್ಪ ಹರವಿ, ಕುಮಾರ ಉಂಕಿ, ವಿಲಾಸ ನಾರಾಯಣಪುರ, ಬಾಬುರಾವ್‌ ಹಂಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share this article