8 ಸ್ಥಾನಕ್ಕೆ 15 ಜನರು ಚುನಾವಣಾ ಕಣದಲ್ಲಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಚುನಾವಣೆ ಅ. 28 ಕ್ಕೆ ನಡೆಯಲಿದ್ದು ಅಂತಿಮವಾಗಿ 8 ಸ್ಥಾನಕ್ಕಾಗಿ 15 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿ ವರುಣ್. ಸಿ ಶೆಟ್ಟಿ ತಿಳಿಸಿದ್ದಾರೆ.
ತಾಲೂಕಿನ 24 ಸರ್ಕಾರಿ ಇಲಾಖೆಯಲ್ಲಿ 34 ನಿರ್ದೇಶಕರ ಆಯ್ಕೆಯಾಗಬೇಕಾಗಿತ್ತು. ವಿವಿಧ ಇಲಾಖೆ 48 ಜನರ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ವಾಪಾಸು ಪಡೆಯುವ ಅಂತಿಮ ದಿನವಾದ ಸೋಮವಾರ 26 ಜನರು ಅವಿರೋಧವಾಗಿ ಆಯ್ಕೆಯಾದರು. 7 ಜನರು ತಮ್ಮ ನಾಮ ಪತ್ರ ವಾಪಾಸು ಪಡೆದರು. ಅಂತಿಮವಾಗಿ 3 ಸರ್ಕಾರಿ ಇಲಾಖೆ 8 ಸ್ಥಾನಕ್ಕೆ 15 ಜನರು ಚುನಾವಣಾ ಕಣದಲ್ಲಿ ಉಳಿದಿದ್ದಾರೆ.ಅ. 28 ರಂದು ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಚುನಾವಣೆ ನಡೆಯಲಿದೆ. 3 ಮತಗಟ್ಟೆಯಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯ ವರೆಗೆ ಮತದಾನ ನಡೆಯಲಿದೆ. ನಂತರ ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು: ಪ್ರಾಥಮಿಕ ಪಾಠ ಶಾಲೆಗಳ ವಿಭಾಗದಲ್ಲಿ 196 ಮತದಾರರಿದ್ದು, ಚುನಾವಣಾ ಕಣದಲ್ಲಿ ಬಿ.ಟಿ.ಪ್ರಕಾಶ್, ಡಿ.ಆರ್. ಸೋಮಶೇಖರ್, ರಾಜಾನಾಯಕ್, ಆರ್.ನಾಗರಾಜ್, ಕೆ.ಪಿ.ಪ್ರಕಾಶ್, ಎಚ್.ಮಂಜಪ್ಪ, ಕೆ.ಎಸ್.ನಾಗೇಶ್, ಆರ್.ಸುಬಾಶ್ ಸೇರಿ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 20 ಮತದಾರರಿದ್ದು 1 ಸ್ಥಾನ ಆಯ್ಕೆ ಮಾಡಬೇಕಾಗಿದೆ. ಕಣದಲ್ಲಿ ವಿ.ರಮೇಶ್ ಕುಮಾರ್, ಎಲ್.ಧರ್ಮರಾಜ್ ಸೇರಿ ಇಬ್ಬರು ಕಣದಲ್ಲಿದ್ದಾರೆ. ಆರೋಗ್ಯ ಮತ್ತು ಕುಟುಂಭ ಕಲ್ಯಾಣ ಇಲಾಖೆಯಲ್ಲಿ 60 ಮತದಾರರಿದ್ದಾರೆ. 3 ಸ್ಥಾನಕ್ಕಾಗಿ ಡಾ.ವೀರಪ್ರಸಾದ್, ನೇತ್ರಾಧಿಕಾರಿ ಕೃಷ್ಣಮೂರ್ತಿ, ಎಂ.ಇ. ಅಜಿತ್, ಪಿ.ಕೆ.ಭಗವಾನ್, ನಾಗೇಂದ್ರಪ್ಪ ಸೇರಿ 5 ಜನರು ಕಣದಲ್ಲಿದ್ದಾರೆ.