ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕನ್ನಡಪ್ರಭ ಪತ್ರಿಕೆಯ ನಿರಂತರ ವರದಿಯ ಬಳಿಕ ಒಲ್ಲದ ಮನಸ್ಸಿನಿಂದಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಾಲೂಕಿನ ಹಿರೀಕಾಟಿ ಗೇಟ್ ಬಳಿ ಖನಿಜ ತನಿಖಾ ಠಾಣೆ ಆರಂಭಿಸಿತ್ತು.ಕಳೆದೊಂದು ವಾರದಿಂದ ಲೋಕಸಭೆ ಚುನಾವಣೆ ನೆಪದಲ್ಲಿ ಹೋಂ ಗಾರ್ಡ್‌ಗಳನ್ನು ಚುನಾವಣಾ ಕೆಲಸಕ್ಕೆ ನಿಯೋಜನೆ ಗೊಂಡಿದ್ದಾರೆಂದು ಹಿರೀಕಾಟಿ ಖನಿಜ ತನಿಖಾ ಠಾಣೆ ಬಾಗಿಲು ಮುಚ್ಚಿದ ಕಾರಣ ರಾಯಲ್ಟಿ, ಎಂಡಿಪಿ ವಂಚಿಸಿ ಹಗಲು ರಾತ್ರಿ ಇನ್ನದೆ ಕಲ್ಲು ಹಾಗೂ ಕ್ರಷರ್ ಉತ್ಪನ್ನಗಳು ರಾಜರೋಷವಾಗಿ ತೆರಳುತ್ತಿವೆ ಆದರೆ ಸರ್ಕಾರಕ್ಕೆ ರಾಜಧನ ಲಕ್ಷಾಂತರ ರು.ವಂಚನೆಯಂತೂ ಆಗುತ್ತಿದೆ.
ಒಂದುವಾರದಿಂದ ಬೀಗ ಬಿದ್ದಿತ್ತು:ಕಳೆದೊಂದು ವಾರದಿಂದ ಹಿರೀಕಾಟಿ ಖನಿಜ ತನಿಖಾ ಠಾಣೆಗೆ ಬೀಗ ಬಿದ್ದಿತ್ತು. ಇಂಥ ಅವಕಾಶ ಸದುಪಯೋಗ ಪಡಿಸಿಕೊಂಡು ನೂರಾರು ಟಿಪ್ಪರ್‌ಗಳಲ್ಲಿ ಕಲ್ಲು ಹಾಗೂ ಕ್ರಷರ್‌ನ ಉತ್ಪನ್ನ ರಾಜಧನ ವಂಚಿಸಿ ಸರ್ಕಾರಕ್ಕೆ ವಂಚಿಸುತ್ತಿರುವುದು ಜನರ ಕಣ್ಣಿಗೆ ಕಾಣುತ್ತಿದೆ ಆದರೆ ಇದು ಜಿಲ್ಲಾಡಳಿತಕ್ಕೆ ಕಾಣುತ್ತಿಲ್ಲ!
ಹಿರೀಕಾಟಿ ಖನಿಜ ತನಿಖಾ ಠಾಣೆ ಸಿಬ್ಬಂದಿ ಇರುವಾಗಲೇ ಠಾಣೆಗೆ ಸಿಬ್ಬಂದಿ ಯಾಮಾರಿಸಿ ರಾಯಲ್ಟಿ ಹಾಗು ಎಂಡಿಪಿ ವಂಚಿಸಿ ಕರಗತ ಮಾಡಿಕೊಂಡಿರುವ ಕೆಲ ಕ್ರಷರ್,ಕ್ವಾರಿ ಮಾಲೀಕರು ಈಗ ಖನಿಜ ತನಿಖಾ ಠಾಣೆ ಬಾಗಿಲಿಗೆ ಬೀಗ ಹಾಕಿರುವಾಗ ಬಿಟ್ಟಾರೆಯೇ ಎಂದು ಗ್ರಾಮದ ಪ್ರಸನ್ನ, ಶ್ರೀಧರ್ ಪ್ರಶ್ನಿಸಿದ್ದಾರೆ.ಲೋಕಸಭೆ ಚುನಾವಣೆ ಹಿನ್ನಲೆ ಹೋಂ ಗಾರ್ಡ್‌ಗಳು ಕೆಲಸಕ್ಕೆ ಬಂದಿಲ್ಲ. ಭೂ ವಿಜ್ಞಾನಿಗಳು ಬಂದು ಹೋಗಿದ್ದಾರೆ. ನಾನು ಕೂಡ ಬೆಳಗ್ಗೆ ಬರುತ್ತೇನೆ. ಪದ್ಮಜ, ಡಿಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ಹಿರೀಕಾಟಿ ರಸ್ತೆಯಲ್ಲಿ ಟಿಪ್ಪರ್ ಸಂಚಾರ ಬೇಡಗುಂಡ್ಲುಪೇಟೆ: ತಾಲೂಕಿನ ಹಿರೀಕಾಟಿ ಗೇಟ್ ನಿಂದ ಹಿರೀಕಾಟಿ ಗ್ರಾಮದ ತನಕ ಕ್ರಷರ್ ಮಾಲೀಕ ಯಶವಂತಕುಮಾರ್‌ಗೆ ಸೇರಿದ ಟಿಪ್ಪರ್‌ಗಳು ಸಂಚರಿಸುತ್ತಿದ್ದು, ಟಿಪ್ಪರಗಳ ಸಂಚಾರದಿಂದ ಪರಿಸರಕ್ಕೆ ದಕ್ಕೆಯಾಗುತ್ತಿದ್ದು, ಹಿರೀಕಾಟಿ ಗೇಟ್‌ನಿಂದ ಹಿರೀಕಾಟಿ ಗ್ರಾಮದ ತನಕ ಟಿಪ್ಪರ್ ಸಂಚರಿಸಲು ಅವಕಾಶ ನೀಡದಂತೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಿಗೆ ರೈತ ಕೂಲಿ ಸಂಗ್ರಾಮ ಸಮಿತಿ(ಆರ್‌ಸಿಎಸ್‌ಎಸ್) ದೂರು ಸಲ್ಲಿಸಿದೆ.
ಹಿರೀಕಾಟಿ ಗೇಟ್ ನಿಂದ ಹಿರೀಕಾಟಿ ಗ್ರಾಮದ ತನಕ ಜನರು ಸಂಚರಿಸುವ ರಸ್ತೆಯಲ್ಲಿ ೧೦ ವೀಲ್ ಟಿಪ್ಪರ್‌ಗಳು ಪ್ರತಿ ನಿತ್ಯ ಓಡಾಡುತ್ತಿರುವ ಕಾರಣ ಜನ,ಜಾನುವಾರು,ವಿದ್ಯಾರ್ಥಿಗಳು ಸಂಚರಿಸಲು ಆಗುತ್ತಿಲ್ಲ ಎಂದು ದೂರಿನಲ್ಲಿ ಅಧ್ಯಕ್ಷ ಕಂದೇಗಾಲ ಎಂ. ಶಿವಣ್ಣ,ಪ್ರಧಾನ ಕಾರ್ಯದರ್ಶಿ ಪ್ರಸನ್ನ ತಿಳಿಸಿದ್ದಾರೆ. ರಸ್ತೆಯಲ್ಲಿ ಟಿಪ್ಪರ್ ಸಂಚರಿಸುವಾಗ ದಟ್ಟವಾದ ದೂಳು ಬರುತ್ತಿದೆ.ದೂಳಿನಿಂದ ರೋಗ ಬರಲಿದೆ.ಜನರು ಹಾಗು ಲಘು ವಾಹನಗಳಿಗೆ ಮೀಸಲಾದ ರಸ್ತೆಯಲ್ಲಿ ದೊಡ್ಡ ದೊಡ್ಡ ಟಿಪ್ಪರ್ ಗಳು ಸಂಚಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಕ್ರಷರ್ ಮಾಲೀಕ ಯಶವಂತಕುಮಾರ್ ಜನ,ಲಘು ವಾಹನ ಮೀಸಲಾದ ರಸ್ತೆ ಬಿಟ್ಟು ಬೇರೆ ರಸ್ತೆಯಲ್ಲಿ ಸಂಚರಿಸಲಿ ಅದು ಬಿಟ್ಟು ಹಿರೀಕಾಟಿ ರಸ್ತೆಯಲ್ಲಿ ಸಂಚರಿಸಿದೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.