ಫೆಬ್ರವರಿ 2ರಂದು ಭಟ್ಕಳ ಅರ್ಬನ್ ಬ್ಯಾಂಕಿನ ನಿರ್ದೇಶಕ ಮಂಡಳಿಗೆ ಚುನಾವಣೆ

KannadaprabhaNewsNetwork | Published : Jan 28, 2025 12:50 AM

ಸಾರಾಂಶ

ಸಚಿವ ಮಂಕಾಳ ವೈದ್ಯರ ಪುತ್ರಿ ಬೀನಾ ವೈದ್ಯ ಸಹಕಾರಿ ಕ್ಷೇತ್ರದ ಪದಾರ್ಪಣೆಗೆ ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ಬ್ಯಾಂಕಿನ 11 ಸ್ಥಾನಕ್ಕೆ ಒಟ್ಟೂ 27 ಅಭ್ಯರ್ಥಿಗಳು ಆಯ್ಕೆ ಬಯಸಿ ಕಣದಲ್ಲಿದ್ದು, ಚುನಾವಣೆ ರಂಗೇರಿದೆ.

ಭಟ್ಕಳ: ಪ್ರತಿಷ್ಠಿತ ಭಟ್ಕಳ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಯ 15 ನಿರ್ದೇಶಕ ಸ್ಥಾನದಲ್ಲಿ ನಾಲ್ಕು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 11 ಸ್ಥಾನಕ್ಕೆ ಫೆ. 2ರಂದು ಚುನಾವಣೆ ನಡೆಯಲಿದೆ.

ಮಹಿಳಾ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಚಿವ ಮಂಕಾಳ ವೈದ್ಯರ ಪುತ್ರಿ ಬೀನಾ ವೈದ್ಯ ಮತ್ತು ಮೆಹಬೂಬಿ ಬಾಬಲಾಲ ಸಾಹೀಬಿ ಪಟೇಲ್, ಹಿಂದುಳಿದ ವರ್ಗ ಅ ಸ್ಥಾನಕ್ಕೆ ಸುರೇಶ ಭಾಸ್ಕರ ಪೂಜಾರಿ ಹಾಗೂ ದಕ್ಷಿಣ ಕನ್ನಡ ಮಂಗಳೂರು ಕ್ಷೇತ್ರದಿಂದ ಮೊಹ್ಮದ್ ಅಯ್ಯೂಬ್ ಹಮ್ಜಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಸಾಮಾನ್ಯ 7 ಕ್ಷೇತ್ರಕ್ಕೆ ಅಬ್ದುಲ್ ಖಾಲಿಕ್ ಅಬ್ದುಲ ಹಾದಿ ಸೌದಾಗರ, ಅಹ್ಮದ್ ನಬೀ ಮೆಹಬೂಬ ಸಾಬ ಮುಲ್ಲಾ, ಈರಾ ದುರ್ಗಪ್ಪ ನಾಯ್ಕ, ಜಾಫರ ಸಾದಿಕ್ ಇಸ್ಮಾಯಿಲ್ ಶಾಬಂದ್ರಿ, ತೌಸೀಫ್ ಅಬ್ದುಲ್ ವಹಾಬ್ ಶೇಖ, ನದೀಮ ಅಹ್ಮದ್ ಮುಲ್ಲಾ, ನಸೀಮುಲ್ ಘನಿ ಇಸ್ಮಾಯಿಲ್ ಶಾಬ೦ದ್ರಿ, ಪದ್ಮನಾಭ ರಾಮಕೃಷ್ಣ ಪೈ, ಮಹ್ಮದ್ ಜುಬೇರ್, ರಮೇಶ ಸುಕ್ರ ನಾಯ್ಕ, ರಾಮಾ ತಿಮ್ಮಣ್ಣ ನಾಯ್ಕ, ವಸಂತ ತಿಮ್ಮಯ್ಯ ದೇವಡಿಗ, ವಿಕ್ಟರ್ ಗೋಮ್ಸ, ಶ್ರೀಕಾಂತ ನಾರಾಯಣ ನಾಯ್ಕ, ಶ್ರೀಧರ ಬೈರಪ್ಪ ನಾಯ್ಕ, ಸೈಯದ್ ಜೈನುಲಾಬಿದ್ದೀನ್ ಫಾರೂಕಿ ಸೇರಿದಂತೆ ಒಟ್ಟೂ 16 ಮಂದಿ ಸ್ಪರ್ಧೆಯಲ್ಲಿದ್ದಾರೆ.

ಉಡುಪಿ ಜಿಲ್ಲಾ ಮತಕ್ಷೇತ್ರಕ್ಕೆ ಅಬ್ದುಲ್ ವಹಾಬ್ ಇಬ್ರಾಹಿಂ ಮತ್ತು ತುಳಸೀದಾಸ ಮಾಸ್ತಿ ಮೊಗೇರ ಸ್ಪರ್ಧಿಸಿದ್ದಾರೆ. ಹಿಂದುಳಿದ ವರ್ಗ ಬ 1 ಸ್ಥಾನಕ್ಕೆ ಫಿಲೀಪ್ ಅಲ್ಮೆಡಾ, ಮೆನ್ಯುಯಲ್ ಲೀಮಾ, ಸೈಮನ್ ಡಿಸೋಜಾ ಸ್ಪರ್ಧಿಸಿದರೆ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಗಣಪತಿ ಗೊಯ್ದ ಮೊಗೇರ, ಮಾಸ್ತಿ ದುರ್ಗಪ್ಪ ಮೊಗೇರ, ಮಾಸ್ತಿ ಸಂಕಯ್ಯ ಮೊಗೇರ, ಮೋಹನ ಶಿರಾಲಿಕರ ಸ್ಪರ್ಧಿಸಿದ್ದಾರೆ.

ಪರಿಶಿಷ್ಟ ಪಂಗಡದ 1 ಸ್ಥಾನಕ್ಕೆ ರಾಘವೇಂದ್ರ ದುರ್ಗಯ್ಯ ಗೊಂಡ, ಸಂತೋಷ ನಾಗಯ್ಯ ಗೊಂಡ ಸ್ಪರ್ಧೆಯಲ್ಲಿದ್ದಾರೆ. ವಿಶೇಷವೆಂದರೆ ಸಚಿವ ಮಂಕಾಳ ವೈದ್ಯರ ಪುತ್ರಿ ಬೀನಾ ವೈದ್ಯ ಸಹಕಾರಿ ಕ್ಷೇತ್ರದ ಪದಾರ್ಪಣೆಗೆ ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ಬ್ಯಾಂಕಿನ 11 ಸ್ಥಾನಕ್ಕೆ ಒಟ್ಟೂ 27 ಅಭ್ಯರ್ಥಿಗಳು ಆಯ್ಕೆ ಬಯಸಿ ಕಣದಲ್ಲಿದ್ದು, ಚುನಾವಣೆ ರಂಗೇರಿದೆ.

ಆರೋಗ್ಯ ಪುಷ್ಟಿ ಯೋಜನೆಗೆ ಯಲ್ಲಾಪುರ ತಾಲೂಕು ಆಯ್ಕೆ

ಯಲ್ಲಾಪುರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ನೂತನವಾಗಿ ಜಾರಿಗೊಳಿಸಿರುವ ಆರೋಗ್ಯ ಪುಷ್ಟಿ ಯೋಜನೆಗೆ ರಾಜ್ಯದ ೧೦೨ ತಾಲೂಕುಗಳು ಆಯ್ಕೆಯಾಗಿದ್ದು, ಇದರಲ್ಲಿ ಯಲ್ಲಾಪುರ ತಾಲೂಕು ಕೂಡಾ ಸೇರಿದೆ.೧೮ರಿಂದ ೩೫ ವರ್ಷದ ವಿವಾಹಿತ ಮಹಿಳೆಯರು ಹಾಗೂ ಮಕ್ಕಳಾಗದಿರುವ ಮಹಿಳೆಯರು ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗಿದ್ದು, ೬ ತಿಂಗಳ ವರೆಗೆ ಯೋಜನೆಯ ಸೌಲಭ್ಯ ದೊರಕಲಿದೆ. ಯೋಜನೆಯಡಿ ಬೆಲ್ಲ ೧.ಕೆಜಿ, ಮಿಲೆಟ್ ೧ ಕೆಜಿ, ಹೆಸರುಕಾಳು ೧ ಕೆಜಿ ತೊಗರಿ ೧ ಕೆಜಿ, ಎಣ್ಣೆ ೧ ಕೆಜಿ, ರಾಗಿ ೧ ಕೆಜಿ ಹಾಗೂ ಉಪ್ಪು ೧ ಕೆಜಿ ದೊರಕಲಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

Share this article