ಚುನಾವಣೆ ಗೆಲ್ಲಲು ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಿ

KannadaprabhaNewsNetwork |  
Published : Oct 19, 2025, 01:00 AM IST
೧೮ಬ.ಪೇಟೆ-೧ಬಂಗಾರಪೇಟೆ ನಗರಸಭೆ ಕಚೇರಿಯಲ್ಲಿ ನವೀಕರಣಗೊಂಡ ಸಭಾಂಗಣ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಬಂಗಾರಪೇಟೆಯಲ್ಲಿ ಅಲ್ಪಸಂಖ್ಯಾತರು ವಾಸವಿರುವ ಟಿಪ್ಪು ನಗರ, ಸೇಟ್ ಕಾಂಪೌಂಡ್, ಮರಗಲ್ ಸೇರಿದಂತೆ ಇತರೆ ಪ್ರದೇಶಗಳಲ್ಲಿ ೫ ಕೋಟಿ ರೂ.ಗಳ ವೆಚ್ಚದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವ ಮೂಲಕ ಅಭಿವೃದ್ಧಿ ಮಾಡಲಾಗುತ್ತದೆ. ೧.೨೦ ಕೋಟಿ ವೆಚ್ಚದಲ್ಲಿ ಗಂಗಮ್ಮ ಪಾಳ್ಯದ ಅಂಬೇಡ್ಕರ್ ವೃತ್ತದಿಂದ ರೈಲ್ವೇ ಟ್ರ್ಯಾಕ್‌ವರೆಗೂ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆಮುಂಬರುವ ನಗರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅಷ್ಟು ಸುಲಭದ ಕೆಲಸವಲ್ಲ, ಪಟ್ಟಣದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡು ಚುನಾವಣೆ ಎದುರಿಸಬೇಕು ಎಂದು ಸದಸ್ಯರಿಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ನಗರಸಭೆ ಕಚೇರಿಯಲ್ಲಿ ನವೀಕರಣಗೊಂಡ ಸಭಾಂಗಣ ಉದ್ಘಾಟಿಸಿ ಮಾತನಾಡಿ, ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಮೂಲಕ ಹಲವು ವರ್ಷಗಳ ಕನಸು ನನಸಾಗಿದೆ. ಇದು ನಗರದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.

ನವೀಕರಣಕ್ಕೆ ₹50 ಲಕ್ಷ

ನಗರಸಭೆಯ ಸದಸ್ಯರು ಸಭೆ ನಡೆಸಲು ಸ್ಥಳಾವಕಾಶದ ಕೊರತೆಯಿದ್ದ ಕಾರಣ, ತಾಪಂ ಸಭಾಂಗಣ ಅಥವಾ ಪಿಎಲ್‌ಡಿ ಬ್ಯಾಂಕಿನಲ್ಲಿ ಸಭೆ ಮಾಡುವ ಅನಿವಾರ್ಯತೆ ಇತ್ತು. ಇದನ್ನು ಮನಗೊಂಡು ಸಿಎಂ ಮಂಜೂರಾಗಿದ್ದ ೨೦ ಕೋಟಿ ಅನುದಾನದಲ್ಲಿ ೫೦ ಲಕ್ಷ ವೆಚ್ಚದಲ್ಲಿ ಪುರಸಭೆ ಸಭಾಂಗಣ ನವೀಕರಿಸಿದೆ ಎಂದರು.

ಅಲ್ಪಸಂಖ್ಯಾತರು ವಾಸವಿರುವ ಟಿಪ್ಪು ನಗರ, ಸೇಟ್ ಕಾಂಪೌಂಡ್, ಮರಗಲ್ ಸೇರಿದಂತೆ ಇತರೆ ಪ್ರದೇಶಗಳಲ್ಲಿ ೫ ಕೋಟಿ ರೂ.ಗಳ ವೆಚ್ಚದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವ ಮೂಲಕ ಅಭಿವೃದ್ಧಿ ಮಾಡಲಾಗುತ್ತದೆ. ೧.೨೦ ಕೋಟಿ ವೆಚ್ಚದಲ್ಲಿ ಗಂಗಮ್ಮ ಪಾಳ್ಯದ ಅಂಬೇಡ್ಕರ್ ವೃತ್ತದಿಂದ ರೈಲ್ವೇ ಟ್ರ್ಯಾಕ್‌ವರೆಗೂ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗುತ್ತದೆ. ಪುರಸಭೆ ಬಸ್ ನಿಲ್ದಾಣ, ರಂಗಮಂದಿರ, ಒಳಾಂಗಣ ಕ್ರೀಡಾಂಗಣ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳಿಸಲು ಅನುದಾನ ಮಂಜೂರು ಮಾಡಿದೆ ಎಂದು ಹೇಳಿದರು.ಉದ್ಯಾನವನ ಅಭಿವೃದ್ಧಿಗೆ ₹3 ಕೋಟಿ

ನಗರದ ಹೃದಯ ಭಾಗದ ಪಟ್ಟಾಭಿಷೇಕ ಉದ್ಯಾನವನ ಆಧುನಿಕ ಶೈಲಿಯಲ್ಲಿ ಅಭಿವೃದ್ಧಿಪಡಿಸಲು ೩ ಕೋಟಿ ರೂ.ಗಳನ್ನು ಮಂಜೂರು ಮಾಡಿಸಿದ್ದು, ಕಾಮಗಾರಿ ಪ್ರಾರಂಭಿಸಲು ಹಳೆ ಮರಗಳನ್ನು ಕಟಾವು ಮಾಡಿ ತೆರವುಗೊಳಿಸಲಾಗುತ್ತಿದೆ. ಈ ಕುರಿತು ಯಾರೋ ಮಹಾನುಭಾವ ನ್ಯಾಯಾಧೀಶರಿಗೆ ದೂರು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಉದ್ಯಾನವನದಲ್ಲಿ ಇರುವ ಮರಗಳನ್ನು ಮಾರಾಟ ಮಾಡುತ್ತಿಲ್ಲ. ಬದಲಾಗಿ ಜಿಲ್ಲೆಯಲ್ಲೇ ಮಾದರಿ ಉದ್ಯಾನವನ ನಿರ್ಮಾಣ ಮಾಡಿ ಅಲ್ಲಿ ಆಧುನಿಕ ತಂತ್ರಜ್ಞಾನ ಹೈಡ್ರಾಲಿಕ್ ಜಿಮ್ ಯಂತ್ರೋಪಕರಣಗಳನ್ನು ಅಳವಡಿಸುವ ಮೂಲಕ ಮಾದರಿ ಉದ್ಯಾನವವನ್ನಾಗಿ ಅಭಿವೃದ್ದಿ ಮಾಡಲಾಗುತ್ತದೆ. ಪಾರ್ಕ್‌ನಲ್ಲಿ ಲಘು ಉಪಹಾರದ ಕ್ಯಾಂಟೀನ್ ಹಾಗೂ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದರು.ಫುಟ್‌ಪಾತ್‌ ಒತ್ತುವರಿ ತೆರವು

ಪಟ್ಟಣದಲ್ಲಿನ ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಿ ಉತ್ತಮ ಸಿಸಿ ರಸ್ತೆ ಹಾಗೂ ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗುತ್ತದೆ. ನಗರದ ಚರಂಡಿ ನೀರು ಶುದ್ಧೀಕರಿಸಿ, ಶುದ್ಧ ನೀರನ್ನು ಕೆರೆ ಬಿಟ್ಟು ಅಭಿವೃದ್ಧಿ ಮಾಡಲು ೪ ಕೋಟಿ ಅನುದಾನ ಬಿಡುಗಡೆ ಮಾಡಿಸಿದೆ. ನಗರದ ಹೊರವಲಯದಲ್ಲಿ ೩ ಕೋಟಿ ವೆಚ್ಚದಲ್ಲಿ ಕುರಿ, ಮೇಕೆ, ಕೋಳಿ ಕತ್ತರಿಸಿ ಮಾಂಸ ಮಾರಾಟ ಮಾಡಲು ಮಳಿಗೆಗಳನ್ನು ನಿರ್ಮಿಸಲಾಗುವುದು. ನಗರದಾದ್ಯಂತ ೧೪ ಕೋಟಿ ವೆಚ್ಚದಲ್ಲಿ ಯುಜಿಡಿ ನಿರ್ಮಾಣ ಮಾಡಿ ನಗರದಲ್ಲಿನ ಎಲ್ಲಾ ವಾರ್ಡ್‌ಗಳಿಗೂ ಯರಗೋಳ್ ಜಲಾಶಯದ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವುದಾಗಿ ತಿಳಿಸಿದರು.ಸಮಾರಂಭದಲ್ಲಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ತಹಸೀಲ್ದಾರ್ ಕೆ.ಎನ್.ಸುಜಾತ, ಪುರಸಭೆ ಅಧ್ಯಕ್ಷ ಗೋವಿಂದ, ಉಪಾಧ್ಯಕ್ಷೆ ನಾಗವೇಣಿ ಮಂಜುನಾಥ, ಮಾಜಿ ಪುರಸಭೆ ಅಧ್ಯಕ್ಷರಾದ ಕೆ.ಚಂದ್ರಾರೆಡ್ಡಿ, ಶಂಷುದ್ದೀನ್ ಬಾಬು, ಪರ್ಜಾನಾ ಸುಹೇಲ್, ಸದಸ್ಯರಾದ ಅರುಣಾಚಲ ಮಣಿ, ವಸಂತ, ಎಇಇ ರವಿಕುಮಾರ್, ಸಂತೋಷ್ ಇದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ