ಕನ್ನಡಪ್ರಭ ವಾರ್ತೆ, ಹುಮನಾಬಾದ್ಆಧುನಿಕತೆಯ ಭರಾಟೆಗೆ ಸಿಲುಕಿ ಜನಪದ ಕಲೆಗಳು ನಶಿಸಿ ಹೋಗುತ್ತಿರುವ ಜನಪದ ಕಲೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ರಮೇಶ ಮೈನಳ್ಳಿ ಹೇಳಿದರು.ಪಟ್ಟಣದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿ ಜನಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಶಿಸಿ ಹೋಗುತ್ತಿರುವ ಜನಪದ ಗೀತೆಗಳು, ಹಂತಿಪದಗಳು, ಡೊಳ್ಳಿನಪದ, ಗೀಗಿ ಪದ, ಮೊಹರಂ ಪದ, ಬೀಸುಕಲ್ಲು, ಸೋಬಾನೆ ಪದಗಳು ಹೀಗೆ ಅನೇಕ ಸಂಪ್ರದಾಯ ಹಲವಾರು ರೀತಿ ಜನಪದ ಕಲೆಯ ಹಾಡುಗಳು ಇತ್ತೀಚಿನ ದಿನಗಳಲ್ಲಿ ಆಧುನಿಕ ಭರಾಟೆಗೆ ಜಾನಪದ ಕಲೆ ನಶಿಸಿ ಹೋಗುತ್ತಿದೆ. ಜನರ ಬಾಯಿಂದ ಬಂದ ಶಬ್ದಗಳೇ ಪದಗಳಾಗಿ ಹೊರ ಹೊಮ್ಮಿ ಜಾನಪದವಾಗಿದೆ. ಅದನ್ನು ಉಳಿಸಿ ಬೆಳೆಸುವ ಮೂಲಕ ಜಾನಪದ ಕಲೆಯ ಮಹತ್ವ ಸಾರಬೇಕಿದೆ. ಉತ್ತರ ಕರ್ನಾಟಕ ಜಾನಪದ ಕಲೆಗೆ ಹೆಸರಾಗಿದ್ದು, ಶಿಕ್ಷಕರು ಮಕ್ಕಳಲ್ಲಿ ಪ್ರತಿಭೆಗಳನ್ನು ಗುರುತಿಸಿ ದೇಶ ಸಂಸ್ಕೃತಿ, ಸಂಪ್ರದಾಯ ಹಾಗೂ ಜಾನಪದ ಸಾಹಿತ್ಯ ಹಾಗೂ ಕಲೆಯ ಆಸಕ್ತಿ ಬೆಳೆಸಬೇಕು. ಶಾಲಾ ಮಟ್ಟಲ್ಲಿ ಪ್ರತಿ ವರ್ಷ ಜನಪದ ಹಬ್ಬವಾಗಿ ಆಚರಿಸಬೇಕು ಎಂದು ಹೇಳಿದರು.ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಮುಖ್ಯ ದತ್ತಿ ರಮೇಶ ಗಾದಾ ಮಾತನಾಡಿ, ನಶಿಸಿ ಹೋಗುತ್ತಿರುವ ದೇಶಿ ಸಂಸ್ಕೃತಿ ರೂಢಿಸಿಕೊಳ್ಳ ಬೇಕು. ಅಲ್ಲದೆ ಜಾನಪದ ಕಲೆಗಳ ಮಹತ್ವ ಅರಿತುಕೊಳ್ಳಬೇಕು. ಜಾನಪದ ಕಲೆಗಳ ಬೆಳವಣಿಗೆಗೆ ಮೊದಲ ಆದ್ಯತೆ ಮೇರೆಗೆ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ದಾಟಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆ ಇಂದಿನ ಮಕ್ಕಳಿಗೆ ಕಲಿಸುವ ಒಂದು ಸಣ್ಣ ಪ್ರಯತ್ನ ಮಾಡುವ ಮೂಲಕ ಮಕ್ಕಳಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು. ಪ್ರಾಚಾರ್ಯ ಗೀರಿಶ ಕಠಳ್ಳಿ ಮಾತನಾಡಿ, ಹುಮನಾಬಾದ್ ನಗರ, ಹುಡಗಿ, ಗಡವಂತಿ ಹಾಗೂ ಹಳ್ಳಿಖೇಡ (ಕೆ) ಹೋಬಳಿ ಹಾಗೂ ವಲಯ ಮಟ್ಟದ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯಗಳ ಎರಡು ಸಾವಿರ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗಿ ಯಾಗಿದ್ದರು ಎಂದು ಮಾಹಿತಿ ನೀಡಿದರು.ಸಂಸ್ಥೆಯ ಸದಸ್ಯರಾದ ನಾಗರಾಜ ವಾಸಗಿ, ಅನೀಲ ಪಲ್ಲೆರಿ, ನಾರಾಯಣರಾವ್ ಜಾಜಿ, ಶುಭಂ ವಳಸೆ, ನಂದಕುಮಾರ ಚೀದ್ರಿ, ವೆಂಕ ಟೇಶ್ ಜಾಜಿ, ಜಗದೀಶ್ ಅಗಡಿ, ಕ್ರಷ್ಣ ಚೀದ್ರಿ, ಪ್ರಶಾಂತ ಉದುಗಿರೆ, ಮಹಾದೇವ ರೆಡ್ಡಿ, ಪ್ರಾಚಾರ್ಯಗಳಾದ ಮಲ್ಲಿನಾಥ ಚಿಂಚೋಳಿಕರ್, ಸುಭೆದಾರ, ಪೂಜಾ, ಕೀರಣ ಡೊಂಬಲ್, ಅಕ್ಷಯ ಜಾಜಿ, ಸತ್ಯನಾರಾಯಣ, ರಾಗೀಣಿ, ಸುನೀತಾ ಜಾಧವ, ಮಹೇಶ್ವರಿ ಖ್ಯಾಡೆ, ಚೇತನಾ ಕೋರಿ, ನಾಗಶಟ್ಟಿ ಶೇರಿಕಾರ, ರಮೇಶ ಹುಣಸಗೇರಿ, ಭೀಮರಾವ ಕುಲ್ಕರ್ಣಿ ಸೇರಿದಂತೆ ಅನೇಕರಿದ್ದರು.