ದೇಹ, ಮನಸ್ಸಿಗೆ ಸಾಮರ್ಥ್ಯ ತರುವ ಕ್ರೀಡೆ ಪ್ರೋತ್ಸಾಹಿಸಿ

KannadaprabhaNewsNetwork |  
Published : Mar 15, 2024, 01:22 AM IST
ಫೋಟೊ:೧೪ಕೆಪಿಸೊರಬ-೦೧ : ಸೊರಬ ತಾಲೂಕಿನ ದೇವನಗರಿ ಯಲಸಿ ಗ್ರಾಮದಲ್ಲಿ ಶ್ರೀ ಮಾರಿಕಾಂಬಾ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಹೊನಲು-ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಆರ್ಯ ಈಡಿಗ ಸಂಘದ ತಾಲೂಕು ಅಧ್ಯಕ್ಷ ಹೆಚ್. ಗಣಪತಿ ಉದ್ಘಾಟಿಸಿದರು. | Kannada Prabha

ಸಾರಾಂಶ

ದೇಹ ಮತ್ತು ಮನಸ್ಸಿಗೆ ಶ್ರಮ ನೀಡದ ಕ್ರೀಡಾ ಚಟುವಟಿಕೆಗಳಿಂದ ಆರೋಗ್ಯ ವೃದ್ಧಿಸುವುದಿಲ್ಲ. ಬದಲಾಗಿ ಬದುಕಿನ ದಾರಿಯನ್ನೇ ಕವಲುಗೊಳಿಸುತ್ತವೆ. ಆದ್ದರಿಂದ ಯುವಜನತೆ ಮನಸ್ಸು ಮತ್ತು ದೇಹಕ್ಕೆ ಸಾಮರ್ಥ್ಯ ನೀಡುವ, ಪರಸ್ಪರ ವಿಶ್ವಾಸಕ್ಕೆ ಪೂರಕವಾದ ಕ್ರೀಡೆಗಳನ್ನು ಪ್ರೋತ್ಸಾಹಿಸಿ, ಅವುಗಳಲ್ಲಿ ಭಾಗವಹಿಸಬೇಕು ಎಂದು ಆರ್ಯ ಈಡಿಗ ಸಂಘದ ಅಧ್ಯಕ್ಷ ಎಚ್. ಗಣಪತಿ ಸೊರಬದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ದೇಹ ಮತ್ತು ಮನಸ್ಸಿಗೆ ಶ್ರಮ ನೀಡದ ಕ್ರೀಡಾ ಚಟುವಟಿಕೆಗಳಿಂದ ಆರೋಗ್ಯ ವೃದ್ಧಿಸುವುದಿಲ್ಲ. ಬದಲಾಗಿ ಬದುಕಿನ ದಾರಿಯನ್ನೇ ಕವಲುಗೊಳಿಸುತ್ತವೆ. ಆದ್ದರಿಂದ ಯುವಜನತೆ ಮನಸ್ಸು ಮತ್ತು ದೇಹಕ್ಕೆ ಸಾಮರ್ಥ್ಯ ನೀಡುವ, ಪರಸ್ಪರ ವಿಶ್ವಾಸಕ್ಕೆ ಪೂರಕವಾದ ಕ್ರೀಡೆಗಳನ್ನು ಪ್ರೋತ್ಸಾಹಿಸಿ, ಅವುಗಳಲ್ಲಿ ಭಾಗವಹಿಸಬೇಕು ಎಂದು ಆರ್ಯ ಈಡಿಗ ಸಂಘದ ಅಧ್ಯಕ್ಷ ಎಚ್. ಗಣಪತಿ ಹೇಳಿದರು.

ಬುಧವಾರ ತಾಲೂಕಿನ ಯಲಸಿ ಗ್ರಾಮದಲ್ಲಿ ಶ್ರೀ ಮಾರಿಕಾಂಬಾ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಹೊನಲು-ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಜನಪ್ರಿಯ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಇತ್ತೀಚಿನ ದಿನಗಳಲ್ಲಿ ವಿಶ್ವವ್ಯಾಪಿ ಮನ್ನಣೆ ಪಡೆದಿದ್ದು, ಗ್ರಾಮೀಣ ಯುವಜನತೆ ಪುನಃ ಇಂತಹ ಆರೋಗ್ಯಕರ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತಾಗಿದೆ. ಮೊದಲೆಲ್ಲ ಮಣ್ಣಿನ ಮೇಲೆ ಮಂಡಿ ತರಚಿಕೊಂಡು ಆಡುತ್ತಿದ್ದ ಆಟಗಳಿಗೆ ಈಗ ಹೈಟೆಕ್ ಸ್ಪರ್ಶ ನೀಡಲಾಗಿದೆ. ಮ್ಯಾಟ್ ಮೇಲೆ ಆಡುತ್ತಿರುವುದು ಅಭಿವೃದ್ಧಿ ಪ್ರತೀಕವಾಗಿದೆ ಎಂದರು.

ಗ್ರಾಮದ ಪ್ರಮುಖ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಜನಪದೀಯ ಕ್ರೀಡೆಗಳು ಕೇವಲ ದೇಹದಾರ್ಢ್ಯತೆ ಅಷ್ಟಕ್ಕೇ ಸೀಮಿತವಾಗಿಲ್ಲ. ಪರಸ್ಪರ ಮಾನವೀಕ ಮೌಲ್ಯಗಳನ್ನು ವೃದ್ಧಿಸುತ್ತವೆ. ಸ್ನೇಹಸೇತುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುವ ಕ್ರೀಡೆಗಳು ಸದಾ ಸ್ನೇಹಪೂರ್ವಕವಾಗಿರಲಿ ಎಂದು ಆಶಿಸಿದರು.

ಗ್ರಾಮ ಸಮಿತಿ ಅಧ್ಯಕ್ಷ ಕೆ.ಧರ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ಅನಂತರ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ₹೧೫ ಸಾವಿರ ಗ್ರಾಮದ ವತಿಯಿಂದ, ದ್ವಿತೀಯ ಬಹುಮಾನ ₹೧೦ ಸಾವಿರ ಮಧು ಬಂಗಾರಪ್ಪ ಅಭಿಮಾನಿಗಳ ಬಳಗ ಯಲಸಿ, ತೃತೀಯ ಬಹುಮಾನ ₹೭ ಸಾವಿರ, ಕಕ್ಕರಸಿ ಮಹೇಶ್ ಪೂಜಾರಿ, ನಾಲ್ಕನೇ ಬಹುಮಾನ ₹೫ ಸಾವಿರವನ್ನು ಗ್ರಾಮದ ಗೋವರ್ಧನ್ ನೀಡಿದರು. ನ್ಯೂ ಸ್ಟಾರ್ ತಂಡ, ಮಾರಿಕಾಂಬಾ ಬಾಯ್ಸ್ ಕಡಸೂರು, ಮಾರಿಕಾಂಬಾ ಬಾಯ್ಸ್ ಚಿಕ್ಕಲವತ್ತಿ, ಮಾಧ್ಯವಿಕ ಶಾಲಾ ಮಕ್ಕಳು ಕಕ್ಕರಸಿ ತಂಡಗಳು ಬಹುಮಾನ ಪಡೆದವು.

ಗ್ರಾಮ ಮುಖಂಡರಾದ ಇಸ್ಮಾಯಿಲ್, ವಿ.ವೆಂಕಪ್ಪ, ಎಂ.ಕೃಷ್ಣಪ್ಪ, ಬಿ.ವೀರಭದ್ರಪ್ಪ, ತಂಡಿಗೆ ಗಣಪತಿ, ಬಿ. ಬುಕ್ಕೇಶ, ಲೋಕೇಶ್ ಬಿ. ಇದ್ದರು.

ಶ್ರೀ ಮಾರಿಕಾಂಬಾ ಯುವ ವೇದಿಕೆಯ ಶ್ರೀಧರ, ಗಿರೀಶ, ಅವಿನಾಶ, ಶಶಿಧರ ಈರಿ, ಪ್ರೇಮಕುಮಾರ, ರಾಕೇಶ್, ಅನಿಲ, ಗುರುಪ್ರಸಾದ, ಷಣ್ಮುಖ, ಕೆ.ರವಿ, ಇಶಾಖ್, ರವಿ ಹೊನ್ನಪ್ಪ, ಶಶಿಕುಮಾರ್, ಚೇತನ ಪಂದ್ಯಾವಳಿಯನ್ನು ನಿರ್ವಹಿಸಿದರು.

- - - -೧೪ಕೆಪಿಸೊರಬ೦೧:

ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ತಾಲೂಕು ಅಧ್ಯಕ್ಷ ಎಚ್. ಗಣಪತಿ ಉದ್ಘಾಟಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ