ಮಾನವನ ಜೀವನಕ್ಕೆ ಬೇಕಾದ ಸಂವಿಧಾನವನ್ನು ಬಸವಣ್ಣವರ ರಚಿಸಿದ್ದರು

KannadaprabhaNewsNetwork |  
Published : Dec 02, 2024, 01:16 AM IST
58 | Kannada Prabha

ಸಾರಾಂಶ

ಮಾನವನ ಜೀವನಕ್ಕೆ ಬೇಕಾದ ಸಂವಿಧಾನವನ್ನು ಬಸವಣ್ಣವರ ರಚಿಸಿದ್ದರು ಬಸವಣ್ಣನವರು ಬಹಳ ವರ್ಷಗಳ ಹಿಂದೆಯೇ ಮನುಷ್ಯನಿಗೆ ಬೇಕಾದ ಸಂವಿಧಾನವನ್ನು ಬರೆದು

ಕನ್ನಡಪ್ರಭ ವಾರ್ತೆ ಬೆಟ್ಟದಪುರ

ಪಿರಿಯಾಪಟ್ಟಣ ತಾಲೂಕಿನ ಕೂರ್ಗಲ್ಲು ಗ್ರಾಮದಲ್ಲಿ ನಡೆದ ದಿವಂಗತ ಸುಂದ್ರಮ್ಮ, ದಿವಂಗತ ಬಸವಲಿಂಗಪ್ಪ ಸ್ಮರಣಾರ್ಥ ದತ್ತಿ ಕಾರ್ಯಕ್ರಮ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹೋಬಳಿ ಘಟಕದ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ದಿಂಡಗಾಡು ಮಠದ ಶ್ರೀಅಪ್ಪಾಜಿ ಸ್ವಾಮೀಜಿ ಉದ್ಘಾಟಿಸಿದರು.

ಮೈಸೂರಿನ ಜೆಎಸ್ಎಸ್ ಮಹಿಳಾ ಕಾಲೇಜು ಉಪನ್ಯಾಸಕ ಡಾ.ಡಿ.ಎಂ. ಮಹೇಂದ್ರಮೂರ್ತಿ ಉಪನ್ಯಾಸ ನೀಡಿ, ಮಾನವನ ಜೀವನಕ್ಕೆ ಬೇಕಾದ ಸಂವಿಧಾನವನ್ನು ಬಸವಣ್ಣವರ ರಚಿಸಿದ್ದರು ಬಸವಣ್ಣನವರು ಬಹಳ ವರ್ಷಗಳ ಹಿಂದೆಯೇ ಮನುಷ್ಯನಿಗೆ ಬೇಕಾದ ಸಂವಿಧಾನವನ್ನು ಬರೆದು ಅದರಲ್ಲಿ ಎಲ್ಲರೂ ನಾವೆಲ್ಲರೂ ಒಂದು, ಜಾತಿಭೇದ ಮರೆತು ಮಾನವನ ಜೀವವನ್ನು ಸಾರ್ಥಕ ಪಡಿಸಬೇಕು ಎಂಬ ಉದ್ದೇಶದಿಂದ ವಚನಗಳನ್ನು ಸಿದ್ಧಪಡಿಸಿ ಮಾನವನಿಗೆ ಬೇಕಾದ ಸಂವಿಧಾನವನ್ನು ರಚಿಸಿದ ಏಕೈಕ ಮಹನೀಯ ಬಸವಣ್ಣನವರು, ಆದ್ದರಿಂದ ಕರ್ನಾಟಕ ಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ ಎಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಮಾತನಾಡಿ, ದತ್ತಿ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ತಮಗೆ ಕೈಲಾದ ಹಣವನ್ನು ದತ್ತಿ ಕಾರ್ಯಕ್ರಮಕ್ಕೆ ಮುಡಿಪಾಗಿಟ್ಟಿದ್ದು, ಶರಣ ಸಾಹಿತ್ಯ ಪರಿಷತ್ ಅಭಿವೃದ್ಧಿಗೆ ಹಾಗೂ ಮುಂದಿನ ಪೀಳಿಗೆಗೆ ಶರಣ ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ನೀಡುವಂತೆ ಪೋಷಕರು ಮಕ್ಕಳಿಗೆ ಆಸಕ್ತಿ ತುಂಬಬೇಕೆಂದು ತಿಳಿಸಿದರು ಜಿಲ್ಲಾ ಮುಖಂಡ ಚಂದ್ರಶೇಖರ್ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ಅಭಿವೃದ್ಧಿ ಹೊಂದಬೇಕಾದರೆ ಶಾಲಾ ಕಾಲೇಜು ಆವರಣದಲ್ಲಿ ಪ್ರತಿ ತಿಂಗಳು ಶರಣ ಸಾಹಿತ್ಯ ಪರಿಷತ್ ಕಾರ್ಯಕ್ರಮವನ್ನು ಮಾಡುವುದರಿಂದ ಮಕ್ಕಳಿಗೆ ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ನೀಡುತ್ತದೆ ಎಂದು ತಿಳಿಸಿದರು.

ಶ್ರೀ ಅಪ್ಪಾಜಿ ಸ್ವಾಮೀಜಿ ಮಾತನಾಡಿ, ನಾಡು ನುಡಿಗೆ ಹೆಚ್ಚಿನ ಕೊಡುಗೆ ನೀಡಿದ ಮಹನೀಯರನ್ನು ಶರಣ ಸಾಹಿತ್ಯದ ವಚನದಗಳ ಮೂಲಕ ಅವರಿಗೆ ಗೌರವ ನೀಡುವ ಪರಂಪರೆ ವೀರಶೈವ ಲಿಂಗಾಯತ ಪರಂಪರೆ ಆಗಬೇಕೆಂದು ತಿಳಿಸಿದರು.

ದತ್ತಿ ಕಾರ್ಯಕ್ರಮಕ್ಕೆ ಆರ್ಥಿಕ ಸಹಾಯ ನೀಡಿದ ಕೂರ್ಗಲ್ಲು ಶಿವಕುಮಾರ ಸ್ವಾಮಿ ಹಾಗೂ ಕುಟುಂಬದವರನ್ನು ಅಭಿನಂದಿಸಲಾಯಿತು.

ತಾಲೂಕು ಅಧ್ಯಕ್ಷ ಶಿವಯೋಗಿ, ಸಾಲಿಗ್ರಾಮ ತಾಲೂಕ ಅಧ್ಯಕ್ಷ ಕುಮಾರಸ್ವಾಮಿ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಮೂರ್ತಿ, ಹಾಸನ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ನಿವೃತ್ತ ಶಿಕ್ಷಕ ಪುಟ್ಟರಾಜು, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಶಿಕ್ಷಕ ಧರ್ಮ ಪಾಲ್, ಬೆಟ್ಟದಪುರ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶಿವದೇವ್, ತಾಲೂಕು ರೈತ ಸಂಘದ ಅಧ್ಯಕ್ಷ ಆನಂದ್ ವೀರಪ್ಪ ಶರಣ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಉಪಾಧ್ಯಕ್ಷ ಸುಕನ್ಯಾ, ನಿರ್ದೇಶಕರಾದ ಲತಾ, ಲೀಲಾವತಿ, ವೀಣಾ, ನೇತ್ರ, ವಿಶ್ವೇಶ್ವರಯ್ಯ, ಬಿ.ಸಿ. ರಾಜೇಂದ್ರ, ಬಿ.ಎಸ್. ಮಹದೇವಪ್ಪ, ಶಂಕರ್ ಮಂಜುನಾಥ್, ಶಿವಶಂಕರ್, ಪರಮೇಶ್ ಇದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''