ತಳಕಲ್ಲಿನಲ್ಲಿ ಅನ್ನದಾನೀಶ್ವರ ಶಾಖಾಮಠ ಸ್ಥಾಪನೆ

KannadaprabhaNewsNetwork |  
Published : Nov 29, 2023, 01:15 AM IST
28ಕೆಕೆಆರ್2: ಕುಕನೂರ ತಾಲೂಕಿನ ತಳಕಲ್ಲ ಗ್ರಾಮದಲ್ಲಿ ಮುಂಡರಗಿ ಶ್ರೀ ಜಗದ್ಗರು ಅನ್ನದಾನೀಶ್ವರ ಸಂಸ್ಥಾಮಠದ ಶ್ರೀ ಶಾಖಾಮಠ ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದ ಮುಂಡರಗಿ ಶ್ರೀಗಳು. | Kannada Prabha

ಸಾರಾಂಶ

ತಳಕಲ್ಲ ಗ್ರಾಮದಲ್ಲಿ ಮುಂಡರಗಿ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ಶ್ರೀ ಶಾಖಾಮಠ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಅನ್ನದಾನೀಶ್ವರ ಸಂಸ್ಥಾನಮಠ ನೂರಾರು ಎಕರೆಗಿಂತ ಹೆಚ್ಚು ಭೂ ದಾನವನ್ನು ಸಮಾಜದ ಅಭಿವೃದ್ಧಿಗೆ ನೀಡಿದೆ. ತಲಕಲ್ಲ ಗ್ರಾಮದ ಭಕ್ತರು ಹೃದಯವಂತರು, ಧಾನ ದರ್ಮಗಳ ಗುಣಗಳನ್ನು ಅಳವಡಿಸಿಕೊಂಡು ಸಮಾಜಮುಖಿ ಬದುಕನ್ನು ಸಾಗಿಸುತ್ತಿದ್ದಾರೆ. ಇಂತಹ ಭಕ್ತರಿಗೆ ನಮ್ಮ ಮಠದ ನಾಲ್ಕು ಎಕರೆ ಭೂದಾನ ಮಾಡಿದ್ದು, ಅದರಲ್ಲಿ ೧೦ ಗುಂಟೆ ಜಾಗದಲ್ಲಿ ಕುಕನೂರ ಶ್ರೀಗಳ ನೇತೃತ್ವದಲ್ಲಿ ಶಾಖಾಮಠ ನಿರ್ಮಾಣ ಮಾಡಿರುವುದು ಅತ್ಯಂತ್ಯ ಸಂತೋಷ ತಂದಿದೆ, ಕುಕನೂರ ಶ್ರೀಗಳ ಕಾರ್ಯ ಶ್ಲಾಘನೀಯ ಎಂದರು.

ಕನ್ನಡಪ್ರಭ ವಾರ್ತೆ ಕುಕನೂರು

ಸಾಹಿತ್ಯಿಕ, ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ಸೇವೆ ಸಲ್ಲಿಸುತ್ತಿದೆ ಎಂದು ಮುಂಡರಗಿಯ ಅನ್ನದಾನೀಶ್ವರ ಮಠದ ಡಾ. ನಾಡೋಜ ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ತಳಕಲ್ಲ ಗ್ರಾಮದಲ್ಲಿ ಮುಂಡರಗಿ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ಶ್ರೀ ಶಾಖಾಮಠ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಅನ್ನದಾನೀಶ್ವರ ಸಂಸ್ಥಾನಮಠ ನೂರಾರು ಎಕರೆಗಿಂತ ಹೆಚ್ಚು ಭೂ ದಾನವನ್ನು ಸಮಾಜದ ಅಭಿವೃದ್ಧಿಗೆ ನೀಡಿದೆ. ತಲಕಲ್ಲ ಗ್ರಾಮದ ಭಕ್ತರು ಹೃದಯವಂತರು, ಧಾನ ದರ್ಮಗಳ ಗುಣಗಳನ್ನು ಅಳವಡಿಸಿಕೊಂಡು ಸಮಾಜಮುಖಿ ಬದುಕನ್ನು ಸಾಗಿಸುತ್ತಿದ್ದಾರೆ. ಇಂತಹ ಭಕ್ತರಿಗೆ ನಮ್ಮ ಮಠದ ನಾಲ್ಕು ಎಕರೆ ಭೂದಾನ ಮಾಡಿದ್ದು, ಅದರಲ್ಲಿ ೧೦ ಗುಂಟೆ ಜಾಗದಲ್ಲಿ ಕುಕನೂರ ಶ್ರೀಗಳ ನೇತೃತ್ವದಲ್ಲಿ ಶಾಖಾಮಠ ನಿರ್ಮಾಣ ಮಾಡಿರುವುದು ಅತ್ಯಂತ್ಯ ಸಂತೋಷ ತಂದಿದೆ, ಕುಕನೂರ ಶ್ರೀಗಳ ಕಾರ್ಯ ಶ್ಲಾಘನೀಯ ಎಂದರು.

ಲಿಂಗನಾಯ್ಕನಹಳ್ಳಿ ಶ್ರೀ ಚನ್ನವೀರ ಸ್ವಾಮೀಜಿ ಮಾತನಾಡಿ, ಮುಂಡರಗಿ ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಂತಹ ಪರಂಪರೆವುಳ್ಳ ಮಠದ ಶಾಖಾಮಠವನ್ನು ಇಲ್ಲಿ ಸ್ಥಾಪಿಸಿರುವುದು ಸೂಕ್ತ. ಮಠಗಳ ಮತ್ತು ಗುರುಗಳ ನಿತ್ಯ ದರ್ಶನದಿಂದ ಮನುಷ್ಯ ಸಂಸ್ಕಾರವಂತನಾಗಲು ಸಾಧ್ಯವಾಗುತ್ತದೆ. ಗುರು ಭಕ್ತಿ ದೊಡ್ಡದು ಎಂದರು.

ನೀಲಗುಂದ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಭಕ್ತರು ದುಶ್ಚಟಗಳಿಂದ ಮುಕ್ತರಾಗಬೇಕು. ಮಠಗಳು ಭಕ್ತರಿಂದ ದಾನ ಧರ್ಮಕ್ಕಿಂತ ಭಕ್ತರು ಉತ್ತಮ ಬದುಕು ನಡೆಸುವುದನ್ನು ನೋಡಲು ಇಷ್ಟ ಪಡುತ್ತವೆ. ಭಕ್ತರನ್ನು ಸುಖವಾಗಿಡುವುದೇ ಮಠಗಳ ಕಾರ್ಯ ಎಂದರು.

ಬ್ರಾಹ್ಮೀ ಮೂಹೂರ್ತದಲ್ಲಿ ಗದ್ದುಗೆ ಸ್ಥಾಪನ ಕಾರ್ಯವನ್ನ ಮೈನಹಳ್ಳಿ ಶ್ರೀಗಳು, ಕಂಪ್ಲಿ ಶ್ರೀಗಳು ಮತ್ತು ಸೂರಟೂರಿನ ಶ್ರೀಗಳು ನೇರವೇರಿಸಿದರು. ನಂತರ ಪೂರ್ಣಕುಂಬಾದೋಂದಿಗೆ ಎಲ್ಲಾ ಪೂಜ್ಯರನ್ನು ಗ್ರಾಮಕ್ಕೆ ಸ್ವಾಗತಿಸಲಾಯಿತು.

ಶಾಖಾಮಠದ ಉದ್ಘಾಟನಾ ಅಂಗವಾಗಿ ಐದು ದಿನಗಳ ಪ್ರವಚನ ಸೇವೆಯನ್ನು ಉಮಾಪತಿ ಶಾಸ್ತ್ರೀ, ಅಕ್ಕಮಹಾದೇವಿ ರಾಜೂರು, ಮಲ್ಲಿಕಾರ್ಜುನ ತಳಕಲ್, ಬಸಯ್ಯ ಚಂಡೂರಮಠ ಮತ್ತು ವೀರಭದ್ರಪ್ಪ ಸುಂಕದ ನೇರವೇರಿಸಿದರು, ಪ್ರಾಸ್ತಾವಿಕವಾಗಿ ಮಠದ ಪರಂಪರೆಯನ್ನ ನಿವೃತ್ತ ಪ್ರಾಧ್ಯಪಕ ಆರ್ ಎಲ್ ಪೋಲಿಸ ಪಾಟೀಲ ಮಾತನಾಡಿದರು.

ಕುಕನೂರಿನ ಮಹಾದೇವ ಸ್ವಾಮೀಜಿ, ಯಲಬುರ್ಗಾ ಮುರಡಿ ಮಠದ ಶ್ರೀಗಳು, ಮಂಗಳೂರಿನ ಶ್ರೀಗಳು, ಹಿರೇಸಿಂದೋಗಿ ಶ್ರೀಗಳು, ನರಸಾಪುರ ಶ್ರೀಗಳು, ಬೆದವಟ್ಟಿ ಶ್ರೀಗಳು, ಹಿರೇಮಲ್ಲಿನಕೇರಿ ಶ್ರೀಗಳು, ಹಡಗಲಿ ಶ್ರೀಗಳು, ಇಟಗಿ ಶ್ರೀಗಳು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ