ಕರ್ನಾಟಕ ಏಕೀಕರಣ ಬಳಿಕವೂ ಚಾಮರಾಜನಗರ ಜಿಲ್ಲೆಯಲಿ ಕನ್ನಡ ಉಳಿದಿದೆ: ಸಿ.ಮಂಜುನಾಥ ಪ್ರಸನ್ನ

KannadaprabhaNewsNetwork |  
Published : Dec 02, 2024, 01:19 AM IST
ʼಏಕೀಕರಣ ಬಳಿಕವೂ ಚಾಮರಾಜನಗರ ಜಿಲ್ಲೇಲಿ ಕನ್ನಡ ಉಳಿದಿದೆʼ | Kannada Prabha

ಸಾರಾಂಶ

ಏಕೀಕರಣದ ನಂತರವೂ ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸನಿಹದಲ್ಲಿದ್ದರೂ ಕನ್ನಡದ ವಾತಾವರಣ ಉಳಿಸಿಕೊಂಡ ಜಿಲ್ಲೆ ಎಂದರೆ ಚಾಮರಾಜನಗರ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಸಿ.ಮಂಜುನಾಥ ಪ್ರಸನ್ನ ಹೇಳಿದರು. ಗುಂಡ್ಲುಪೇಟೆಯಲ್ಲಿ ಕನ್ನಡ ಸುವರ್ಣ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸುವರ್ಣ ಸಂಭ್ರಮ

ಗುಂಡ್ಲುಪೇಟೆ: ಏಕೀಕರಣದ ನಂತರವೂ ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸನಿಹದಲ್ಲಿದ್ದರೂ ಕನ್ನಡದ ವಾತಾವರಣ ಉಳಿಸಿಕೊಂಡ ಜಿಲ್ಲೆ ಎಂದರೆ ಚಾಮರಾಜನಗರ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಸಿ.ಮಂಜುನಾಥ ಪ್ರಸನ್ನ ಹೇಳಿದರು.

ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ಸುವರ್ಣ ಸಂಭ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿರುವ ಜನಪದ ಸಿರಿವಂತಿಕೆ ಅನನ್ಯ ಎಂದರು. ಮುಖ್ಯ ಭಾಷಣಕಾರ ಪುರಾತತ್ವ ಸಂಶೋಧಕ ಡಾ.ದೇವರಕೊಂಡಾರೆಡ್ಡಿ ಮಾತನಾಡಿ, ಕರ್ನಾಟಕದ ಇತಿಹಾಸವನ್ನು ತಿಳಿಯಲು ಹೊರಟರೆ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದೆ. ನಾಡಿನ ವೀರರ ಆಳ್ವಿಕೆ, ದಕ್ಷ ಆಡಳಿತ, ದಾನ, ವೀರತ್ವ ಎಲ್ಲವನ್ನು ಶಾಸನಗಳ ಅಧ್ಯಯನದಲ್ಲಿ ತಿಳಿಯಲು ಸಾಧ್ಯ ಎಂದರು.

ಇದುವರೆಗೆ ಅಶೋಕನ ಬ್ರಾಹ್ಮೀ ಲಿಪಿಯ ಮೊದಲ ಶಾಸನ ಮುಂದೆ ಕನ್ನಡ, ತಮಿಳು ಮತ್ತು ತೆಲಗು ಭಾಷೆಯು ಶಿಲೆಯಲ್ಲಿ ರೂಪುತಳೆಯುವ ಪ್ರಕ್ರಿಯೆಯ ಇಂದಿನ ರೂಪದ ಕನ್ನಡವನ್ನು ಸೃಜಿಸಿದೆ. ಸುದೀರ್ಘವಾದ ಭಾಷಾ ಬೆಳವಣಿಗೆಯನ್ನು ಮುಂದುವರಿಸುವ ಹೊಣೆ ನಮ್ಮದೆ. ಆಧುನಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಬೆಳೆಯಬಲ್ಲ ಭಾಷೆ ಕನ್ನಡ ಎಂದು ಶ್ಲಾಘಿಸಿದರು.

ಪುರಸಭೆ ಸದಸ್ಯರಾದ ರಮೇಶ್, ಲೋಕಾಯುಕ್ತ ಎಸ್.ಪಿ. ಸುರೇಶ್ ಬಾಬು, ಪ್ರಾಂಶುಪಾಲ ಬಿ.ಜೆ.ಗೋಪಾಲಕೃಷ್ಣ, ಪುರಸಭೆ ಮಾಜಿ ಸದಸ್ಯ ಬಿ. ಕುಮಾರಸ್ವಾಮಿ, ವಕೀಲ ಸತ್ಯನಾರಾಯಣ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಶೈಲಕುಮಾರ್ ಮಾತನಾಡಿ, ಮೈಸೂರು ರಾಜ್ಯ ಕರ್ನಾಟಕವಾದ ವರ್ಷವೇ ಈ ಕಾಲೇಜು ಪ್ರಾರಂಭವಾಯಿತು. ಈ ಕಾರ್ಯಕ್ರಮಕ್ಕೆ ಕನ್ನಡ ಸುವರ್ಣ ಸಂಭ್ರಮ ಎಂಬ ಹೆಸರಿಟ್ಟು ಸಂಭ್ರಮ ಪಡುವ ವರ್ಷ ಇದೆಂದು ಹೇಳಿದರು. ಪುರಸಭೆ ಅಧ್ಯಕ್ಷ ಕಿರಣ್‌ ಗೌಡ, ಉಪನ್ಯಾಸಕರಾದ ನಾಗೇಂದ್ರ, ತ್ರಲೋಚನ ಒಡೆಯರ್, ಡಾ.ಮಂಜುನಾಥ್, ನಾಗೇಶ್, ಎಚ್.ಎಂ. ಪ್ರಸಾದ್ ಸೇರಿದಂತೆ ಹಲವರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ