ಪೊಲಿಯೊ ಮುಕ್ತ ರಾಷ್ಟ್ರವಾಗಿ ಮುಂದುವರೆಸುವಲ್ಲಿ ಸರ್ವರ ಶ್ರಮ ಅಗತ್ಯ: ಹುಲ್ಲೇಹಳ್ಳಿ ಲಕ್ಷ್ಮಣ್

KannadaprabhaNewsNetwork | Published : Mar 4, 2024 1:15 AM

ಸಾರಾಂಶ

ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೊ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸುವ ಮೂಲಕ ದೇಶವನ್ನು ಪೋಲಿಯೊ ಮುಕ್ತ ರಾಷ್ಟ್ರವಾಗಿ ಮುಂದುವರೆಸುವಲ್ಲಿ ಸರ್ವರ ಶ್ರಮ ಮತ್ತು ಜವಾಬ್ದಾರಿ ಪ್ರಮುಖವಾಗಿದೆ ಎಂದು ಹುಲ್ಲೇಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಂ.ಲಕ್ಷ್ಮಣ್ ಹೇಳಿದರು.

ಹುಲ್ಲೇಹಳ್ಳಿ ಗ್ರಾಪಂ ಕೇಂದ್ರದಲ್ಲಿ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿ ಚಾಲನೆ ನೀಡಿ

ಕನ್ನಡಪ್ರಭ ವಾರ್ತೆ, ಬೀರೂರು

ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೊ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸುವ ಮೂಲಕ ದೇಶವನ್ನು ಪೋಲಿಯೊ ಮುಕ್ತ ರಾಷ್ಟ್ರವಾಗಿ ಮುಂದುವರೆಸುವಲ್ಲಿ ಸರ್ವರ ಶ್ರಮ ಮತ್ತು ಜವಾಬ್ದಾರಿ ಪ್ರಮುಖವಾಗಿದೆ ಎಂದು ಹುಲ್ಲೇಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಂ.ಲಕ್ಷ್ಮಣ್ ಹೇಳಿದರು.

ಹುಲ್ಲೇಹಳ್ಳಿ ಗ್ರಾಮ ಪಂಚಾಯ್ತಿ ಕೇಂದ್ರದಲ್ಲಿ ಭಾನುವಾರ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಮಾರಕ ಖಾಯಿಲೆ ಪೋಲಿಯೊ ಬಾರದಂತೆ ತಡೆಗಟ್ಟುವಲ್ಲಿ 1995ರಿಂದಲೂ ದೇಶವ್ಯಾಪ್ತಿ ಪೋಲಿಯೊ ಹನಿಗಳನ್ನು ಹಾಕುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಭಾರತ ಸೇರಿದಂತೆ ಏಷ್ಯಾದ ಏಳು ರಾಷ್ಟ್ರಗಳನ್ನು ಪೋಲಿಯೊ ಮುಕ್ತ ದೇಶಗಳೆಂದು ಘೋಷಣೆ ಮಾಡಿರುವುದು ಗಮನಾರ್ಹ ಸಂಗತಿ. ಪೋಲಿಯೊ ಹನಿಗಳನ್ನು ಕಡ್ಡಾಯವಾಗಿ ಹಾಕಿಸುವ ಮೂಲಕ ಪೋಲಿಯೊ ತಡೆಗಟ್ಟುವಲ್ಲಿ ಯಶಸ್ವಿಯಾಗೋಣ ಎಂದರು. ವಿಶ್ವ ಆರೋಗ್ಯ ಸಂಸ್ಥೆ ಸಹಯೋಗದಲ್ಲಿ ಕಳೆದ 18 ವರ್ಷಗಳಿಂದ ವಿಶ್ವದ ಪ್ರಮುಖ ಆರೋಗ್ಯ ಕಾರ್ಯಕ್ರಮವಾಗಿ ಯೋಜನೆ ರೂಪಿಸಿ ಸಂಘಟಿತ , ಕ್ರೀಯಾಶೀಲ ಆರೋಗ್ಯ ಸೇವಕರ ಸಹಕಾರದಿಂದ ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿ ಪೋಲಿಯೋ ನಿರ್ಮೂಲನೆ ಕನಸು ಸಹಕಾರಗೊಂಡಿದೆ.

ಭಾರತ ದೇಶ ಪೋಲಿಯೊ ಮುಕ್ತ ರಾಷ್ಟ್ರವಾಗಿದ್ದರೂ ಸಹ ಮುಂಜಾಗ್ರತಾ ಕ್ರಮವಾಗಿ ಈ ಅಭಿಯಾನ ಮುಂದುವರೆಸ ಲಾಗುತ್ತಿದ್ದು, 0-5 ವರ್ಷದ ಪ್ರತಿ ಮಕ್ಕಳು ಆರೋಗ್ಯವಂತರಾಗಿ ಬೆಳೆಯುವಲ್ಲಿ ಪ್ರಾಥಮಿಕವಾಗಿ ಲಭ್ಯ ವಾಗುವ ಎಲ್ಲ ಬಗೆ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸುವಲ್ಲಿ ಪಾಲಕರು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ನಿಮ್ಮ ಮಕ್ಕಳ ಅನಾರೋಗ್ಯಕ್ಕೆ ನೀವೆ ಕಾರಣರಾಗುವಿರಿ ಎಂದರು.

ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರಾದ ಅಂಬಿಕಾ, ಸುಮಾ, ಮೀನಾಕ್ಷಿ, ಸೇರಿದಂತೆ ಗ್ರಾಪಂ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆಯವರು ಹಾಜರಿದ್ದರು.

3 ಬೀರೂರು 1

ಪಲ್ಸ್ ಪೊಲೀಯೋ ಅಂಗವಾಗಿ ಭಾನುವಾರ ಸಮೀಪದ ಹುಲ್ಲೇಹಳ್ಳಿ ಗ್ರಾಮಪಂಚಾಯ್ತಿ ಕೇಂದ್ರದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಎಂ.ಲಕ್ಷ್ಮಣ್ ಮಗುವಿಗೆ ಪೊಲೀಯೋ ಲಸಿಕೆ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Share this article