ಗಣರಾಜ್ಯೋತ್ಸವದ ಹಿಂದಿನ ಇತಿಹಾಸವನ್ನೂ ಪ್ರತಿಯೊಬ್ಬರೂ ತಿಳಿಯಿರಿ

KannadaprabhaNewsNetwork | Published : Jan 27, 2025 12:48 AM

ಸಾರಾಂಶ

ಶಾಸಕ ಸಿ. ಎನ್. ಬಾಲಕೃಷ್ಣ ಸಂವಿಧಾನದ ಆಶೋತ್ತರಗಳ ಬಗ್ಗೆ ಮಾತನಾಡಿ ರಾಜಪ್ರಭುತ್ವವು ಅಂತ್ಯವಾಗಿ ಭಾರತದಲ್ಲಿ ಸಂವಿಧಾನವನ್ನು ಸ್ಥಾಪಿಸಿದ ದಿನವೇ ಜನವರಿ ೨೬ ದೇಶದ ಸಂವಿಧಾನ ಭಾರತೀಯರಿಗೆ ಹೆಮ್ಮೆಯ ದಿನವಾಗಿದೆ. ೨೬ ಜನವರಿ ೧೯೫೦ರಂದು ಸಂವಿಧಾನವನ್ನು ಸ್ಥಾಪನೆ ಮಾಡಲಾಗಿದ್ದು, ಇದರ ಗೌರವಾರ್ಥವಾಗಿ ಗಣರಾಜ್ಯೋತ್ಸವವನ್ನು ಅಸ್ತಿತ್ವಕ್ಕೆ ಬಂದ ದಿನವಾಗಿದ್ದು ಆಚರಿಸಲಾಗುತ್ತದೆ. ಭಾರತೀಯರ ಹೆಮ್ಮೆಯ ದಿನವಾದ ಗಣರಾಜ್ಯ ದಿನದ ಇತಿಹಾಸ ಮತ್ತು ಮಹತ್ವವನ್ನು ಪ್ರತಿಯೊಬ್ಬ ಪ್ರಜೆ ತಿಳಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕು ಆಡಳಿತದ ವತಿಯಿಂದ ೭೬ನೇ ಗಣರಾಜ್ಯೋತ್ಸವವನ್ನು ಭಾನುವಾರ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಶಾಸಕ ಸಿ. ಎನ್. ಬಾಲಕೃಷ್ಣ ಸಂವಿಧಾನದ ಆಶೋತ್ತರಗಳ ಬಗ್ಗೆ ಮಾತನಾಡಿ ರಾಜಪ್ರಭುತ್ವವು ಅಂತ್ಯವಾಗಿ ಭಾರತದಲ್ಲಿ ಸಂವಿಧಾನವನ್ನು ಸ್ಥಾಪಿಸಿದ ದಿನವೇ ಜನವರಿ ೨೬ ದೇಶದ ಸಂವಿಧಾನ ಭಾರತೀಯರಿಗೆ ಹೆಮ್ಮೆಯ ದಿನವಾಗಿದೆ. ೨೬ ಜನವರಿ ೧೯೫೦ರಂದು ಸಂವಿಧಾನವನ್ನು ಸ್ಥಾಪನೆ ಮಾಡಲಾಗಿದ್ದು, ಇದರ ಗೌರವಾರ್ಥವಾಗಿ ಗಣರಾಜ್ಯೋತ್ಸವವನ್ನು ಅಸ್ತಿತ್ವಕ್ಕೆ ಬಂದ ದಿನವಾಗಿದ್ದು ಆಚರಿಸಲಾಗುತ್ತದೆ. ಭಾರತೀಯರ ಹೆಮ್ಮೆಯ ದಿನವಾದ ಗಣರಾಜ್ಯ ದಿನದ ಇತಿಹಾಸ ಮತ್ತು ಮಹತ್ವವನ್ನು ಪ್ರತಿಯೊಬ್ಬ ಪ್ರಜೆ ತಿಳಿಸಬೇಕು ಎಂದರು. ಭಾರತವು ಪ್ರತಿ ವರ್ಷ ಜನವರಿ ೨೬ರಂದು ಗಣರಾಜ್ಯೋತ್ಸವ ಆಚರಿಸುತ್ತದೆ. ಈ ವರ್ಷ ಭಾರತವು ೭೬ನೇ ವರ್ಷದ ಗಣರಾಜ್ಯೋತ್ಸವ ಸಂಭ್ರಮದಲ್ಲಿದೆ. ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಅತ್ಯಂತ ಮಹತ್ವ ದಿನವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ, ಆಗಸ್ಟ್ ೧೫ ಬ್ರಿಟೀಷರಿಂದ ತಾತ್ವಿಕವಾಗಿ ಸ್ವಾತಂತ್ರ್ಯ ಪಡೆದುಕೊಂಡ ದಿನವಾದರೆ, ೧೯೫೦ ಜನವರಿ ೨೬ರಂದು ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಲಾಗಿದ್ದು, ರಾಜಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವವು ಅಸ್ಥಿತ್ವಕ್ಕೆ ಬಂದ ದಿನವಾಗಿದೆ ಎಂದರು.

ತಹಸೀಲ್ದಾರ್‌ ನವೀನ್‌ ಕುಮಾರ್‌ ಇದೇ ಸಂದರ್ಭದಲ್ಲಿ ಮಾತನಾಡಿದರು. ವಿವಿಧ ಶಾಲೆಯ ಮಕ್ಕಳಿಂದ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುಮಾರು ೨೯ಕ್ಕೂ ಹೆಚ್ಚು ಜನರಿಗೆ ಶಾಸಕ ಸಿ. ಎನ್. ಬಾಲಕೃಷ್ಣರವರು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಕುಮಾರ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಹರೀಶ್, ಪುರಸಭಾ ಅಧ್ಯಕ್ಷೆ ಬನಶಂಕರಿ ರಘು, ಟಿಎಪಿಸಿಎಂಎಸ್ ಅಧ್ಯಕ್ಷ ಮರಗೂರು ಅನಿಲ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಲ್. ಪಿ. ಪ್ರಕಾಶ್‌ ಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್. ಎನ್. ಲೊಕೇಶ್ ಮತ್ತಿತರಿದ್ದರು.

Share this article