ಗಿಡಮರಗಳನ್ನು ಬೆಳೆಸುವತ್ತ ಪ್ರತಿಯೊಬ್ಬರಿಗೂ ಒಲವು ಮೂಡಬೇಕು

KannadaprabhaNewsNetwork | Published : Oct 5, 2024 1:43 AM

ಸಾರಾಂಶ

ಪ್ರಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ. ಪ್ರಕೃತಿಯನ್ನು ರಕ್ಷಣೆ ಮಾಡದೆ ಹೋದ ಪಕ್ಷದಲ್ಲಿ ನಾವು ಉಸಿರಾಡಲು ಉತ್ತಮ ಆಮ್ಲಜನಕ ಸಿಗದೇ ನಾವು ಮರಣ ಒಪ್ಪುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜೊತೆಗೆ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಗಾಳಿ, ಬೆಳಕು, ನೀರು ಇವುಗಳು ಸಹ ಪ್ರಕೃತಿಯಲ್ಲಿ ದೊರಕದೆ ಮುಂದಿನ ಪೀಳಿಗೆಯ ನಾಶಕ್ಕೆ ನಾವು ಕೂಡ ಕಾರಣಕರ್ತರಾಗುತ್ತೇವೆ. ಆ ನಿಟ್ಟಿನಿಂದ ಪ್ರತಿಯೊಬ್ಬರೂ ಕೂಡ ಮರ ಗಿಡಗಳನ್ನು ಬೆಳೆಸುವ ಕಡೆ ಹೆಚ್ಚಿನ ಒಲವನ್ನು ತೋರಿಸಬೇಕು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಖಲಂದರ್ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಟೈಮ್ಸ್ ಪಿಯು ಕಾಲೇಜಿನ ಆವರಣದಲ್ಲಿ ಹಸಿರ ಸಿರಿ ಹಾಗೂ ಸಸ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಇದೇ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಖಲಂದರ್ ಮಾತನಾಡಿ, ಪ್ರಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ. ಪ್ರಕೃತಿಯನ್ನು ರಕ್ಷಣೆ ಮಾಡದೆ ಹೋದ ಪಕ್ಷದಲ್ಲಿ ನಾವು ಉಸಿರಾಡಲು ಉತ್ತಮ ಆಮ್ಲಜನಕ ಸಿಗದೇ ನಾವು ಮರಣ ಒಪ್ಪುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜೊತೆಗೆ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಗಾಳಿ, ಬೆಳಕು, ನೀರು ಇವುಗಳು ಸಹ ಪ್ರಕೃತಿಯಲ್ಲಿ ದೊರಕದೆ ಮುಂದಿನ ಪೀಳಿಗೆಯ ನಾಶಕ್ಕೆ ನಾವು ಕೂಡ ಕಾರಣಕರ್ತರಾಗುತ್ತೇವೆ. ಆ ನಿಟ್ಟಿನಿಂದ ಪ್ರತಿಯೊಬ್ಬರೂ ಕೂಡ ಮರ ಗಿಡಗಳನ್ನು ಬೆಳೆಸುವ ಕಡೆ ಹೆಚ್ಚಿನ ಒಲವನ್ನು ತೋರಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ತಾಲೂಕು ಅಧ್ಯಕ್ಷ ಹಾಗೂ ಹಿರಿಯ ವಕೀಲ ಬಿ. ವಿ. ವಿಜಯ್ ಮಾತನಾಡಿ, ಮಕ್ಕಳು ಉತ್ತಮವಾದ ಮರ ಗಿಡಗಳನ್ನು ಬೆಳೆಸುವ ಕಡೆ ಹೆಚ್ಚಿನ ಒಲವನ್ನು ತೋರಿಸಬೇಕು ಇದರಿಂದ ಕಾಲಕಾಲಕ್ಕೆ ಸಮ ಪ್ರಮಾಣವಾಗಿ ಮಳೆ ಬೆಳೆ ಹಾಗೂ ಕುಡಿಯುವ ನೀರು ಮತ್ತು ಉತ್ತಮವಾದ ಗಾಳಿ ಸಹಕಾರಿಯಾಗುತ್ತದೆ. ಈಗಾಗಲೇ ಶೇಕಡ ೨೦ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ ಆದರೆ ಸರ್ಕಾರದ ಆದೇಶದಂತೆ ಶೇಕಡ ೩೫ ರಷ್ಟು ಅರಣ್ಯ ಪ್ರದೇಶವು ಇರಬೇಕು ಹಾಗೂ ಮರ-ಗಿಡಗಳು ಇರಬೇಕು ಮರ ಗಿಡ ನಾಶದಿಂದ ಮನುಕುಲವೂ ಕೂಡ ನಾಶವಾಗುತ್ತಿದೆ ಆದ್ದರಿಂದ ದಯಮಾಡಿ ವಿದ್ಯಾರ್ಥಿಗಳು ಇಂದು ನೀಡುತ್ತಿರುವ ಸಸಿಗಳನ್ನು ತಮ್ಮ ಮನೆಗಳಲ್ಲಿ ಮತ್ತು ಒಲಗದ್ದೆಗಳಲ್ಲಿ ಬೆಳೆಸಲು ಸಹಕಾರಿಯಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಸುಮಾರು ೧೦,೦೦೦ಕ್ಕೂ ಹೆಚ್ಚು ಸಸಿಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.ರೋಟರಿ ಕ್ಲಬ್ ವಿಭಾಗೀಯ ಗೌರ್ನರ್‌ ದೇವಾನಂದ, ಸಹಾಯಕ ಗೌರ್ನರ್ ನಿರ್ಮಲ ಕುಮಾರ್ ಜೈನ್, ಟೈಮ್ಸ್‌ ಪಿಯು ಕಾಲೇಜಿನ ಕಾರ್ಯದರ್ಶಿ ಗಂಗಾಧರ್, ಪರಿಸರ ಪ್ರೇಮಿ ಸಿ. ಎನ್. ಅಶೋಕ್, ರೋಟರಿ ಕ್ಲಬ್ ತಾಲೂಕು ಕಾರ್ಯದರ್ಶಿ ಕುಮುದಾ, ಹರೀಶ್, ಪದ್ಮನಾಭ್‌, ಭರತ್ ಮುಂತಾದವರು ಹಾಜರಿದ್ದರು.

Share this article