ಪ್ರತಿಯೊಬ್ಬರೂ ಸೇವಾ ಭಾವ ಬೆಳೆಸಿಕೊಳ್ಳಿ: ಪ್ರಶಾಂತ್‌ ಕಾರಂತ್‌

KannadaprabhaNewsNetwork |  
Published : Jul 08, 2024, 12:32 AM IST
ಚಿತ್ರ : 7ಎಂಡಿಕೆ3 : ರೋಟರಿ ಮಡಿಕೇರಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಮರಳಿ ನೀಡುವ ಸೇವಾ ಮನೋಭಾವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ರೋಟರಿ ಜಿಲ್ಲೆಯ ಮಾಜಿ ರಾಜ್ಯಪಾಲ ಪ್ರಕಾಶ್‌ ಕಾರಂತ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಮರಳಿ ನೀಡುವ ಸೇವಾ ಮನೋಭಾವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ರೋಟರಿ ಜಿಲ್ಲೆಯ ಮಾಜಿ ರಾಜ್ಯಪಾಲ ಪ್ರಕಾಶ್ ಕಾರಂತ್ ಕರೆ ನೀಡಿದರು.

ನಗರದ ರೋಟರಿ ಸಭಾಂಗಣದಲ್ಲಿ ನಡೆದ ರೋಟರಿ ಮಡಿಕೇರಿಯ 2024- 25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಪದಗ್ರಹಣ ಅಧಿಕಾರಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ರೋಟರಿ ಪದಾಧಿಕಾರಿಗಳು ಬದಲಾದ ಕಾಲಘಟ್ಟಕ್ಕೆ ತಕ್ಕ ಹಾಗೆ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಬೇಕು. ಧನಾತ್ಮಕ ಚಿಂತನೆಗಳ ಮೂಲಕ ಜನಸೇವೆ ಮಾಡಬೇಕು. ಸೇವಾ ಮನೋಭಾವನೆಯ ಸದಸ್ಯರು ರೋಟರಿಗೆ ಅಗತ್ಯವಿದ್ದು, ಮಹಿಳೆಯರು ಸೇರಿದಂತೆ ವೈವಿಧ್ಯಮಯ ಕ್ಷೇತ್ರದಲ್ಲಿರುವ ಪ್ರತಿನಿಧಿಗಳನ್ನು ನೇಮಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಸಮಾಜದಿಂದ ನಾವು ಸಾಕಷ್ಟು ಪಡೆದುಕೊಳ್ಳುತ್ತೇವೆ, ಅದನ್ನು ಮರಳಿ ಸಮಾಜಕ್ಕೆ ನೀಡುವ ಗುಣದೊಂದಿಗೆ ಸೇವೆಯನ್ನು ಮಾಡಬೇಕು ಎಂದು ಪ್ರಕಾಶ್ ಕಾರಂತ್ ತಿಳಿಸಿದರು.

ಸಹಾಯಕ ರಾಜ್ಯಪಾಲ ಡಿ.ಎಂ.ಕಿರಣ್ ಮಾತನಾಡಿ, ಈ ಬಾರಿ ರೋಟರಿ ಜಿಲ್ಲೆಯಲ್ಲಿ 8 ಸೇವಾ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಮಾದಕ ವಸ್ತು ವಿರುದ್ಧ ಜಾಗೃತಿ, ವಾಹನ ಸಂಚಾರಿ ನಿಯಮದ ಅರಿವು, ಅಂಗನವಾಡಿಗಳಿಗೆ ಮೂಲಸೌಲಭ್ಯ ಒದಗಿಸುವುದು, ಪರಿಸರ ರಕ್ಷಣೆ ಪ್ರಮುಖ ಕಾರ್ಯಕ್ರಮಗಳಾಗಿದೆ. ರೋಟರಿ ಸದಸ್ಯರು ಸಮಾಜ ಸೇವೆಯ ಮೂಲಕವೇ ಗಮನಾರ್ಹ ಸಾಧನೆ ಮಾಡಬೇಕು ಎಂದು ಹೇಳಿದರು.

ರೋಟರಿ ವಲಯ ಸೇನಾನಿ ಅನಿತಾ ಪೂವಯ್ಯ ಮಾತನಾಡಿ, ಮ್ಯಾಜಿಕ್ ಆಫ್ ರೋಟರಿ ಎಂಬ ಅಂತಾರಾಷ್ಟ್ರೀಯ ಸಂದೇಶವನ್ನು ಜನತೆಗೆ ಪರಿಣಾಮಕಾರಿಯಾಗಿ ತಲುಪಿಸುವ ಹೊಣೆ ರೋಟರಿ ಸದಸ್ಯರ ಮೇಲಿದೆ. ರೋಟರಿ ಜಾರಿಗೊಳಿಸುತ್ತಿರುವ ಸಾಮಾಜ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿ ಜನತೆಗೆ ತಿಳಿಸಬೇಕು ಎಂದರು.

ರೋಟರಿ ಮಡಿಕೇರಿಯ ನೂತನ ಅಧ್ಯಕ್ಷ ಸುದಯ್ ನಾಣಯ್ಯ ಹಾಗೂ ಕಾರ್ಯದರ್ಶಿ ಪ್ರಿನ್ಸ್ ಪೊನ್ನಣ್ಣ ಅಧಿಕಾರ ಸ್ವೀಕರಿಸಿದರು. ರೋಟರಿ ಪ್ರಮುಖರಾದ ಕೆ.ಸಿ.ಕಾರ್ಯಪ್ಪ, ಬಿ.ಎಂ.ಸೋಮಣ್ಣ ಮತ್ತಿತರರಿದ್ದರು.

PREV

Latest Stories

ಧರ್ಮಸ್ಥಳ ಕೇಸ್‌ ಎನ್‌ಐಎಗೆ ವಹಿಸಿ : ಶಾಗೆ ಕೇರಳ ಸಂಸದ
ಲಾಸ್ಟ್‌ ಬೆಂಚ್‌ ಇಲ್ಲದ ರಾಜ್ಯದ ಮೊದಲ ಶಾಲೆ ಯಲ್ಬುರ್ಗಾದಲ್ಲಿ
ರೈತರು ಜನಸಾಮಾನ್ಯರೊಂದಿಗೆ ಸ್ಪಂದಿಸಿ ಸರ್ವೇ ಕಾರ್ಯ ನಡೆಸಲು ಮನವಿ